ತೃತೀಯ ಲಿಂಗಿಗಳ ಸಂಕಷ್ಟ ಪರಿಹರಿಸಲು ಸರ್ಕಾರ ಸಿದ್ಧ: ಸಚಿವ ಆರ್.ಅಶೋಕ್
Minister R Ashok : `ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ`ದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಇನ್ನೂ 20 ಗುಂಟೆ ಜಮೀನನ್ನು ಈ ಆಶ್ರಮಕ್ಕೆ ನೀಡಲು ಸಿದ್ಧ. ಸಮಾಜ ಮನಸ್ಥಿತಿ ಸಹ ಬದಲಾಗಬೇಕಿದೆ ಎಂದರು.
ಬೆಂಗಳೂರು : ತೃತೀಯ ಲಿಂಗಿಗಳ ಅಭ್ಯುದಯಕ್ಕೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಂದಾಯ ಇಲಾಖೆ 20 ಗುಂಟೆ ಜಮೀನನ್ನು ಬೆಂಗಳೂರು ಉತ್ತರದ ಗಂಗೊಂಡನಹಳ್ಳಿಯಲ್ಲಿ ನೀಡಿದೆ. "ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ"ದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಇನ್ನೂ 20 ಗುಂಟೆ ಜಮೀನನ್ನು ಈ ಆಶ್ರಮಕ್ಕೆ ನೀಡಲು ಸಿದ್ಧ. ಸಮಾಜ ಮನಸ್ಥಿತಿ ಸಹ ಬದಲಾಗಬೇಕಿದೆ ಎಂದರು.
ಇದನ್ನೂ ಓದಿ : DK Shivakumar : 2023 ವಿಧಾನಭೆ ಚುನಾವಣೆ : ಕಾಂಗ್ರೆಸ್ನಲ್ಲಿ ದುಡ್ಡಿದ್ದರೆ ಮಾತ್ರ ಆಕಾಂಕ್ಷಿಗಳು ಅರ್ಜಿ!
ಮಕ್ಕಳು ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದರೂ ಸಹ ಸ್ವೀಕರಿಸುತ್ತಾರೆ. ಆದರೆ ಮಾನಸಿಕ ಸ್ಥಿತಿಯಿಂದ ಈ ರೀತಿ ಆದಾಗ, ನಿಷ್ಕರುಣಿಗಳಾಗಿ ಮನೆಯಿಂದ ಹೊರ ಹಾಕುತ್ತಾರೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಆಶ್ರಮದಿಂದ ಮಂಗಲಮುಖಿಯರಿಗೆ ಸೂರು ಸಿಗುವಂತಾಗಲಿ ಎಂದು ತಿಳಿಸಿದರು.
ಮನೆಯಿಂದ ಓಡಿಬಂದವರಿಗೆ ಆಶ್ರಯದ ತಾಣ ಆಗಲಿ. ಸಿಗ್ನಲ್ ಗಳಲ್ಲಿ ಭಿಕ್ಷಾಟನೆ ಮಾಡುವುದು, ಉಳಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ನಿಲ್ಲಲಿ. ಕಟ್ಟಡಕ್ಕೆ ಸರ್ಕಾದಿಂದ ಅನುದಾನವನ್ನು ಸಹ ಕೊಡಿಸಲು ಸಹ ಪ್ರಯತ್ನಿಸುತ್ತೇನೆ. ಸಮಾಜ ಪರಿವರ್ತನೆಗೆ ಇದು ನಾಂದಿಯಾಗಲಿ. ಎಲ್ಲ ಸಂಘ ಸಂಸ್ಥೆಗಳು ಇವರಿಗೆ ನೆರವು ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ಸಾಲು ಮರದ ತಿಮ್ಮಕ್ಕ, ಮಂಜಮ್ಮ ಜೋಗತಿ, ಮಾಜಿ ಶಾಸಕ ಮುನಿರಾಜು, ಶ್ರೀ ಸಂತೋಷ ಗುರೂಜಿ ಆಶ್ರಮ ಸ್ಥಾಪಕರಾದ ಡಾ. ನಕ್ಷತ್ರ ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ : Naga Chaitanya : ಸಮಂತಾರನ್ನು ಭೇಟಿಯಾಗಲಿದ್ದಾರಾ ನಾಗ ಚೈತನ್ಯ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.