Ajit Agarkar: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

Former Indian pacer Ajit Agarkar: ಜ್ಯೇಷ್ಠತೆ (ಒಟ್ಟು ಟೆಸ್ಟ್ ಪಂದ್ಯಗಳ ಸಂಖ್ಯೆ) ಆಧಾರದ ಮೇಲೆ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅಗರ್ಕರ್ ಅವರನ್ನು ಸಮಿತಿ ಶಿಫಾರಸು ಮಾಡಿದೆ.

Written by - Puttaraj K Alur | Last Updated : Jul 4, 2023, 11:37 PM IST
  • ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ನೇಮಕ
  • ಚೇತನ್ ಶರ್ಮಾ ರಾಜೀನಾಮೆ ಬಳಿಕ ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನವು ಫೆಬ್ರವರಿಯಿಂದ ಖಾಲಿ ಇತ್ತು
  • ಅಜಿತ್ ಅಗರ್ಕರ್‍ರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಮೂವರು ವ್ಯಕ್ತಿಗಳ ಕ್ರಿಕೆಟ್ ಸಲಹಾ ಸಮಿತಿ
Ajit Agarkar: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ   title=
ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್

ನವದೆಹಲಿ: ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜೀ ನ್ಯೂಸ್ ಸ್ಟಿಂಗ್ ಆಪರೇಷನ್ ನಂತರ ಚೇತನ್ ಶರ್ಮಾ ರಾಜೀನಾಮೆ ನೀಡಿದ್ದರಿಂದ ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನವು ಫೆಬ್ರವರಿಯಿಂದ ಖಾಲಿ ಇತ್ತು. ಇದೀಗ ಆ ಸ್ಥಾನವನ್ನು 45 ವರ್ಷದ ಅಜಿತ್ ಅಗರ್ಕರ್ ತುಂಬಿದ್ದಾರೆ.

ಅಗರ್ಕರ್ ಅವರು ಈಗಾಗಲೇ ಶಿವಸುಂದರ್ ದಾಸ್, ಸಲೀಲ್ ಅಂಕೋಲಾ , ಸುಬ್ರೋತೊ ಬ್ಯಾನರ್ಜಿ ಮತ್ತು ಎಸ್.ಶರತ್ ಅವರನ್ನು ಒಳಗೊಂಡಿರುವ ಭಾರತ ಪುರುಷರ ಆಯ್ಕೆ ಸಮಿತಿಯ 5ನೇ ಸದಸ್ಯರಾಗಿದ್ದಾರೆ. ಸೋಮವಾರ ಸಂದರ್ಶನ ನಡೆಸಿದ ಅಶೋಕ್ ಮಲ್ಹೋತ್ರಾ, ಸುಲಕ್ಷಣಾ ನಾಯ್ಕ್ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಮೂವರು ವ್ಯಕ್ತಿಗಳ ಕ್ರಿಕೆಟ್ ಸಲಹಾ ಸಮಿತಿ(CAC)ಯು ಅಗರ್ಕರ್ ರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ.

ಇದನ್ನೂ ಓದಿ: M S Dhoni : ʼಕೂಲ್ ಕ್ಯಾಪ್ಟನ್ʼ ಧೋನಿ - ಸಾಕ್ಷಿಗೆ 13ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ

ಜ್ಯೇಷ್ಠತೆ (ಒಟ್ಟು ಟೆಸ್ಟ್ ಪಂದ್ಯಗಳ ಸಂಖ್ಯೆ) ಆಧಾರದ ಮೇಲೆ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅಗರ್ಕರ್ ಅವರನ್ನು ಸಮಿತಿ ಶಿಫಾರಸು ಮಾಡಿದೆ. 191 ಏಕದಿನ ಪಂದ್ಯಗಳನ್ನು ಆಡಿರುವ ಅಗರ್ಕರ್ 5.07 ಎಕಾನಮಿಯೊಂದಿಗೆ 288 ವಿಕೆಟ್ ಕಬಳಿಸಿದ್ದಾರೆ. 26 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 3.39ರ ಎಕಾನಮಿಯೊಂದಿಗೆ 58 ವಿಕೆಟ್‍ಗಳನ್ನು ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಅಗರ್ಕರ್ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ಪರ ಅವರು 42 ಪಂದ್ಯಗಳನ್ನು ಆಡಿದ್ದು, 8.83ರ ಎಕಾನಮಿಯಲ್ಲಿ 29 ವಿಕೆಟ್‍ಗಳನ್ನು ಪಡೆದಿದ್ದಾರೆ.

ಬಿಸಿಸಿಐ ಪುರುಷರ ಆಯ್ಕೆ ಸಮಿತಿ

ಅಜಿತ್ ಅಗರ್ಕರ್ (ಅಧ್ಯಕ್ಷರು), ಶಿವ ಸುಂದರ್ ದಾಸ್, ಸುಬ್ರತೋ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್.

ಇದನ್ನೂ ಓದಿ: Men's Emerging Asia Cup 2023: ಟೀಮ್ ಇಂಡಿಯಾದ ನಾಯಕನಾಗಿ ಯಶ್ ದುಲ್ ನೇಮಕ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News