ಬೆಂಗಳೂರು : ದೇಶದಲ್ಲಿ ಕೊವಿಡ್ ಭೀತಿ ಕಡಿಮೆಯಾಗುತ್ತಿರುವಂತೆಯೇ ಇದೀಗ ಹೊಸ ಆತಂಕ ಎದುರಾಗಿದೆ.  ಇದೀಗ ಹೊಸ ವೈರಸ್ ಕಾಣಿಸಿಕೊಂಡಿದೆ. ಅದುವೇ H2N3 ವೈರಸ್.  ಈ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೆಮ್ಮು ನೆಗಡಿ ಜ್ವರ ಬಂದರೆ ನಿರ್ಲಕ್ಷ ವಹಿಸದಂತೆ ಕೋರಲಾಗಿದೆ. 


COMMERCIAL BREAK
SCROLL TO CONTINUE READING

ದೇಶದ ಅನೇಕ ರಾಜ್ಯಗಳಲ್ಲಿ H2N3 ವೈರಸ್ ಭೀತಿ ಎದುರಾಗಿದೆ. ಬಹುತೇಕರಲ್ಲಿ  ಈ ವೈರಸ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದೆ. ಇದು ILI  ಹಾಗೂ ಸರಿ ಕೇಸ್ ಗಳಿಗೆ ಮಾರಕವಾಗುವ ವೈರಸ್ ಎನ್ನಲಾಗಿದೆ. ಕೆಮ್ಮು , ನೆಗಡಿ ಜ್ವರ ಬಂದರೆ   ನಿರ್ಲಕ್ಷ ವಹಿಸದಂತೆ  ಸೂಚಿಸಲಾಗಿದೆ. 
 
ಇದನ್ನೂ ಓದಿ :  Praveen Nettaru murder case : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಬಂಧನ


ಈ ನಡುವೆ, ವೈರಸ್ ತಡೆಗೆ ಹಾಗೂ ಚಿಕಿತ್ಸೆ ವಿಧಾನದ ಬಗ್ಗೆ ಇಂದು ಸಭೆ ನಡೆಯಲಿದೆ. ಆರೋಗ್ಯ ಸಚಿವ ಡಾ ಸುಧಾಕರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ವಿಧಾನಸೌಧದ ಕೊಠಡಿ 313ರಲ್ಲಿ ಸಭೆ ನಡೆಯಲಿದೆ.  ಸಭೆಯಲ್ಲಿ ತಜ್ಞ ವೈದ್ಯರ ಭಾಗಿಯಾಗಲಿದ್ದಾರೆ. ಇಂದಿನ ಸಭೆಯಲ್ಲಿ ಆರೋಗ್ಯ ಇಲಾಖೆಯಿಂದ ಈ ಕುರಿತು ಗೈಡ್ ಲೈನ್ಸ್ ಬಿಡುಗಡೆ ಸಾಧ್ಯತೆಯಿದೆ. 


ಇದನ್ನೂ ಓದಿ : Chamarajanagar : 14 ವರ್ಷದ ಬಾಲಕಿ ಜೊತೆ ಬಲವಂತದ ಮದುವೆ: ತಾಯಿ-ಮಗನಿಗೆ 20 ವರ್ಷ ಶಿಕ್ಷೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.