ಜು. 1ರಿಂದ ಪಡಿತರರಿಗೆ ಅಕ್ಕಿ ಬದಲು ಹಣ : ತಿಂಗಳಿಗೆ ₹170 ನೀಡಲು ಸರ್ಕಾರ ತೀರ್ಮಾನ
ಹಣ ನೀಡುವ ಬಗ್ಗೆ ವಿವರಿಸಿದ ಸಚಿವ ಮುನಿಯಪ್ಪ, ಈ ಯೋಜನೆ ಅನುಷ್ಠಾನ ಮಾಡಲು (ಪರ್ಯಾಯವಾಗಿ ಹಣ ನೀಡಲು) ಸುಮಾರು ₹700 ಕೋಟಿ ಆಗಲಿದೆ. ಇದು ಪರ್ಯಾಯ ವ್ಯವಸ್ಥೆ ಅಷ್ಟೇ, ಮುಂದೆ ಸರ್ಕಾರ ಟೆಂಡರ್ ಮೂಲಕ ಅಕ್ಕಿ ಪಡೆದು ಅನ್ನ ಭಾಗ್ಯ ಮೂಲಕ ಕಾಂಗ್ರೆಸ್ ಹೇಳಿದಂತೆ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲಾಗುವುದು ಎಂದು ಸಂಪುಟ ತೀರ್ಮಾನ ಬಗ್ಗೆ ವಿವರಿಸಿದರು.
ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಇತರೆ ರಾಜ್ಯಗಳಿಂದ ಅಕ್ಕಿ ದೊರಕದ ಕಾರಣ "ಅನ್ನ ಭಾಗ್ಯ " ಯೋಜನೆಯ ಅನುಷ್ಠಾನಕ್ಕೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಪ್ರಕಾರ ಪಡಿತರಿಗೆ ಪ್ರತಿ ಕೆಜಿಗೆ ₹34 ರಂತೆ ಐದು ಕೆಜಿಗೆ ₹170 ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುತ್ತಿದೆ, ಇದನ್ನ ಹೊರತು ಪಡಿಸಿ ಕಾಂಗ್ರೆಸ್ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಕಳೆದ ತಿಂಗಳು FCI ರಾಜ್ಯಗಳಿಗೆ ಅಕ್ಕಿ ನೀಡಲು ತಿರಸ್ಕಾರ ಕಾರಣ ಕರ್ನಾಟಕ ರಾಜ್ಯಕ್ಕೆ 2.5 ಲಕ್ಷ ಟನ್ ಅಕ್ಕಿ ಈವರೆಗೂ ದೊರಕಿಲ್ಲ. ಜುಲೈ 1 ರಿಂದ ಅನ್ನ ಭಾಗ್ಯ ಯೋಜನೆ ಜಾರಿ ಆಗುವ ಕಾರಣ ಪ್ರತಿ BPL ಕಾರ್ಡ್ ಹೊಂದಿದವರಿಗೆ ಪ್ರತಿ ಕೆಜಿಗೆ ₹34 ರಂತೆ ಒಟ್ಟು ಐದು ಕೆಜಿಗೆ ₹170 ನೀಡಲಾಗುವುದು, ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
ಇದನ್ನೂ ಓದಿ-
ಪಡಿತರ ಚೀಟಿದಾರರಿಗೆ ಅಕ್ಕಿ ಬದಲು ಹಣ!
ಹಣ ನೀಡುವ ಬಗ್ಗೆ ವಿವರಿಸಿದ ಸಚಿವ ಮುನಿಯಪ್ಪ, ಈ ಯೋಜನೆ ಅನುಷ್ಠಾನ ಮಾಡಲು (ಪರ್ಯಾಯವಾಗಿ ಹಣ ನೀಡಲು) ಸುಮಾರು ₹700 ಕೋಟಿ ಆಗಲಿದೆ. ಇದು ಪರ್ಯಾಯ ವ್ಯವಸ್ಥೆ ಅಷ್ಟೇ, ಮುಂದೆ ಸರ್ಕಾರ ಟೆಂಡರ್ ಮೂಲಕ ಅಕ್ಕಿ ಪಡೆದು ಅನ್ನ ಭಾಗ್ಯ ಮೂಲಕ ಕಾಂಗ್ರೆಸ್ ಹೇಳಿದಂತೆ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲಾಗುವುದು ಎಂದು ಸಂಪುಟ ತೀರ್ಮಾನ ಬಗ್ಗೆ ವಿವರಿಸಿದರು.
ಇನ್ನು ₹170 ಗಳನ್ನು ಪಡಿತರ ಚೀಟಿ ಪ್ರಕಾರ ಕುಟುಂಬದ ಯಜಮಾನನ (ಮೊದಲ ಹೆಸರಿಗೆ) ಅಕೌಂಟ್ ಗೆ ಉಳಿದ ಎಲ್ಲಾ ಸದಸ್ಯರ ಹಣ ಟ್ರಾನ್ಸ್ಫರ್ ಮಾಡಲಾಗುವುದು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ 95 % ಅಕೌಂಟ್ ಲಿಂಕ್ ಆಗಿವೆ. ಹೀಗಾಗಿ ಅಮೌಂಟ್ ಹಾಕುತ್ತೇವೆ. ಇದಲ್ಲದೆ ಈ ಪ್ರಕ್ರಿಯೆಗೆ ಅಗತ್ಯವಿರುವ ಇತರ ವ್ಯವಸ್ಥೆಗಳನ್ನು ಕೊಡೋಯ ಮಾಡಿಕೊಳ್ಳುತ್ತೇವೆ ಎಂದು ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದರು.
ಇದೇ ವೇಳೆ ಹಣ ಹಾಕುವುದರಿಂದ ಬೇರೆ ಮಾರ್ಗಕ್ಕೆ ಖರ್ಚು ಆಗಲಿದೆ, ಎಂಬ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಎಚ್ ಕೆ ಪಾಟೀಲ್, ಅಕ್ಕಿ ಕೊಟ್ಟರೆ ಮಾರಿಕೊಂಡು ಹಣ ಪಡೆಯುತ್ತಾರೆ ಎಂಬ ಆರೋಪ ಬಡವರ ಮೇಲೆ ಆರೋಪ ಸರಿಯಲ್ಲ, ಇದು ರಾಜ್ಯದ ಕಲ್ಯಾಣಕ್ಕೆ ಬೇಕಾದ ಯೋಜನೆ ಇದರಿಂದ ಎಲ್ಲರಿಗೂ ಒಳಿತಾಗಲಿದೆ ಎಂದು ಹೇಳಿದರು
ಇದನ್ನೂ ಓದಿ-
ಗೃಹ ಲಕ್ಷ್ಮಿ ಬಗ್ಗೆ ಚರ್ಚೆ:
ಗೃಹ ಲಕ್ಷ್ಮಿ ಯೋಜನೆ ಜುಲೈ 14ರಂದು ಅರ್ಜಿ ಸ್ವೀಕಾರ ಪ್ರಾರಂಭ ಆಗಬಹುದು, ಈ ಬಗ್ಗೆ ಇಂದು ಸಭೆಯಲ್ಲಿ ಚರ್ಚೆ ಆಗಿದೆ. ಈ ಬಗ್ಗೆ ಮುಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿವರಣೆ ನೀಡಲಿದ್ದಾರೆ. ಈ ವರೆಗೆ ನಾವು ಕೊಟ್ಟ ಮಾತನ್ನ ನೆರವೇರಿಸಿದ್ದೇವೆ, ಎಂದು ಯೋಜನೆ ಅನುಷ್ಠಾನ ವಿಳಂಬ ಬಗ್ಗೆ ಸಮರ್ಥನೆ ನೀಡಿದರು.
ಇನ್ನು ಅಕ್ಕಿ ಬದಲು ಹಣ ನೀಡುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ವಚನಭ್ರಷ್ಟ ಸರ್ಕಾರ, ಮೊದಲು ಅಕ್ಕಿ ಕೊಡ್ತಾರೆ ಅಂದ್ರು ಈಗ ಹಣ ಕೊಡ್ತೀದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.