ವಿಜಯಪುರ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಶ್ವರಪ್ಪನವರನ್ನು ಏಕೆ ಬಂಧಿಸಬೇಕು ಎಂದು ಜೆಡಿಎಸ್‌ ನಾಯಕ ಹೆಚ್‌.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈಶ್ವರಪ್ಪ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದೇನೆ. ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಬಂಧನ ಯಾಕೆ ಆಗಬೇಕು. ಈಶ್ವರಪ್ಪ ಪ್ರಕರಣದಲ್ಲಿ ಬೀದಿಗಿಳಿದವರು, ಅವರವರ ವಿಚಾರಕ್ಕೆ ಯಾಕೆ ಬಂದಿಲ್ಲ. ಧರ್ಮ ಧರ್ಮಗಳ ನಡುವೆ ಸಂಘರ್ಷ ಆದಾಗ, ಕಾಂಗ್ರೆಸ್ ಮೌನಕ್ಕೆ ಶರಣಾಗಿದ್ದು ಯಾಕೆ? ಎಂದು ಪ್ರಶ್ನಿಸಿದರು. 


ಇದನ್ನು ಓದಿ: ಪತಿಯ ಎರಡನೇ ಮದುವೆಗೆ ಅನಿರೀಕ್ಷಿತವಾಗಿ ಬಂದ ಮೊದಲ ಪತ್ನಿ, ವರನಿಗೆ ಬಿತ್ತು ಚಪ್ಪಲಿ ಏಟು


ಸರ್ವಜನಾಂಗದ ಶಾಂತಿಯ ತೋಟವನ್ನ ಹಾಳು ಮಾಡುವಾಗ ಎಲ್ಲಿ ಹೋಗಿದ್ದರು. ಈಗ ಈಶ್ವರಪ್ಪ ಅವರ ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಬೆಳಗಾವಿ ಜಿಲ್ಲೆಯ ಕಲ್ಲಪ್ಪ ಹಂಡೀಭಾಗ್ ಆತ್ಮಹತ್ಯೆ ಮಾಡಿಕೊಂಡರು. ಆಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ರಾ.? ಆಗಿನ ಗೃಹ ಸಚಿವರು ರಾಜೀನಾಮೆ ಕೊಟ್ರಾ..? ಹಂಡಿಬಾಗ್ ಸರ್ಕಾರದ ನಡವಳಿಕೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆರೋಪಿಸಿದರು. 


ಇವರಿಗೆ ಚುನಾವಣೆ ಸಂದರ್ಭದಲ್ಲಿ ಮಾತನಾಡಲು ವಿಚಾರವೇನಿಲ್ಲ. ಜನರ ಸಮಸ್ಯೆಗಳ ಬಗ್ಗೆಯೂ ಮಾತನಾಡಿಲ್ಲ. ರಾಜೀನಾಮೆ ಕೊಟ್ಟ ಬಳಿಕ ಬಂಧನವಾಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಏನು ಉಪಯೋಗವಿಲ್ಲ ಎಂದರು. 


ಇದನ್ನು ಓದಿ: DKS: "ಆ ಮಹಾನಾಯಕರನ್ನು ತೋರಿಸಲಿ, ಯಾರು ಬೇಡ ಎಂದಿದ್ದಾರೆ?"


ಈಗ ಸಂತೋಷ್ ಆತ್ಮಹತ್ಯೆ ವಿಷಯ ಇಟ್ಟುಕೊಂಡು ಹೊರಟಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನ ಎಲ್ಲಿಯವರೆಗೂ ಸಹಿಸಿಕೊಳ್ತಾರೆ. ಜನ ಎರಡೂ ರಾಷ್ಟ್ರೀಯ ಪಕ್ಷವನ್ನ ತಿರಸ್ಕರಿಸುವ ಕಾಲ ಬಂದಿದೆ ಎಂದರು. 


ಸಂತೋಷ ಪ್ರಕರಣದಲ್ಲಿ ಮಹಾನಾಯಕನ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, "ನನಗೆ ಮಹಾನಾಯಕ, ದುರಂತ ನಾಯಕರೋ, ಯಾವ ಕಳ್ಳ ನಾಯಕರೋ ಗೊತ್ತಿಲ್ಲ. ಘಟನೆ ನಡೆದ ವಾಸ್ತವಾಂಶವನ್ನ ಜನರ ಮುಂದೆ ಸರ್ಕಾರ ಇಡಬೇಕು. ಇದರಲ್ಲಿ ಯಾರ ಪಾತ್ರ ಇದೆ, ಯಾಕೆ ಘಟನೆ ನಡೆಯಿತು ಅನ್ನೋದರ ತನಿಖೆ ಆಗಬೇಕು" ಎಂದು ಆಗ್ರಹಿಸಿದರು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.