Haveri Lok Sabha Election Results 2024: ಹಾವೇರಿ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿಯವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠಗೆ ಸೋಲಾಗಿದೆ. ಬೊಮ್ಮಾಯಿಯವರು ಒಟ್ಟು 7,05,538 ಮತಗಳನ್ನು ಪಡೆದುಕೊಂಡು 43,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿಯವರು 6,62,025 ಮತಗಳನ್ನು ಪಡೆದುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಹಾವೇರಿ ಲೋಕಸಭಾ ಕ್ಷೇತ್ರದ ಇತಿಹಾಸ


ಏಲಕ್ಕಿ ನಗರಿ ಖ್ಯಾತಿಯ ಹಾವೇರಿ ಜಿಲ್ಲೆಯ ಈ ಮೊದಲು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹಾವೇರಿ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 3 ಚುನಾವಣೆಗಳಲ್ಲೂ ಜಯಭೇರಿ ಬಾರಿಸಿದ್ದ ಶಿವಕುಮಾರ್ ಉದಾಸಿಯವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಟಿಕೆಟ್ ಕೊಡಿಸಲು ಸತತ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.  


ಗೆಲುವಿನ ಓಟ ಮುಂದುವರಿಸಲು ಬಿಜೆಪಿ ಈ ಬಾರಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಕಣಕ್ಕಿಳಿಸಿತ್ತು. 2008ರಿಂದ ಶಿಗ್ಗಾವಿ–ಸವಣೂರು ಕ್ಷೇತ್ರದಿಂದ 4 ಬಾರಿ ಶಾಸಕರಾಗಿರುವ ಬೊಮ್ಮಾಯಿ ಸಚಿವರಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಕೇಂದ್ರ ರಾಜಕಾರಣದತ್ತ ಮುಖಮಾಡಿದ್ದ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. 2 ಬಾರಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಮತ್ತು ಒಮ್ಮೆ ನಾಮಧಾರಿ ರೆಡ್ಡಿ ಸಮುದಾಯಕ್ಕೆ ಟಿಕೆಟ್ ನೀಡಿ ಕೈಸುಟ್ಟುಕೊಂರುವ ಕಾಂಗ್ರೆಸ್‌ಗೆ ಈ ಬಾರಿಯೂ ಹಿನ್ನಡೆಯಾಗಿದೆ. ಈ ಬಾರಿ ಪ್ರಬಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠರನ್ನು ಸ್ಪರ್ಧೆಗಿಳಿಸಿತ್ತು. ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠರ ಪುತ್ರ ಆನಂದಸ್ವಾಮಿ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದರು. ಆದರೆ ಮತದಾರ ಅವರ ʼಕೈʼ ಹಿಡಿದಿಲ್ಲ.


ಇದನ್ನೂ ಓದಿ: Zee AI Exit Poll: ಕೇಂದ್ರದಲ್ಲಿ ಮೋದಿ ಜಯಭೇರಿ, ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಗೊತ್ತಾ?


ಕಣದಲ್ಲಿ 14 ಅಭ್ಯರ್ಥಿಗಳಿದ್ದರೂ ಬಿಜೆಪಿ–ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿತ್ತು. ಬೊಮ್ಮಾಯಿ–ಆನಂದಸ್ವಾಮಿ ಆರೋಪ-ಪ್ರತ್ಯಾರೋಪ ಮಾಡದೆ ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳ ಮೇಲೆ ಮತ ಕೇಳಿದ್ದರು. ಹೀಗಾಗಿ ಹಾವೇರಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ vs ನಮೋ ಗ್ಯಾರಂಟಿ ನಡುವೆ ಪೈಪೋಟಿ ನಡೆದಿತ್ತು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಣ್ಣಿಸಿ ಬಿಜೆಪಿ ನಾಯಕರು ಮತ ಕೇಳಿದ್ದರೆ, ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೇಲೆ ʼಕೈʼ ನಾಯಕರು ಮತಬೇಟೆ ನಡೆಸಿದ್ದರು.


ಹಾವೇರಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 1 ಕ್ಷೇತದಲ್ಲಿ ಬಿಜೆಪಿ ಗೆದ್ದಿದ್ದು, ಉಳಿದ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರವು ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಲ್ಲದಿರುವುದು ವಿಶೇಷ. ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವಳಿ ಇಲ್ಲದ ಕಾರಣ ಮೈತ್ರಿಯಿಂದ ಬಿಜೆಪಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರೇ ನಿರ್ಣಾಯಕರಾಗಿದ್ದರು. ಇದೇ ಕಾರಣಕ್ಕೆ ಉಭಯ ಪಕ್ಷಗಳು ಅದೇ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದವು. 25 ವರ್ಷಗಳಿಂದ ಬೊಮ್ಮಾಯಿಯವರಿಗೆ ಕ್ಷೇತ್ರದ ಜೊತೆ ನಂಟಿದೆ. ಆದರೆ ಆನಂದಸ್ವಾಮಿಯವರು ಕಳೆದೊಂದು ವರ್ಷದಿಂದ ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಹಾವೇರಿ ಲೋಕಸಭಾ ಕ್ಷೇತ್ರದ ಕಳೆದ ಚುನಾವಣೆಯಲ್ಲಿ ಶೇ.74.01ರಷ್ಟು ಮತದಾನವಾಗಿತ್ತು, ಈ ಬಾರಿ ಶೇ.77.60 ರಷ್ಟು ಮತದಾನವಾಗಿದೆ.  


ಒಟ್ಟು ಮತದಾರರ ಸಂಖ್ಯೆ 17,77,877
ಪುರುಷರು 8,95,366
ಮಹಿಳೆಯರು 8,82,430

ವಿಧಾನಸಭಾ ಶಾಸಕರ ಬಲಾಬಲ  


ರೋಣ ಕಾಂಗ್ರೆಸ್
ಶಿರಹಟ್ಟಿ(ಮೀಸಲು) ಬಿಜೆಪಿ
ಹಾವೇರಿ (ಮೀಸಲು) ಕಾಂಗ್ರೆಸ್
ಬ್ಯಾಡಗಿ ಕಾಂಗ್ರೆಸ್
ರಾಣೆಬೆನ್ನೂರು ಕಾಂಗ್ರೆಸ್
ಹಿರೇಕೆರೂರು ಕಾಂಗ್ರೆಸ್
ಹಾನಗಲ್ ಕಾಂಗ್ರೆಸ್
ಗದಗ ಕಾಂಗ್ರೆಸ್

ಇದನ್ನೂ ಓದಿ: Hassan Pen Drive Case: SIT ಅಧಿಕಾರಿಗಳನ್ನೇ ತಬ್ಬಿಬ್ಬು ಮಾಡಿದ ಪ್ರಜ್ವಲ್‌ ರೇವಣ್ಣ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ