ಬೆಂಗಳೂರು : ಭಾರತೀಯರ ಹೆಮ್ಮೆಯ ಸಂಸ್ಥೆಗಳಾದ ಎಚ್ಎಎಲ್ ಹಾಗೂ ಬಿಇಎಲ್ ₹2,400 ಕೋಟಿ ಮೊತ್ತದ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. ಮೇಕ್ ಇಂಡಿಯಾ ಯೋಜನೆಯಡಿ ತೇಜಸ್ ಲಘು ಯುದ್ಧ ವಿಮಾನಗಳ ಉತ್ಪಾದನೆಗಾಗಿ 20 ವಿವಿಧ ಪ್ರಕಾರದ ಸಿಸ್ಟಮ್ ಗಳ ಅಭಿವೃದ್ಧಿ ಮತ್ತು ಪೂರೈಕೆಗೆ ಸಂಬಂಧಪಟ್ಟಂತೆ ಎರಡೂ ಸಂಸ್ಥೆಗಳು ಈ ಒಪ್ಪಂದ ಮಾಡಿಕೊಂಡಿವೆ.


COMMERCIAL BREAK
SCROLL TO CONTINUE READING

2023 ರಿಂದ 2028 ರ ನಡುವೆ ಅಂದರೆ 5 ವರ್ಷಗಳ ಅವಧಿಯ ಈ ಒಪ್ಪಂದ 2400 ಕೋಟಿ ರೂಪಾಯಿ ಮೊತ್ತದ್ದಾಗಿದೆ. ವಿಮಾನ ನಿಯಂತ್ರಣ ಕಂಪ್ಯೂಟರ್ಸ್, ವಿಮಾನದ ರಾತ್ರಿ ಸಂಚಾರಕ್ಕೆ ಅಗತ್ಯವಾಗುವ ಸಾಧನಗಳು, 'ಲೈನ್ ರೀಪ್ಲೆಸಬಲ್ ಯುನಿಟ್' ಸೇರಿದಂತೆ ಹಲವು ಸಾಧನಗಳನ್ನು ಬಿಇಎಲ್ ಪೂರೈಸಲಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ 'ಆತ್ಮನಿರ್ಭರ್ ಭಾರತ್' ಅಭಿಯಾನ ಉತ್ತೇಜಿಸುವ ನಿಟ್ಟಿನಲ್ಲಿ ಎಚ್ಎಎಲ್ ಹಾಗೂ ಬಿಇಎಲ್ ಒಪ್ಪಂದ ಮಹತ್ವ ಹೆಜ್ಜೆಯಾಗಿದೆ.


ಇದನ್ನೂ ಓದಿ : Anekal Lake : ಬೆಂಗಳೂರಿಗೆ ಕಾರ್ಖಾನೆಗಳೇ ಕಂಟಕ : ಕೆರೆಗಳ ಒಡಲು ತುಂಬುತ್ತಿರುವ 'ಕೆಮಿಕಲ್ಸ್'!


ರಕ್ಷಣಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು


ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(HAL and BEL) ಎರಡೂ ಸಂಸ್ಥೆಗಳು ಸರ್ಕಾರಿ ಸ್ವಾಮ್ಯದ ಕಂಪನಿಗಳಾಗಿದ್ದು, ಇಷ್ಟು ದೊಡ್ಡ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿರುವುದು ಇತಿಹಾಸ ನಿರ್ಮಿಸಿದೆ. ಹಾಗೇ ದೇಶದ ರಕ್ಷಣಾ ಉಪಕರಣಗಳ ಉತ್ಪಾದನಾ ವಲಯದಲ್ಲೂ ಇದು ಹೊಸ ಮೈಲಿಗಲ್ಲು.


ಜಾಗತಿಕ ಮನ್ನಣೆ


ಜಗತ್ತಿನಾದ್ಯಂತ ರಕ್ಷಣಾ ಉತ್ಪನ್ನಗಳನ್ನು ಪೂರೈಸುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದು. ಅದರಲ್ಲೂ ಭಾರತೀಯರ ಹೆಮ್ಮೆಯ ಎಚ್ಎಎಲ್(HAL) ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಇದೀಗ ಬಿಇಎಲ್ ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಜಗತ್ತು ಭಾರತದತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿದೆ ಎಚ್ಎಎಲ್.


ಇದನ್ನೂ ಓದಿ : Bengaluru Road accident:ತಿಂಗಳೊಂದಕ್ಕೆ ಸಂಭವಿಸುತ್ತವೆ ಸರಾಸರಿ 5,000 ರಸ್ತೆ ಅಪಘಾತಗಳು, ಕಾರಣ.!?


ಬಿಇಎಲ್(BEL) ಜೊತೆಗಿನ ₹2400 ಕೋಟಿ ಮೊತ್ತದ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ಎಎಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್, ಎಲ್ ಸಿಎ ತೇಜಸ್ ಯೋಜನೆಯು ಎಚ್ಎಎಲ್ ಮತ್ತು ಡಿಆರ್ ಡಿಒ ಹಾಗೂ ಬಿಇಎಲ್ ರೀತಿಯ ಭಾರತೀಯ ರಕ್ಷಣಾ ಸಂಸ್ಥೆಗಳ ನಡುವಿನ ವ್ಯಾವಹಾರಿಕ ಪಾಲುದಾರಿಕೆಗೆ ಅತ್ಯುತ್ತಮ ಉದಾಹರಣೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬಿಇಎಲ್ ವ್ಯವಸ್ಥಾಪಕ ನಿರ್ದೇಶಕರಾದ ಆನಂದಿ ರಾಮಲಿಂಗಂ ಅವರು ಕೂಡ ಈ ಐತಿಹಾಸಿಕ ಒಪ್ಪಂದದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.