ಅಧಿಕಾರಿಗಳ ಬೇಜವಾಬ್ದಾರಿಯನ್ನು ಸರ್ಕಾರ ಸುತಾರಾಂ ಸಹಿಸಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ
ಬರಗಾಲದ ಸಂದರ್ಭವನ್ನು ಸರಿಯಾಗಿ ನಿರ್ವಹಿಸಿ. ಅಧಿಕಾರಿಗಳ ಬೇಜವಾಬ್ದಾರಿಯನ್ನು ಸರ್ಕಾರ ಸುತಾರಾಂ ಸಹಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.
ಮಂಡ್ಯ : ಬರಗಾಲದ ಸಂದರ್ಭವನ್ನು ಸರಿಯಾಗಿ ನಿರ್ವಹಿಸಿ. ಅಧಿಕಾರಿಗಳ ಬೇಜವಾಬ್ದಾರಿಯನ್ನು ಸರ್ಕಾರ ಸುತಾರಾಂ ಸಹಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನ ಜಾನವಾರುಗಳಿಗೆ ಕುಡಿಯುವ ನೀರು, ಆಹಾರ, ಮೇವಿನ ಕೊರತೆ ಆಗಬಾರದು. ಹಣಕ್ಕೆ ತೊಂದರೆ ಇಲ್ಲ. ಅಗತ್ಯವಿದ್ದಷ್ಟು ಕೇಳಿ ಎಂದು ಸೂಚನೆ ನೀಡಿದರು.
ಇದನ್ನೂ ಓದಿ : Daily GK Quiz: ಯಾವುದೇ ಒಬ್ಬ ವ್ಯಕ್ತಿಯು ಸಾವಿನ ನಂತರವೂ ಮಾಡಬಹುದಾದ ಕೆಲಸ ಯಾವುದು..?
ಮುಖ್ಯಮಂತ್ರಿಗಳು ನೀಡಿದ ಸೂಚನೆಗಳ ಹೈಲೈಟ್ಸ್ಗಳು ಹೀಗಿವೆ..
* ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಕೃಷಿ ಇಲಾಖೆಗಳ ಪ್ರಗತಿಗೆ ಪ್ರಥಮ ಆಧ್ಯತೆ ನೀಡಬೇಕು.
* DC, CEO, ಕಾರ್ಯದರ್ಶಿಗಳ ಸಭೆಯಲ್ಲಿ ನಾನು ಕೊಟ್ಟ ಸೂಚನೆಗಳು, ನಿರ್ದೇಶನಗಳು ಚಾಚೂ ತಪ್ಪದೆ ಜಾರಿ ಆಗಿದೆಯಾ ? ಎಷ್ಟು ಜಾರಿ ಆಗಿದೆ ಎನ್ನುವ ಕುರಿತು ಸಭೆಗೆ ಸ್ಪಷ್ಟ ಮಾಹಿತಿ ನೀಡಿ. ತಪ್ಪು ಮಾಹಿತಿ ನೀಡಿದರೆ ಕಠಿ ಕ್ರಮ. ನಮ್ಮನ್ನು ಒಪ್ಪಿಸುವುದಕ್ಕಾಗಿ ಸಭೆಗೆ ತ್ಪಪ್ಪು ಮಾಹಿತಿ ನೀಡಬೇಡಿ.
ಇದನ್ನೂ ಓದಿ: ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ನಿಧಿ ಶೀಘ್ರವೇ ಕೈ ಸೇರಲಿದೆ
* ಬರಗಾಲ ನಿರ್ವಹಣೆಗೆ ಎಷ್ಟೇ ಹಣ ಅಗತ್ಯವಿದ್ದರೂ, ಎಷ್ಟೇ ಕಷ್ಟ ಆದರೂ ಸರ್ಕಾರ ಹಣ ಒದಗಿಸುತ್ತದೆ. ನೀವು ಜನ ಜಾನವಾರುಗಳಿಗೆ ಯಾವುದಕ್ಕೂ ತೊಂದರೆ ಆಗದಂತೆ ಕೆಲಸ ಮಾಡಬೇಕು.
* ಮಾರ್ಚ್, ಏಪ್ರಿಲ್, ಮೇ ತಿಂಗಳಿಗಿಂತ ಹೆಚ್ಚು ವಿದ್ಯುತ್ ಬೇಡಿಕೆ ಇದೆ. ಆಗ 11 ಸಾವಿರ ಮೆಗಾವ್ಯಾಟ್ ಬಳಕೆ ಆಗುತ್ತಿತ್ತು. ಈಗ 15-16 ಸಾವಿರ ಮೆಘಾವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದೆ.
* ರೈತರ ಪಂಪ್ ಸೆಟ್ ಮತ್ತು ಜನರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ನಕಾಶೆ, ಯೋಜನೆ ಸಿದ್ದಪಡಿಸಿ ಅದಕ್ಕೆ ತಕ್ಕಂತೆ ಕ್ರಮ ವಹಿಸಿ.
* ಸದ್ಯ ಕಟಾವಿಗೆ ಬರುವ ಬೆಳೆಗಳನ್ನು ಉಳಿಸಿಕೊಳ್ಳಲು ತೀವ್ರ ನಿಗಾವಹಿಸಿ ಕ್ರಮ ಕೈಗೊಳ್ಳಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.