Stickers On Vehicles: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ಮೇಲೆ ವಾಹನಗಳ ಮೇಲೆ ಆಕ್ಷೇಪಾರ್ಹ, ಪ್ರವೋಕ್ ಮಾಡುವ, ಬೇರೆ ನಟರ ಫ್ಯಾನ್ಸ್ ವಿರುದ್ಧ ಟಾಂಗ್ ಕೊಡುವಂತೆ ವಾಹನಗಳ ಮೇಲೆ ಸ್ಟಿಕ್ಕರ್, ಪದಗಳ ಅಳವಡಿಕೆ ಮಾಡೋದು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಬರಹಗಳು ಹೆಚ್ಚಾಗಿದೆ. ಈ ಹಿಂದೆ ಈ‌ಮಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲ. ಈ‌ ಬಗ್ಗೆ ಆರ್‌ಟಿ‌ಓ ಇಲಾಖೆ ಹಾಗೂ ಪೊಲೀಸ್ ಇಲಾಖೆ (Police Department) ಗಮನಕ್ಕೆ ಬಂದಿದೆ. ಖಂಡಿತ ಅನವಶ್ಯಕ ಬರಹಗಳಿದ್ರೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. 


COMMERCIAL BREAK
SCROLL TO CONTINUE READING

ನೆಚ್ಚಿನ‌ ನಟರ ಪೋಟೋಗಳನ್ನ ವಾಹನಗಳ ಮೇಲೆ ಹಾಕೋದು ಕಾನೂನು‌ಬಾಹಿರ. ಪ್ರವೋಕ್‌ ಮಾಡೋ ಬರಹ‌ ಮಾತ್ರವಲ್ಲ, ಯಾವುದೇ ಸ್ಟಿಕ್ಕರ್ ಗಳಿಗೂ ಅವಕಾಶವಿಲ್ಲ ಎನ್ನಲಾಗಿದೆ.


ಇದನ್ನೂ ಓದಿ- ಗೌರಿ-ಗಣೇಶ ಹಬ್ಬಕ್ಕಾಗಿ ಊರಿಗೆ ಹೋಗುವವರಿಗೆ KSRTC ಗುಡ್ ನ್ಯೂಸ್, ಟಿಕೆಟ್ ಬುಕ್ಕಿಂಗ್‌ನಲ್ಲೂ ರಿಯಾಯಿತಿ 


ಇನ್ನು ಇಲ್ಲಿವರೆಗೆ ನಂಬರ್ ಪ್ಲೇಟ್ ಮೇಲೆ ಫೋಕಸ್ ಮಾಡ್ತಿದ್ವಿ. ಇನ್ಮೇಲೆ ಅನಧಿಕೃತ ಬರಹ ಹಾಕಿದ್ರೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಮೊದಲ, ಎರಡನೇ ಬಾರಿ ಎಚ್ಚರಿಕೆ ನೀಡ್ತೀವಿ.. ಮೂರನೇ ಬಾರಿ ಅದೇ ತಪ್ಪು ಮಾಡಿದ್ರೇ ಲೈಸೆನ್ಸ್ ರದ್ದು (Cancellation of license) ಮಾಡುತ್ತೇವೆ ಎಂದು ಆರ್ ಟಿ ಓ ಅಧಿಕಾರಿಗಳು ಖಡಕ್ ವಾರ್ನ್ ಮಾಡಿದ್ದಾರೆ.


ಮನೆ ಹೆಸರು, ಮನೆತನದ‌ ಹೆಸರು, ಇಷ್ಟ ದೇವರ ಹೆಸರು ಹಾಕೋದೂ ಕಾನೂನುಬಾಹಿರ..!
ಹೌದು, ನಂಬರ್ ಪ್ಲೇಟ್(Number Plate) ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆರ್ ಟಿ ಓ‌ ಇಲಾಖೆಗಳಿಗೆ ಡೈರೆಕ್ಷನ್ ಕೊಡುತ್ತಾ ಬಂದಿದೆ. ಅದರ ಅನ್ವಯ ಆರ್ ಟಿ ಓ (RTO)ಅಧಿಕಾರಿಗಳು ಕೇಸುಗಳನ್ನ ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್ ಟಿಓ ಇಲಾಖೆ ಮಾಡಿದೆ. ಜೊತೆಗೆ 3 ವರ್ಷದಲ್ಲಿ ಹಲವಾರು ಪ್ರಕರಣಗಳು ದಾಖಲು ಮಾಡಲಾಗಿದೆ. 


ಇದನ್ನೂ ಓದಿ- Learner DLಗಾಗಿ ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಿ !ಹಂತ ಹಂತದ ಪ್ರಕ್ರಿಯೆ ಹೀಗಿದೆ !


ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ಬೇರೆ ಬೇರೆ ಬರಹಗಳನ್ನ ಬರೆಯುತ್ತಿದ್ದಾರೆ. ಯಾರೂ ಸಹ ಅನವಶ್ಯಕ ಬರಹಗಳನ್ನ ವಾಹನಗಳ‌ ಮೇಲೆ ಹಾಕಬಾರದು. ಇನ್ಮೇಲೆ ಈ ರೀತಿ ಸ್ಟಾರ್ ವಾರ್ ರೀತಿ ‌‌ಅನವಶ್ಯಕಕ ಬರಹ, ಟಾಂಟ್ ಕೊಡೋ ಬರಹಗಳನ್ನ ತೆಗೆದು ಹಾಕಿಲ್ಲದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಅಂತಿದ್ದಾರೆ ಅಧಿಕಾರಿಗಳು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.