DK Shivakumar : 2023 ವಿಧಾನಭೆ ಚುನಾವಣೆ : ಕಾಂಗ್ರೆಸ್​ನಲ್ಲಿ ದುಡ್ಡಿದ್ದರೆ ಮಾತ್ರ ಆಕಾಂಕ್ಷಿಗಳು ಅರ್ಜಿ!

ಕಾಂಗ್ರೆಸ್ ಚುನಾವಣೆಗೆ ಸಿದ್ಧವಾಗುತ್ತಿದೆ.ಸ್ಪರ್ಧೆ ಮಾಡಲು ಭಯಸಿಸದವರಿಗೆ ಅರ್ಜಿ ಆಹ್ವಾನ ಮಾಡಿದ್ದೇವೆ,ಐದನೇ ತಾರಿಖಿನಿಂದ ಅರ್ಜಿ ಆಹ್ವಾನ ಮಾಡುತ್ತೇವೆ.

Written by - Prashobh Devanahalli | Last Updated : Nov 2, 2022, 04:32 PM IST
  • ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳು ಅರ್ಜಿ
  • ಐದು ಸಾವಿರ ಪಕ್ಷಕ್ಕೆ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು
  • ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
DK Shivakumar : 2023 ವಿಧಾನಭೆ ಚುನಾವಣೆ : ಕಾಂಗ್ರೆಸ್​ನಲ್ಲಿ ದುಡ್ಡಿದ್ದರೆ ಮಾತ್ರ ಆಕಾಂಕ್ಷಿಗಳು ಅರ್ಜಿ! title=

ಬೆಂಗಳೂರು : 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕಾದರೆ ಐದು ಸಾವಿರ ಪಕ್ಷಕ್ಕೆ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರ್ಧಾರ ಪ್ರಕಟಿಸಿದ್ದಾರೆ.

ಇಂದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತಾನ್ನಾಡಿದ ಇವರು, ಕಾಂಗ್ರೆಸ್ ಚುನಾವಣೆಗೆ ಸಿದ್ಧವಾಗುತ್ತಿದೆ.ಸ್ಪರ್ಧೆ ಮಾಡಲು ಭಯಸಿಸದವರಿಗೆ ಅರ್ಜಿ ಆಹ್ವಾನ ಮಾಡಿದ್ದೇವೆ,ಐದನೇ ತಾರಿಖಿನಿಂದ ಅರ್ಜಿ ಆಹ್ವಾನ ಮಾಡುತ್ತೇವೆ.

ಇದನ್ನೂ ಓದಿ : Wildlife Service Award 2022: ನವೆಂಬರ್ 5 ರಂದು ಅರಣ್ಯ ವೀಕ್ಷಕ ಫೈರೋಜ್ ವಿವಿಎಎಸ್ ರಿಂದ ಸನ್ಮಾನ

ಅರ್ಜಿಗೆ ಐದು ಸಾವಿರ ಶುಲ್ಕ ಇದೆ,ಅರ್ಜಿ ಕೊಡುವಾಗ ಎರಡು ಲಕ್ಷ ರೂಪಾಯಿ ಡಿಡಿ ಕೊಡಬೇಕು. ಎಸ್ಸಿ, ಎಸ್ಟಿ ಆಕಾಂಕ್ಷಿಗಳಿಗೆ  ಒಂದು ಲಕ್ಷ ಶುಲ್ಕ ನಿಗದಿ ಮಾಡಿದ್ದೇವೆ. ಎಲ್ಲರೂ ಕೂಡ ಅರ್ಜಿ ಹಾಕಬಹುದು. ಮೆಂಬರ್ಶೀಪ್ ಕೂಡ ಅರ್ಜಿ ಜೊತೆ ಲಗತ್ತಿಸಬೇಕು,ಎಂದರು.

ಹಣ ಪಡೆದು ಅರ್ಜಿ ನೀಡುವ ನಿರ್ಧಾರವನ್ನು ಜೀ ಕನ್ನಡ ನ್ಯೂಸ್ ಪ್ರಶ್ನಿಸಿದಾಗ ಉತ್ತರ ನೀಡಿದ ಡಿಕೆ,ನಾವು ಅಧಿಕಾರದಲ್ಲಿ ಇಲ್ಲ,ಹಾಗಾಗಿ ಫಂಡ್ ಕಲೆಕ್ಟ ಮಾಡಬೇಕಿದೆ. ಬಿಲ್ಡಿಂಗ್ ಕಟ್ತಾ ಇದ್ದೇವೆ, ಸಮಾವೇಶಕ್ಕೆ ಹಣ ಖರ್ಚಾಗುತ್ತೆ.

ಜಾಹಿರಾತು ನೀಡಲು ಹಣ ಕೊಡಬೇಕು,ಸಾಕಷ್ಟು ಖರ್ಚು ಪಕ್ಷದಲ್ಲಿ ಇರುತ್ತೆ.ಆದರಿಂದ ಕಾರ್ಯಕರ್ತರಿಂದ ಶುಲ್ಕ ವಸೂಲಿ ಮಾಡುತ್ತಿದ್ದೇವೆ, ಎಂದು ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮರ್ಥಿಸಿಕೊಂಡರು.

ವಲಸೆ ಹೋದವರಿಗೂ ಮುಕ್ತ ಆಹ್ವಾನ:

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಮಾತನಾಡ್ತಿದ್ದೇನೆ, ಯಾರು ಬೇಕಾದರೂ ಬರಬಹುದು.ಅಪ್ಲಿಕೇಶನ್ ಹಾಕುವವರಿಗೆ ಮುಕ್ತ ಅವಕಾಶವಿದೆ. ಯಾರು ಬೇಕಾದ್ರೂ ಬರಲಿ ನೋಪ್ರಾಬ್ಲಂ. ಮೊದಲು ಅವರು ಅರ್ಜಿ ಹಾಕಲಿ, ಆಮೇಲೆ ನಮ್ಮ ಕಮಿಟಿ ಪರಿಶೀಲಿ ಸುತ್ತದೆ,ಎಂದರು. 

ಕರ್ನಾಟಕ ರತ್ನ ಅವಾರ್ಡ್ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ವಿಚಾರ :

ಸರ್ಕಾರಕ್ಕೆ ವ್ಯಂಗ್ಯ ಮಾಡಿದ ಡಿಕೆಶಿವಕುಮಾರ್, ನಿನ್ನೆ ಯಾಕೆ ಸ್ಟೇಜ್ ಹಾಗಾಯ್ತು, ಸ್ಟೇಜ್ ಕಥೆ ಏನಾಯ್ತು? ವೆರಿ ಸಾರಿ ಫಾರ್ ಸ್ಟೇಜ್ ಆರ್ಗನೈಸೆಷನ್. ನಿನ್ನೆ ಆದ ವ್ಯವಸ್ಥೆ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ ಬಳಿಕ ನಾವು ಮಾತಾಡ್ತೇವೆ. ಕರ್ನಾಟಕ ರತ್ನ ರಾಜಕುಮಾರ್ ಗೆ ನೀಡಿದ ಕಾಲದಲ್ಲಿ ನಾನೂ ಇದ್ದೆ ಎಂದರು.

ಇದನ್ನೂ ಓದಿ : TET Exam 2022 : ಇದೆ ತಿಂಗಳ 6 ರಂದು ಟಿಇಟಿ ಪರೀಕ್ಷೆ : ಅಭ್ಯರ್ಥಿಗಳಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ 

ಸರ್ವೋದಯ ಸಮಾವೇಶ ; ಖರ್ಗೆ ಅಭಿನಂದನಾ ಸಮಾವೇಶ:

"ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ,ಅವರಿಗೆ 6 ರಂದು ಅಭಿನಂದನೆ ಇಟ್ಕೊಂಡಿದ್ದೇವೆ. ಬೆಂಗಳೂರಿನಲ್ಲಿ ಕಾರ್ಯಕ್ರಮ‌ ಆಯೋಜಿಸಿದ್ದೇವೆ. 6 ರಂದು ಬೆಳಗ್ಗೆ 10 ಕ್ಕೆ ಇಲ್ಲಿಗೆ ಆಗಮಿಸ್ತಾರೆ. ಅರಮನೆ ಮೈದಾನದಲ್ಲಿ ಸಮಾವೇಶ ಮಾಡ್ತಿದ್ದೇವೆ. ಸರ್ವೋದಯ ಸಮಾವೇಶ ಎಂದು ಹೆಸರು ಕೊಟ್ಟಿದ್ದೇವೆ. ಸಾವಿರಾರು ಕಾರ್ಯಕರ್ತರು ಸ್ವಾಗತ ಮಾಡ್ತಾರೆ, ವಿಮಾನ ನಿಲ್ದಾಣದ ಬಳಿಯೂ ಸ್ಚಾಗತ ಮಾಡ್ತಾರೆ. ಮಧ್ಯಾಹ್ನ 2 ಕ್ಕೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಹೊರಗಿನಿಂದ ಬರುವವರಿಗೆ ಅನುಕೂಲವಾಗಬೇಕು. ಹಾಗಾಗಿ ಮಧ್ಯಾಹ್ನ ಕಾರ್ಯಕ್ರಮ ಇಟ್ಕೊಂಡಿದ್ದೇವೆ".

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News