ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತ ಜನತೆ ಇನ್ನೂ ಸ್ವಲ್ಪ ನಿರಾಳವಾಗಿರಬಹುದು. ಬೆಂಗಳೂರು ಮೆಟ್ರೋದ ಮತ್ತೊಂದು 6 ಬೋಗಿಗಳ ಎರಡನೇ ಹಂತದ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಕೆಂಪೇಗೌಡ ಮೆಟ್ರೋ ಕೇಂದ್ರದಲ್ಲಿ ನೂತನ 6 ಭೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ಅದೇ ರೈಲಿನಲ್ಲಿ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಯಾಣ ಮಾಡಿದರು. 



ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು. 


ಸೆಪ್ಚಂಬರ್ 11 ರಂದು 4,36 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿ ದಾಖಲೆಯಾಗಿತ್ತು. ಸದ್ಯ ನಮ್ಮ ಮೆಟ್ರೋದಡಿ 50 ಮೆಟ್ರೋ ರೈಲುಗಳು ಸಂಚರಿಸುತ್ತಿದ್ದು, ಎಲ್ಲಾ ರೈಲುಗಳನ್ನು ಆರು ಬೋಗಿಗಳ ಮೆಟ್ರೋ ಆಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.