ಬೆಂಗಳೂರು: ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ಹೆಸರನ್ನು ಗದಗನ ಹೊರವಲಯದಲ್ಲಿರುವ ಗ್ರಾಮೀಣ ಅಭಿವೃದ್ಧಿ ವಿವಿಗೆ ಇಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ 


COMMERCIAL BREAK
SCROLL TO CONTINUE READING

ಈಗಾಗಲೇ ಗದಗನ ಹೊರವಲಯದಲ್ಲಿರುವ ಪ್ರಾರಂಭವಾಗಿರುವ ಗ್ರಾಮೀಣ ವಿವಿಗೆ ತೋಂಟದ ಸಿದ್ದಲಿಂಗ ಸ್ವಾಮಿಜಿಗಳ ಹೆಸರನ್ನು ಇಡಲು ಮತ್ತು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.


ಶನಿವಾರದಂದು ಹೃದಯಾಘಾತದಿಂದ ಮೃತಪಟ್ಟಿದ್ದ ಶ್ರೀಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಹಾಗೂ ಸಿದ್ದರಾಮಯ್ಯನವರು ಸೇರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.


ಮಹಾದಾಯಿ ಹೋರಾಟ, ಪೋಸ್ಕೊ ಹೋರಾಟ ಹೀಗೆ ನಾಡಿನ ನೆಲ ಜಲದ ಪ್ರಶ್ನೆಗಳು ಬಂದಾಗ ಮುಂಚೂಣಿಯಲ್ಲಿ ತೋಂಟದ ಸಿದ್ದಲಿಂಗಸ್ವಾಮೀಜಿಗಳು ನಿಲ್ಲುತ್ತಿದ್ದರು. ಹೀಗಾಗಿ ಸ್ವಾಮಿಜಿಗಳಿಗೆ ಈಗ ಜಾತಿ ಮತ ಧರ್ಮಗಳಾಚೆಗೆ ಜನರು ಕಂಬನಿ ಮಿಡಿದಿದ್ದಾರೆ.