ಬೆಂಗಳೂರು: ಕೊರೋನಾ (Coronavirus)  ನಿಯಂತ್ರಣಕ್ಕೆ ಲಾಕ್ ಡೌನ್ ಘೊಷಿಸಿರುವ ಹಿನ್ನಲೆಯಲ್ಲಿ  ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ಬಡವರು, ಬೀದಿ ಬದಿ ವ್ಯಾಪಾರಿಗಳು ಹಾಗೂ ರೈತರ ಸಂಕಷ್ಟ ಪರಿಹಾರಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಡಿ. ರೇವಣ್ಣ (HD Revanna) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಲಾಕ್‍ಡೌನ್ (Lockdown)  ಮೇ. 3 ರವರೆಗೆ ವಿಸ್ತರಿಸಿರುವ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಾದ್ಯಂತ ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರಿಗೆ ಒಂದು ಕಂತಿನ ಸಹಾಯಧನವಾಗಿ ಪ್ರತಿ ಕುಂಟುಂಬಕ್ಕೆ 5,000 ರೂಗಳನ್ನು ಬಿಡುಗಡೆ ಮಾಡುವಂತೆ ಶಾಸಕರಾದ ಹೆಚ್.ಡಿ. ರೇವಣ್ಣ ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.


ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಇನ್ನೂ ಹೆಚ್ಚಿನ ಅನುದಾನವನ್ನು ನೀಡಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರಲ್ಲದೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಒದಗಿಸಲಾದ ಟೆಸ್ಟಿಂಗ್ ಕಿಟ್ ಮತ್ತು ಪಿ.ಪಿ.ಇ ಮತ್ತು ಇತರೆ ಸಾಮಾಗ್ರಿಗಳನ್ನು ಹಾಸನ ಮೆಡಿಕಲ್ ಕಾಲೇಜಿಗೂ ನೀಡಬೇಕೆಂದು ಅವರು ಕೋರಿದ್ದಾರೆ.


ಅಧಿಕ ಧರಕ್ಕೆ ಮಾಸ್ಕ್ ಹಾಗೂ ಸ್ಯಾನಿಟೇಜರ್ ಮಾರಾಟ: ದೂರು ದಾಖಲಿಸಿಕೊಂಡು ದಂಡ ವಸೂಲಿ


ಈಗಾಗಲೇ ಮೆಡಿಕಲ್ ಕಾಲೇಜಿನಲ್ಲಿರುವ ವೈರಸ್ ಟೇಸ್ಟಿಂಗ್ ಲ್ಯಾಬ್‍ರೇಟರ್‍ಗೆ ಹೆಚ್ಚುವರಿಯಾಗಿ ಪಿ.ಸಿ.ಆರ್. ಟೇಸ್ಟಿಂಗ್ ಮಿಷನ್, ಬಯೋ ಟೆಸ್ಟಿಂಗ್ ಕ್ಯಾಬಿನೇಟ್ ಹಾಗೂ 5000 ವೈರಲ್ ಟ್ರಾನ್ಸ್‍ಪೋರ್ಟ್ ಮಿಡಿಯಾಗಳನ್ನು ಒದಗಿಸಿ ಲ್ಯಾಬ್‍ರೇಟರಿಯನ್ನು ಉನ್ನತ್ತಿಕರಿಸಬೇಕೆಂದು ಮುಖ್ಯಮಂತ್ರಿಯವರಲ್ಲಿ ಮಾಜಿ ಸಚಿವರಾದ ಹಾಗೂ ಹಾಲಿ ಶಾಸಕರಾದ ಹೆಚ್.ಡಿ. ರೇವಣ್ಣ ಅವರು ಮನವಿ ಮಾಡಿದ್ದಾರೆ.


ಮುಂಬೈ, ಬೆಂಗಳೂರು ಮತ್ತು ಇತರೆ ನಗರಗಳಿಂದ ಉದ್ಯೋಗ ಕಳೆದುಕೊಂಡು ತಮ್ಮ ತಮ್ಮ ಹಳ್ಳಿಗಳಿಗೆ ವಾಪಸಾಗಿರುವ ಸಾವಿರಾರು ಕಾರ್ಮಿಕರಿಗೆ ತಕ್ಷಣದಲ್ಲಿ ಪಡಿತರ ಚೀಟಿ (Ration Card) ವಿತರಿಸಿ ಪಡಿತರ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರಲ್ಲದೆ, ಪ್ರಸ್ತುತ ಸರ್ಕಾರದಿಂದ ಪ್ರತಿ ವ್ಯಕ್ತಿಗೆ ಮಾಹೆಯಾನ ನೀಡುತ್ತಿರುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿ. ಗಳಿಗೆ ಮತ್ತು 2 ಕೆ.ಜಿ. ಗೋಧಿಯನ್ನು 4 ಕೆ.ಜಿ.ಗೆ ಹೆಚ್ಚಿಸಲು ತುರ್ತು ಆದೇಶ ನೀಡಬೇಕೆಂದು ಶಾಸಕರು ಕೋರಿಕೆ ಸಲ್ಲಿಸಿದರು.


ದಿನಸಿ, ತರಕಾರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಕ್ರಮ ವಹಿಸಿ: ಸಚಿವ ಎಸ್.ಟಿ. ಸೋಮಶೇಖರ್


ರಾಜ್ಯದಲ್ಲಿ ಆಲೂಗೆಡ್ಡೆ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಮುಂಗಾರು ಮತ್ತು ಹಿಂಗಾರು ಋತುಮಾನ ಸೇರಿದಂತೆ ಅಂದಾಜು 35,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಸುಮಾರು 43,570 ಮೆಟ್ರಿಕ್ ಟನ್ ಆಲೂಗೆಡ್ಡೆ ಬಿತ್ತನೆ ಬೀಜ  ಆಗತ್ಯವಿರುತ್ತದೆ. ಆಲ್ಲೂಗೆಡ್ಡೆ ಬೆಳೆಯನ್ನು ಪ್ರಮುಖವಾಗಿ ಮುಂಗಾರು ಹಂಗಾಮಿನಲ್ಲಿ ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಆಲೂಗೆಡ್ಡೆ ಬೆಳೆಗೆ ಒಟ್ಟು ಉತ್ಪಾದನಾ ವೆಚ್ಚದಲ್ಲಿ ಬಿತ್ತನೆ ಬೀಜಕ್ಕೆ ಶೇ.30 ರಿಂದ 40 ರಷ್ಟು ವೆಚ್ಚವನ್ನು ವ್ಯಯಿಸಬೇಕಾಗಿರುತ್ತದೆ. ಆಲೂಗೆಡ್ಡೆ ಬೆಳೆಯು ಹಲವಾರು ರೋಗ ಮತ್ತು ಕೀಟಗಳಿಗೆ ತುತ್ತಾಗುವ ಬೆಳೆಯಾಗಿದ್ದು, ಅಂಗಮಾರಿ ರೋಗ, ದುಂಡಾಣು ರೋಗ, ನಂಜು ರೋಗ ಹಾಗೂ ನುಸಿ ಕೀಟ ಬಾಧೆ ಆಲೂಗೆಡ್ಡೆ ಬೆಳೆಗೆ ಹೆಚ್ಚಾಗಿ ಬಾಧಿಸುತ್ತಿವುದರಿಂದ ಬೆಳೆ ಹಾನಿಯಾಗುತ್ತಿರುವ ಕಾರಣ ಆಲೂಗೆಡ್ಡೆ ಬೆಳೆಗಾರರು ನಷ್ಟವನ್ನು ಅನುಭವಿಸುತ್ತಿರುತ್ತಾರೆ ಎಂದು ವಿವರಿಸಿದರು.


ಬೆಳೆನಷ್ಟದ ಜೊತೆಗೆ 2019-20ನೇ ಮುಂಗಾರು ಹಂಗಾಮಿನಲ್ಲಿ ಬಿದ್ದ ಅತಿಯಾದ ಮಳೆಯಿಂದಾಗಿ ಆಲೂಗೆಡ್ಡೆ ಬೆಳೆಯು ಹಾನಿಗೊಳಗಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಅಲ್ಲದೇ ಈ ಬೇಸಿಗೆ ಹಂಗಾಮಿನಲ್ಲಿ ರೈತರು ಬೆಳೆದ ತರಕಾರಿ ಬೆಳೆಗಳನ್ನು ಕೋವಿಡ್-19 (Covid-19) ವೈರಸ್ ಸೋಂಕಿನಿಂದಾಗಿ ಇಡೀ ದೇಶವನ್ನೇ ಬಂದ್ ಮಾಡಲಾಗಿರುವುದರಿಂದ ಸರಿಯಾಗಿ ಮಾರುಕಟ್ಟೆ ಲಭ್ಯವಿಲ್ಲದೆ ಹಾಗೂ ಸಾಗಾಣಿಕೆ ತೊಂದರೆಗಳಿಂದಾಗಿ ಪ್ರಸಕ್ತ ವರ್ಷದಲ್ಲಿ ರೈತರು (Farmers) ತೀವ್ರತರವಾದ ನಷ್ಟವನ್ನು ಹೊಂದಿರುತ್ತಾರೆ. ಈ ಹಿನ್ನಲೆಯಲ್ಲಿ ಆಲೂಗೆಡ್ಡೆ ಬೆಳೆಗಾರರ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ರಾಜಾದ್ಯಂತ ಆಲೂಗೆಡ್ಡೆ ಬೆಳೆ ಬೇಸಾಯದಲ್ಲಿ ತೊಡಗಿರುವ ರೈತರಿಗೆ ಶೇ. 50 ರಂತೆ ಬಿತ್ತನೇ ಬೀಜ ಮತ್ತು ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗಾಗಿ ಸಹಾಯಧನ ಸೌಲಭ್ಯವನ್ನು ಒದಗಿಸುವಂತೆ ಹೆಚ್.ಡಿ. ರೇವಣ್ಣ ಮನವಿ ಮಾಡಿದರು.


Covid-19 ಲಾಕ್‌ಡೌನ್ ವೇಳೆ ಉದ್ಯೋಗ ನಷ್ಟ, ವೇತನ ಕಡಿತ ಭಾರತೀಯರನ್ನು ಹೆಚ್ಚು ಕಾಡುತ್ತಿದೆ: ಸಮೀಕ್ಷೆ


ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ರಸವತ್ತಾದ ಕಬ್ಬನ್ನು ಹಿಂಡಿ ಕಬ್ಬಿನ ಹಾಲನ್ನು ತಯಾರಿಸುವ ಕಬ್ಬನ್ನು ಸುಮಾರು 3,600 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದು, ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಈ ಕಬ್ಬನ್ನು ಕಟ್ಟಾವು ಮಾಡದೆ ಬಲಿತ್ತು ಒಣಗಿ ಹೋಗಿ ರೈತರು ಈ ಬೆಳೆಗೆ ಬೆಂಕಿ ಹೆಚ್ಚುವ ಪರಿಸ್ಥಿತಿ ಎದುರಾಗಿದೆ. ಕಬ್ಬು ಬೆಳೆಗೆ ಸರ್ಕಾರದಿಂದ ಪ್ರತಿ ಎಕರೆಗೆ ಕನಿಷ್ಠ ರೂ.50,000/-ಗಳನ್ನು ಪರಿಹಾರ ಘೋಷಿಸುವಂತೆ ಮನವಿ ಮಾಡಿದರು.