ಗ್ಯಾರಂಟಿ ಯೋಜನೆ: ಸಿಎಂ ಹೇಳಿದ್ದೇ ಒಂದು, ಸಚಿವರ ಮಾತೇ ಬೇರೆ!
ಇಂದು ಬೆಳಗ್ಗೆ ಬಾಡಿಗೆದಾರರು ಇದರ ಯೋಜನೆ ಪಡೆಯಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರದೇ ಸಂಪುಟದ ಸಚಿವ ಮನೆ ಮಾಲೀಕರಿಗಷ್ಟೇ ಯೋಜನೆ ಎನ್ನುವ ಮೂಲಕ ಗ್ಯಾರಂಟಿ ಯೋಜನೆ ಜಾರಿಯಲ್ಲಿನ ಗೊಂದಲ ಜಗಜ್ಜಾಗಿರಾಗಿದೆ.
ಚಾಮರಾಜನಗರ: ಗೃಹಜ್ಯೋತಿ ಯೋಜನೆಯ ಗೊಂದಲ ಇನ್ನೂ ಮುಂದುವರೆದಿದ್ದು ಸಿಎಂ ಸಿದ್ದರಾಮಯ್ಯ ಒಂದು ರೀತಿ ಹೇಳಿಕೆ ಕೊಟ್ಟರೇ ಸಚಿವ ಕೆ.ವೆಂಕಟೇಶ್ ಮತ್ತೊಂದು ರೀತಿ ಹೇಳಿಕೆ ಕೊಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆ ಬಳಿಕ ಮಾಧ್ಯಮದವರೊಟ್ಟಿಗೆ ಸಚಿವರು ಮಾತನಾಡಿ, ನಾವು ಪ್ರಣಾಳಿಕೆಯಲ್ಲಿ ತಿಳಿಸಿದ ರೀತಿ ಮನೆ ಮಾಲೀಕರು ಇದರ ಯೋಜನೆ ಪಡೆಯುತ್ತಾರೆ, ಬಾಡಿಗೆದಾರನಲ್ಲ, ವಿದ್ಯುಶಕ್ತಿಯ ಗ್ರಾಹಕ ಯಾರಾಗಿರುವನೋ, ಯಾರ ಹೆಸರಿನಲ್ಲಿರುವೋದೋ ಅವರು ಇದರ ಫಲಾನುಭವಿಯಾಗುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ- ತಾನು ಕಳ್ಳ-ಪರರನ್ನು ನಂಬ ಎಂಬಂತಾಗಿದೆ ಬಿಜೆಪಿ ಸ್ಥಿತಿ: ಯುತೀಂದ್ರ ಸಿದ್ದರಾಮಯ್ಯ
ಇಂದು ಬೆಳಗ್ಗೆ ಬಾಡಿಗೆದಾರರು ಇದರ ಯೋಜನೆ ಪಡೆಯಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರದೇ ಸಂಪುಟದ ಸಚಿವ ಮನೆ ಮಾಲೀಕರಿಗಷ್ಟೇ ಯೋಜನೆ ಎನ್ನುವ ಮೂಲಕ ಗ್ಯಾರಂಟಿ ಯೋಜನೆ ಜಾರಿಯಲ್ಲಿನ ಗೊಂದಲ ಜಗಜ್ಜಾಗಿರಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಹೊಂದಾಣಿಕೆ ಇಲ್ಲ ಎಂಬ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ಬಿಜೆಪಿಯವರು ಸುಖಾಸುಮ್ಮನೆ ವಿಚಾರಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ- ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪ್ರತಿಭಟನೆ ; ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದ ಸಿದ್ದರಾಮಯ್ಯ
ಹಸುಗಳನ್ನು ಏಕೆ ಕಡಿಬಾರದು ಎಂಬ ಹೇಳಿಕೆ ವಿವಾದ ಆಗುತ್ತಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ, ಕಾಯ್ದೆ ಬಗ್ಗೆಯೂ ಹೇಳಿದ್ದಾರೆ. ಕಾಯ್ದೆ ಬಗ್ಗೆ ಪರಾಮರ್ಶಿಸುವುದಾಗಿಯೂ ಹೇಳಿದ್ದಾರೆ. ಅವರು ಪ್ರತಿಕ್ರಿಯೆ ಕೊಟ್ಟಿರುವುದರಿಂದ ನಾನೇನು ಮಾತನಾಡಲ್ಲ ಎಂದು ಜಾರಿಕೊಂಡರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.