ನವದೆಹಲಿ : ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಗದರ್‌ಪುರದಲ್ಲಿ ನಡೆದ ಮದುವೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ವರನ ಹೆಂಡತಿ ಎಂದು ಹೇಳಿಕೊಂಡು ಪೊಲೀಸರೊಂದಿಗೆ ಆಗಮಿಸಿ ನಂತರ ಎಲ್ಲರ ಸಮ್ಮುಖದಲ್ಲಿ ವರನಿಗೆ ಥಳಿಸಿ, ಗಲಾಟೆ ನಡೆದಿದೆ.
ವರನಿಗೆ ಚಪ್ಪಲಿ ಏಟು ನೀಡಿದ ಮಹಿಳೆ :
ಇದ್ದಕ್ಕಿದಂತೆ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರೊಂದಿಗೆ ಬಂದ ಮಹಿಳೆ ವರನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಗಲಾಟೆಯನ್ನು ಕಂಡ ಪೊಲೀಸರು ವರನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಮಹಿಳೆ ವರನಿಗೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : Viral Video: ನೀವು ಹಾರುವ ಬೆಕ್ಕನ್ನು ನೋಡಿದ್ದೀರಾ..?
ಮದುವೆಗೆ ಆಗಮಿಸಿದ ಬಳಿಕ ಮಹಿಳೆ ನೀಡಿದ ಹೇಳಿಕೆ :
ಗದರ್‌ಪುರದ ಕಾಂಬೋಜ್ ಧರ್ಮಶಾಲಾದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಆಗ ಇದ್ದಕ್ಕಿದ್ದಂತೆ ಮಹಿಳೆಯೊಬ್ಬರು ಪೊಲೀಸರೊಂದಿಗೆ ಅಲ್ಲಿಗೆ ಬಂದಿದ್ದಾರೆ. ಮದುವೆ ಮಾಡಿಕೊಳ್ಳುತ್ತಿರುವ ವರನ ಮೊದಲ ಪತ್ನಿ ತಾನು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ತನ್ನ ಮದುವೆಯಾಗಿ ಇನ್ನು ಒಂದು ವರ್ಷ ಕೂಡಾ ಆಗಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಪತಿಯೊಂದಿಗೆ ಇತ್ತು ಮನಸ್ತಾಪ :
ಪತಿ ವರದಕ್ಷಿಣೆಗೆ ಬೇಡಿಕೆ ಇಡುತ್ತಿದ್ದು, ಪತಿಯೊಂದಿಗೆ ಮನಸ್ತಾಪ ಉಂಟಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಗದರ್‌ಪುರದಲ್ಲಿ ತನ್ನ ಪತಿ ಎರಡನೇ ಮದುವೆಯಾಗುತ್ತಿದ್ದಾನೆ ಎಂಬ ಮಾಹಿತಿ ಮಹಿಳೆಗೆ ತಿಳಿದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮದುವೆ ನಡೆಯುವಲ್ಲಿಗೆ ಮಹಿಳೆ ಆಗಮಿಸಿದ್ದಾರೆ.
ಇದನ್ನೂ ಓದಿ : Viral Video: ಎತ್ತರದ ಗುಡ್ಡದಿಂದ ಸೈಕಲ್ ಸಮೇತ ಜಿಗಿದ ಬಾಲಕಿ! ಆಮೇಲೇನಾಯ್ತು..?
ಈ ವೇಳೆ ಮೊದಲು ಮಹಿಳೆ ಹಾಗೂ ಆಕೆಯ ಜೊತೆಗಿದ್ದವರು ವರನಿಗೆ ಚಪ್ಪಲಿಯಿಂದ ತೀವ್ರವಾಗಿ ಥಳಿಸಿದ್ದಾರೆ. ನಂತರ ವರನ ಮೊದಲ ಮದುವೆ ವಿಚಾರ ತಿಳಿದ ವಧುವಿನ ಕಡೆಯವರು ಕೂಡಾ ವರನಿಗೆ ಧರ್ಮದೇಟು ನೀಡಿದ್ದಾರೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಮದುವೆಗೆ ಬ್ರೇಕ್ ಹಾಕಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.