Hassan : ಮುಖಕ್ಕೆ ಮಾರಕವಾದ ಮೇಕಪ್ : ಮುಂದೂಡಿದ ಮದುವೆ!

ಆಕೆ ಮದುವೆಯಾಗಲು ತಯಾರಾಗಿ ಹೊಸ ಜೀವನದ ಕನಸು ಕಂಡಿದ್ದಳು, ಹೊಸ ಬಾಳಿನ ಬಾಗಿಲಿಗೆ ಹೊಸ ಕನಸಿನ ಬೆಳಕು ಬರುವ ಮುನ್ನವೇ ಮೇಕಪ್ ಅವಳ ಮುಖವನ್ನು ಗ್ರಹಣದಂತೆ ಆವರಿಸಿ ಕನಸನ್ನು ಕಸಿದುಕೊಂಡಿದೆ. 

Written by - Channabasava A Kashinakunti | Last Updated : Mar 4, 2023, 10:11 PM IST
  • ಆಕೆ ಮದುವೆಯಾಗಲು ತಯಾರಾಗಿ ಹೊಸ ಜೀವನದ ಕನಸು ಕಂಡಿದ್ದಳು
  • ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು
  • ಇಡೀ ಮುಖ ಕಪ್ಪಾಗಿ ಸುಟ್ಟಂತೆ ಆಗಿದೆ
Hassan : ಮುಖಕ್ಕೆ ಮಾರಕವಾದ ಮೇಕಪ್ : ಮುಂದೂಡಿದ ಮದುವೆ! title=

ಹಾಸನ : ಆಕೆ ಮದುವೆಯಾಗಲು ತಯಾರಾಗಿ ಹೊಸ ಜೀವನದ ಕನಸು ಕಂಡಿದ್ದಳು, ಹೊಸ ಬಾಳಿನ ಬಾಗಿಲಿಗೆ ಹೊಸ ಕನಸಿನ ಬೆಳಕು ಬರುವ ಮುನ್ನವೇ ಮೇಕಪ್ ಅವಳ ಮುಖವನ್ನು ಗ್ರಹಣದಂತೆ ಆವರಿಸಿ ಕನಸನ್ನು ಕಸಿದುಕೊಂಡಿದೆ. 

ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯುವತಿಗೆ ಮಾ.2 ಕ್ಕೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಇದಕ್ಕೂ ಮುನ್ನ ಮದುಮಗಳು ಬ್ಯೂಟಿ ಪಾರ್ಲರ್‌ಗೆ ಹೋಗಿ ಮದುವೆ ದಿನದ ಮೇಕಪ್‌ಗೆ ಆರ್ಡರ್ ಮಾಡಿದರು. 10 ದಿನದ ಮೊದಲೇ ಮುಖದ ಕಾಂತಿ ಹೆಚ್ಚಿಸಿಕೊಳ್ಳೋ ಆಸೆಯಿಂದ ಅಲ್ಲೇ ಫೇಷಿಯಲ್ ಸಹ ಮಾಡಿಸಿಕೊಂಡರು. ಬೇಸರದ ಸಂಗತಿ ಎಂದರೆ ಮುಖ ಸ್ವಲ್ಪ ಫೇರ್ ಆಗಲಿ ಅಂತ ಮಾಡಿಸಿಕೊಂಡ ಫೇಷಿಯಲ್ ಮರುದಿನವೇ ವಧುವಿನ ಮುಖವನ್ನೇ ವಿಕಾರ ಮಾಡಿಬಿಟ್ಟಿದೆ. 

ಇದನ್ನೂ ಓದಿ : ಡಿಜೆಹಳ್ಳಿ ಪೊಲೀಸರ ಭರ್ಜರಿ ಆಪರೇಷನ್ : 413 ಕೆಜಿ ಗಾಂಜಾ ಸೀಜ್..!

ಇಡೀ ಮುಖ ಕಪ್ಪಾಗಿ ಸುಟ್ಟಂತೆ ಆಗಿದೆ. ಇದರಿಂದ ಆತಂಕಗೊಂಡ ಯುವತಿಯನ್ನು ಕೂಡಲೇ ನಗರದ ಶಿವಕುಮಾರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮದುಮಗಳ ಮುಖ ಸಂಪೂರ್ಣ ಅಂದಗೆಟ್ಟಿರುವುದರಿಂದ ನಿಶ್ಚಯವಾಗಿದ್ದ ಮದುವೆ ರದ್ದಾಗಿದೆ. ಸದ್ಯ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ನಂತರ ಬ್ಯೂಟಿಷಿಯನ್ ಹಾಗೂ ಮದುಮಗಳ ಕಡೆಯವರ ರಾಜಿ ಸಂಧಾನದಿAದ ಪ್ರಕರಣ ಇತ್ಯರ್ಥವಾಗಿದೆ. ಆದರೆ ಮೇಕಪ್ ನಂತರ ಯುವತಿ ಮುಖ ಚಹರೆ ಬದಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ತನ್ನದಲ್ಲದ ತಪ್ಪಿಗೆ ಯುವತಿಗೆ ಆಗಿರೋ ಯಡವಟ್ಟು ಅರಿತ ಸ್ವಂತ ಸಂಬಂದಿ ಆಗಿರುವ ವರನ ಕಡೆಯವರು, ಕೆಲ ದಿನ ಮದುವೆ ಮುಂದೂಡಿ ನಂತರ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಇದರಿಂದ ದಿಢೀರ್ ಆತಂಕ ಸೃಷ್ಟಿಸಿದ್ದ ಪ್ರಕರಣ ಸುಖಾಂತ್ಯವಾದಂತಾಗಿದೆ, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಯುವತಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಶಿವಕುಮಾರ್ ಮಾತನಾಡಿ, ಇದು ಕೆಮಿಕಲ್ ರಿಯಾಕ್ಷನ್‌ನಿಂದ ಆಗೋ ಅವಾಂತರ. ಹೀಗಾಗಿ ಬ್ಯೂಟಿಷಿಯನ್‌ಗಳು ತಮ್ಮ ಬಳಿ ಬರೋ ಗ್ರಾಹಕರ ಬಗ್ಗೆ ತಿಳಿದುಕೊಂಡು ಮೇಕಪ್ ಮಾಡಬೇಕು. ಆಗ ಇಂತಹ ಯಡವಟ್ಟು ಆಗೋದಿಲ್ಲ, ಅವರು ಈ ಹಿಂದೆ ಬಳಸುತ್ತಿದ್ದ ಮೇಕಪ್ ಯಾವುವು, ಅವರ ಚರ್ಮದ ಗುಣ ಎಂತಹದು, ಏನಾದ್ರು ಅಲರ್ಜಿ ಇದೆಯಾ, ಮೊದಲಾದ ಮಾಹಿತಿ ಪಡೆದು ಮೇಕಪ್ ಮಾಡಿದರೆ ಈ ರೀತಿ ಆಗೋದನ್ನು ತಪ್ಪಿಸಬಹುದು. ಸದ್ಯ ಯುವತಿ ಚಿಕಿತ್ಸೆ ಬಳಿಕ ಚೇರಿಸಿಕೊಂಡಿದ್ದಾರೆ. ಎರಡು-ಮೂರು ವಾರದಲ್ಲಿ ಅವರ ಮುಖ ಮೊದಲಿನಂತೆ ಆಗಲಿದ್ದು, ಯಾವುದೇ ಸಮಸ್ಯೆ ಇಲ್ಲ, ಆದರೆ ಬ್ಯೂಟಿ, ಮೇಕಪ್ ಅಂತಾ ತಲೆ ಕೆಡಸಿಕೊಳ್ಳೋ ಮೊದಲು ಆತುರ ಮಾಡದೆ ಆಲೋಚಿಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : Madal bribe case : ಟ್ರ್ಯಾಪ್‌ನಲ್ಲಿ ಲಾಕ್ ಆದ ಪ್ರಶಾಂತ್‌ಗೆ ಮತ್ತೊಂದು ಶಾಕ್..! ಮಾಡಾಳ್‌ಗೆ 'ಲೋಕಾ' ತಲಾಶ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News