Smoking in Public Place: 'ಧಮ್' ಹೊಡೆಯೋರೆ ಎಚ್ಚರ..! ₹2 ಲಕ್ಷ ದಂಡ ವಸೂಲಿ ಮಾಡಿದ ಪೊಲೀಸರು..!

Smoking in Public Place: ಬೊಮ್ಮನಹಳ್ಳಿಯಿಂದ ಕೂಗಳತೆ ಬಂಡೇಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಧೂಮಪಾನಿಗಳಿಗೆ ತಕ್ಕಪಾಠ ಕಲಿಸಲಾಗಿದೆ. ಶಾಲೆ, ಕಾಲೇಜುಗಳು ಸೇರಿದಂತೆ ಬಸ್ ನಿಲ್ದಾಣ, ದೇವಾಸ್ಥಾನ, ರಸ್ತೆ, ಆಸ್ಪತ್ರೆ ಸುತ್ತಮುತ್ತ ಯಾರೇ ಧಮ್ ಹೊಡೆದು ತಗಲಾಕ್ಕೊಂಡ್ರು ಅವರ ವಿರುದ್ಧ ಕೇಸ್ ದಾಖಲಿಸಿ, 200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 

Written by - Zee Kannada News Desk | Last Updated : Dec 16, 2021, 02:41 PM IST
  • ಶಾಲೆ, ಕಾಲೇಜುಗಳು ಸೇರಿದಂತೆ ಬಸ್ ನಿಲ್ದಾಣ, ದೇವಾಸ್ಥಾನ, ರಸ್ತೆ, ಆಸ್ಪತ್ರೆ ಸುತ್ತಮುತ್ತ ಯಾರೇ ಧಮ್ ಹೊಡೆದು ತಗಲಾಕ್ಕೊಂಡ್ರು ಅವರ ವಿರುದ್ಧ ಕೇಸ್
  • ಬೆಂಗಳೂರು ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಅಲರ್ಟ್ ಆಗಿ, ಧೂಮಪಾನಿಗಳ ವಿರುದ್ಧ ಖಡಕ್ ಕ್ರಮ
  • ಬಂಡೇಪಾಳ್ಯ ಠಾಣೆ ಪೊಲೀಸರು ಅಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದವರ ವಿರುದ್ಧ ಕೇಸ್
Smoking in Public Place: 'ಧಮ್' ಹೊಡೆಯೋರೆ ಎಚ್ಚರ..! ₹2 ಲಕ್ಷ ದಂಡ ವಸೂಲಿ ಮಾಡಿದ ಪೊಲೀಸರು..! title=
Smoking In Public Place

ಬೆಂಗಳೂರು: ಸಿಕ್ಕ ಸಿಕ್ಕ ಕಡೆ ಸಿಗರೇಟ್ ಸೇದ್ತೀರಾ..? ಸಾರ್ವಜನಿಕ ಸ್ಥಳಗಳಲ್ಲಿ 'ಧಮ್' ಹೊಡೆದು ಹೊಗೆ ಬಿಡ್ತೀರಾ..? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು. ಯಾಕಂದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕ್ ಮಾಡುವವರಿಂದ ಪೊಲೀಸರು ಭಾರಿ ಪ್ರಮಾಣದ ದಂಡ ವಸೂಲಿ ಮಾಡಿದ್ದಾರೆ.

ಒಂದೇ ಠಾಣೆ ವ್ಯಾಪ್ತಿಯಲ್ಲಿ ಕಳೆದ 40 ದಿನದಿಂದ ಬರೋಬ್ಬರಿ ₹2 ಲಕ್ಷ ದಂಡ ವಸೂಲಿ ಮಾಡಿದ್ದಾರೆ ಪೊಲೀಸರು. ಬೆಂಗಳೂರಿನ ಬಂಡೇಪಾಳ್ಯ ಠಾಣೆ ಪೊಲೀಸರು ಧೂಮಪಾನದ ವಿರುದ್ಧ ಸಮರ ಸಾರಿದ್ದು, 40 ದಿನಗಳಲ್ಲಿ ಧೂಮಪಾನಿಗಳ ವಿರುದ್ಧ (Smoking in Public Place) 1,000 ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ 2 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಇದನ್ನೂ ಓದಿ- KPSC ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ

ತಗಲಾಕ್ಕೊಂಡ್ರೆ ಕೇಸ್ ಪಕ್ಕಾ..!
ಬೊಮ್ಮನಹಳ್ಳಿಯಿಂದ ಕೂಗಳತೆ ಬಂಡೇಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಧೂಮಪಾನಿಗಳಿಗೆ ತಕ್ಕಪಾಠ ಕಲಿಸಲಾಗಿದೆ. ಶಾಲೆ, ಕಾಲೇಜುಗಳು ಸೇರಿದಂತೆ ಬಸ್ ನಿಲ್ದಾಣ, ದೇವಾಸ್ಥಾನ, ರಸ್ತೆ, ಆಸ್ಪತ್ರೆ ಸುತ್ತಮುತ್ತ ಯಾರೇ ಧಮ್ ಹೊಡೆದು ತಗಲಾಕ್ಕೊಂಡ್ರು ಅವರ ವಿರುದ್ಧ ಕೇಸ್ ದಾಖಲಿಸಿ, 200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಅಂದಹಾಗೆ ಬೆಂಗಳೂರು (Bengaluru) ಆಗ್ನೇಯ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿದ್ದ ಜನ ಸಂಪರ್ಕ ಸಭೆಯಲ್ಲಿ ಈ ಕುರಿತು ದೂರುಗಳು ಕೇಳಿ ಬಂದಿದ್ದವು. 
 
ಇದನ್ನೂ ಓದಿ- ಆಸ್ತಿಗಾಗಿ ಅಜ್ಜಿಯನ್ನೂ ಬಿಡದ ಕೀಚಕರು: 98 ವರ್ಷದ ವೃದ್ಧೆ ಕಿಡ್ನಾಪ್

ದೂರು ನೀಡಿದ್ದ ಜನ:
ಬೆಂಗಳೂರು ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಅಲರ್ಟ್ ಆಗಿ, ಧೂಮಪಾನಿಗಳ ವಿರುದ್ಧ ಖಡಕ್ ಕ್ರಮ ಕೈಗೊಳ್ಳಲು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಸೂಚಿಸಿದ್ದರು. ಬಂಡೇಪಾಳ್ಯ ಠಾಣೆಯ ಇನ್ಸ್ ಪೆಕ್ಟರ್ ಎಲ್‌.ವೈ.ರಾಜೇಶ್ ಗೂ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಹೀಗಾಗಿ ಬಂಡೇಪಾಳ್ಯ ಠಾಣೆ ಪೊಲೀಸರು ಅಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದವರ ವಿರುದ್ಧ ಕೇಸ್ ದಾಖಲಿಸಿ, ಬರೋಬ್ಬರಿ 2 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News