ಗೃಹಜ್ಯೋತಿ ಯೋಜನೆ ಸಕ್ಸಸ್: ರಾಜ್ಯದಲ್ಲಿ 97 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಅರ್ಜಿ ಸಲ್ಲಿಕೆ
Griha Jyoti Scheme: ದಿನದಿಂದ ದಿನಕ್ಕೆ ಅರ್ಜಿದಾರರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಇದುವರೆಗೆ ಒಟ್ಟು 97, 09, 259 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಇಂದು ಈ ಅರ್ಜಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಒಂದು ಕೋಟಿ ಮೀರುವ ಸಂಭವವಿದೆ.
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಭರ್ಜರಿ ಯಶಸ್ಸು ಸಿಕ್ಕಿದ್ದು, ಈಗಾಗಲೇ ರಾಜ್ಯಾದ್ಯಂತ 97,09,259 ಗ್ರಾಹಕರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ನೊಂದಣಿ ಮಾಡಲಾಗಿದೆ.
ದಿನದಿಂದ ದಿನಕ್ಕೆ ಅರ್ಜಿದಾರರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಇದುವರೆಗೆ ಒಟ್ಟು 97, 09, 259 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಇಂದು ಈ ಅರ್ಜಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಒಂದು ಕೋಟಿ ಮೀರುವ ಸಂಭವವಿದೆ.
ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!
ಹೊಸ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದ್ದು. ರಾಕೆಟ್ ವೇಗದಲ್ಲಿರುವ ಸರ್ವರ್ ಕೆಲಸ ಮಾಡುತ್ತಿದೆ. ಇನ್ನು ಯಾವ ಯಾವ ಎಸ್ಕಾಂಗಳಲ್ಲಿ ಎಷ್ಟು ಅರ್ಜಿ ನೊಂದಣಿ ಆಗಿದೆ ಎಂದು ನೋಡುವುದಾದರೆ;
ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 39,80,901 ಗ್ರಾಹಕರಿಂದ ಅರ್ಜಿ ಸಲ್ಲಿಕೆ
ಚೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 14,95,545 ಜನರಿಂದ ಅರ್ಜಿ ಸಲ್ಲಿಕೆ
ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 10,17,080 ಜನರಿಂದ ಅರ್ಜಿ ಸಲ್ಲಿಕೆ
ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 20,39,277 ಗ್ರಾಹಕರಿಂದ ಅರ್ಜಿ ಸಲ್ಲಿಕೆ
ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 11,29,020ಲಕ್ಷ ಗ್ರಾಹಕರಿಂದ ಅರ್ಜಿ ಸಲ್ಲಿಕೆ
HRECS ವ್ಯಾಪ್ತಿಯಲ್ಲಿ ಒಟ್ಟು 48.436 ಜನರಿಂದ ಅರ್ಜಿ ಸಲ್ಲಿಕೆ
ಇನ್ನು ರಾಜ್ಯಾದ್ಯಂತ ಒಟ್ಟು 97,09,259 ಗ್ರಾಹಕರು ಅರ್ಜಿ ನೊಂದಣಿ ಮಾಡಿಕೊಂಡಿದ್ದಾರೆ.
ಇಂದಾದರೂ ಘೋಷಣೆ ಆಗುತ್ತಾ ವಿಪಕ್ಷ ನಾಯಕನ ಹೆಸರು?
ಕರ್ನಾಟಕದಲ್ಲಿ ಸದ್ಯ ವಿಧಾನಸಭೆ ಬಜೆಟ್ ಅಧಿವೇಶನ ನಡೆಯುತ್ತಿದೆ. ಆದರೆ ಈ ಸೆಷನ್’ನಲ್ಲಿ ಬಿಜೆಪಿ ಮಾತ್ರ ತನ್ನ ಮುಂದಾಳತ್ವ ವಹಿಸಿಕೊಳ್ಳಲು ನಾಯಕನ ನೇಮಕ ಮಾಡದೆ ಭಾಗವಹಿಸಿದೆ. ಇನ್ನು ವಿಪಕ್ಷ ನಾಯಕನ ಆಯ್ಕೆಯನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ಕೇಂದ್ರದ ಇಬ್ಬರು ವೀಕ್ಷಕರ ಸಮ್ಮುಖದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಸದ್ಯ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ್, ಆರಗ ಜ್ಞಾನೇಂದ್ರ ರೇಸ್ ನಲ್ಲಿದ್ದಾರೆ.
ಇದನ್ನೂ ಓದಿ: Ajit Agarkar: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ
ಒಂದು ವೇಳೆ ಲಿಂಗಾಯತ ಸಮುದಾಯಕ್ಕೆ ವಿಪಕ್ಷನಾಯಕನ ಪಟ್ಟ ನೀಡುವುದಾದರೆ ಯತ್ನಾಳ್ ಈ ಬಾರಿ ಪ್ರತಿಪಕ್ಷದ ಗದ್ದುಗೆ ಏರಲಿದ್ದಾರೆ. ಈಗಾಗಲೇ ಅಭಿಪ್ರಾಯ ಸಂಗ್ರಹದೊಂದಿಗೆ ದೆಹಲಿಗೆ ವೀಕ್ಷಕರು ಹಿಂತಿರುಗಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನದೊಳಗೆ ಬಿಜೆಪಿ ತನ್ನ ನಾಯಕ ಯಾರು ಎಂಬುದನ್ನು ರಿವೀಲ್ ಮಾಡಲಿದೆಯೋ ಎಂದು ತಿಳಿದುಬರಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.