ಹಲಾಲ್ ಕಟ್ ವಿವಾದಕ್ಕೆ ಸೊಪ್ಪು ಹಾಕದ ಖರೀದಿದಾರರು- ಹೊಸತೊಡಕು ಭರ್ಜರಿ ಖರೀದಿ
ನಗರದಲ್ಲಿ ಯುಗಾದಿ ಹೊಸತಡಕು ಸಂಭ್ರಮ ಜೋರಾಗಿತ್ತು. ಹಲಾಲ್ ಕಟ್ ವಿವಾದದ ನಡುವೆಯೂ, ಈ ವಿವಾದಕ್ಕೆ ಸೊಪ್ಪು ಹಾಕದೆ ಎಂದಿನಂತೆ, ಎಲ್ಲಾ ಕಡೆಯೂ ಭರ್ಜರಿ ಮಟನ್, ಚಿಕನ್, ಮೀನು ವ್ಯಾಪಾರ ನಡೆಯಿತು.ನಗರದ ಹಲವು ಭಾಗಗಳಲ್ಲಿ ಮಟನ್ ಶಾಪ್ಗಳ ಮುಂದೆ ಜನ ಕ್ಯೂ ನಿಂತಿದ್ದರು.
ಬೆಂಗಳೂರು: ನಗರದಲ್ಲಿ ಯುಗಾದಿ ಹೊಸತಡಕು ಸಂಭ್ರಮ ಜೋರಾಗಿತ್ತು. ಹಲಾಲ್ ಕಟ್ ವಿವಾದದ ನಡುವೆಯೂ, ಈ ವಿವಾದಕ್ಕೆ ಸೊಪ್ಪು ಹಾಕದೆ ಎಂದಿನಂತೆ, ಎಲ್ಲಾ ಕಡೆಯೂ ಭರ್ಜರಿ ಮಟನ್, ಚಿಕನ್, ಮೀನು ವ್ಯಾಪಾರ ನಡೆಯಿತು.ನಗರದ ಹಲವು ಭಾಗಗಳಲ್ಲಿ ಮಟನ್ ಶಾಪ್ಗಳ ಮುಂದೆ ಜನ ಕ್ಯೂ ನಿಂತಿದ್ದರು.
ಕಂಠೀರವ ಸ್ಟೇಡಿಯಂ ರಸ್ತೆಯಲ್ಲಿರುವ ಹೆಚ್.ಎಂ.ಟಿ ಮಟನ್ ಸ್ಟಾಲ್ ಮುಂದೆಯೂ ಫುಲ್ ರಶ್ ಕಂಡುಬಂದಿದೆ. ಇಲ್ಲಿ ಜನ ಹಲಾಲ್ (Halal cut) ಮಾಂಸವನ್ನೇ ಕೊಂಡುಕೊಂಡರು.ಇನ್ನು ಬೆಳಗ್ಗೆಯಿಂದಲೇ ನಗರದ ಪ್ರಸಿದ್ದ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.
ಇದನ್ನೂ ಓದಿ: ಕ್ಷಣಕ್ಕೊಂದು ಬಣ್ಣ ಬದಲಿಸುವ ಬಿಜೆಪಿ ಒಂದು ರಾಜಕೀಯ ಊಸರವಳ್ಳಿ: ಜೆಡಿಎಸ್ ಟೀಕೆ
74 ವರ್ಷಗಳ ಇತಿಹಾಸವಿರುವ ಪಾಪಣ್ಣ ಮಟನ್ ಸ್ಟಾಲ್ ಮೂರು ತಲೆಮಾರಿನಿಂದ ನಡೆದುಕೊಂಡು ಬಂದಿದೆ. ಪ್ರಸ್ತುತ ಪಾಪಣ್ಣ ಮೊಮ್ಮಗ ರೋಹಿತ್ ಅಂಗಡಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇಲ್ಲಿನ ಸಿಬ್ಬಂದಿಗಳು ಕುರಿಗಳನ್ನು ಕನಕಪುರ, ರಾಮನಗರ, ಗೌರಿಬಿದನೂರು ಮತ್ತು ಮಾಗಡಿಯಿಂದ ಆರಿಸಿ ತರುತ್ತಾರೆ. ಪ್ರತಿ ವರ್ಷ ಈ ದಿನ ಸರಾಸರಿ 1,500 ಕಿಲೋ ಮಟನ್ ಅನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ ರೋಹಿತ್ ತಿಳಿಸಿದ್ದಾರೆ.
ಹಿಂದವೀ ಮೀಟ್ ಮಾರ್ಟ್
ಇನ್ನೊಂದೆಡೆ ಹಲಾಲ್ ಗೆ ಸೆಡ್ಡು ಹೊಡೆಯಲು ನಗರದ ಉಲ್ಲಾಳದಲ್ಲಿ ಹಿಂದವೀ ಮೀಟ್ ಮಾರ್ಟ್ ಹುಟ್ಟಿಕೊಂಡಿದೆ. 20 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರಿಂದ ಜಟ್ಕಾ ಕಟ್ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ.ಹಿಂದವೀ ಮೀಟ್ ಮಾರ್ಟ್ನಲ್ಲಿ ಮಾಂಸ ಖರೀದಿ ಜೋರಾಗಿದೆ. ಜನ ಸರತಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸುತ್ತಿದ್ದಾರೆ. ಆ್ಯಪ್ ಹಾಗೂ ವೆಬ್ಸೈಟ್ ನಲ್ಲಿ ನೊಂದಾಯಿಸಿಕೊಂಡಿರುವ ಮಾಲೀಕರು ಗ್ರಾಹಕರಿಗೆ ಹೋಮ್ ಡೆಲಿವರಿ ಕೂಡ ನೀಡುತ್ತಿದ್ದಾರೆ. ಹಿಂದವೀ ಮೀಟ್ ಮಾರ್ಟ್ ಆನ್ಲೈನ್ ಮೂಲಕ 1200 ಕ್ಕೂ ಹೆಚ್ಚು ಆರ್ಡರ್ ಪಡೆದಿದೆ. ಹಿಂದೂ ಕಾರ್ಯಕರ್ತರಿಂದ ಹೋಂ ಡೆಲಿವರಿ ಕೊಡಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ‘ಕುಮಾರಸ್ವಾಮಿ ರಾಜಕೀಯ ಜೀವನವೇ ಡ್ರಾಮಾ, ಅವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ’
ಇನ್ನೊಂದೆಡೆ ಹಲಾಲ್, ಜಟ್ಕಾ ಕಟ್ ವಾರ್ ನಡುವೆ ಮೀನು ಖರೀದಿ ಜೋರಾಗಿತ್ತು. ಯಶವಂತಪುರ ಫಿಶ್ ಮಾರ್ಕೆಟ್ ನಲ್ಲಿ ಫುಲ್ ರಶ್ ಇತ್ತು. ಬೆಂಗಳೂರಿನ ನಾನಾ ಭಾಗಗಳಿಂದ ಆಗಮಿಸಿ ಮೀನು ಖರೀದಿಸಿದರು.ಮಟನ್ ಪ್ರತೀ ಕೆ.ಜಿಗೆ 700 ರೂ ನಿಂದ 800 ರೂ ನಂತೆ ಅಂತೆ ಮಾರಾಟವಾಗಿದ್ರೆ, ಚಿಕನ್ 160 ರಿಂದ 210 ರವರೆಗೆ ಮಾರಾಟವಾಗಿದೆ. ಹಲಾಲ್, ಜಟ್ಕಾ ಕಟ್ ಬದಲು ಬೆಲೆ ಕಡಿಮೆಯಾಗಲಿ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.