ಬೆಂಗಳೂರು: ದೇಶದ ಜನರಿಗಾಗಿ ಹಮ್ಮಿಕೊಂಡಿರುವ ಕೊರೊನಾ ಲಸಿಕಾ ಅಭಿಯಾನದ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳ ವಿರುದ್ಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್(K Sudhakar) ಸದನದಲ್ಲಿ ಕಿಡಿಕಾರಿದ್ದಾರೆ. 


COMMERCIAL BREAK
SCROLL TO CONTINUE READING

‘ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ನೇತೃತ್ವದಲ್ಲಿ ಇಡೀ ವಿಶ್ವವೇ ಬೆರಗಾಗುವ ರೀತಿ ಇತಿಹಾಸದ ಅತೀ ದೂಡ್ಡ ವಯಸ್ಕರ ಲಸಿಕಾ ಅಭಿಯಾನ(Corona Vaccination Campaign)ವನ್ನು ಭಾರತ ಅತ್ಯಂತ ಯಶಸ್ವಿಯಾಗಿ ಕೈಗೊಂಡಿರುವ ಈ ಸಂದರ್ಭದಲ್ಲಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲ ಕಾಂಗ್ರೆಸ್ ನಾಯಕರ ಪ್ರಯತ್ನ ನಿಜಕ್ಕೂ ದುರದೃಷ್ಟಕರ’ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.


ಹಿಜಾಬ್ ವಿವಾದ: ಕೋರ್ಟ್ ಆದೇಶ ಮಕ್ಕಳಿಗೆ ಮಾತ್ರ ಹೇಳಿರೋದು, ಶಿಕ್ಷಣ ಸಿಬ್ಬಂದಿಗೆ ಅಲ್ಲ: ಯು ಟಿ ಖಾದರ್


‘ಕೋವಿಡ್-19 ಲಸಿಕೆ(COVID-19 vaccine)ಯೊಂದೇ ಸಾಂಕ್ರಾಮಿಕ ರೋಗಕ್ಕೆ ಶಾಶ್ವತ ಪರಿಹಾರ ಎಂಬ ದೂರದೃಷ್ಟಿಯಿಂದ ಪ್ರಧಾನಿ ಮೋದಿ ಅವರು ಫೆಬ್ರವರಿ-ಮಾರ್ಚ್ 2020ರಲ್ಲೇ ಸಂಶೋಧಕರು, ವಿಜ್ಞಾನಿಗಳು, ಲಸಿಕಾ ತಯಾರಿಕಾ ಕಂಪನಿಗಳ ಜೊತೆ ಮಾತುಕತೆ ನಡೆಸಿ ದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾದ ಕೇವಲ 11 ತಿಂಗಳೊಳಗೆ ಲಸಿಕಾ ಅಭಿಯಾನ ಆರಂಭವಾಗಲು ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಿದರು’ ಅಂತಾ ಸಚಿವ ಸುಧಾಕರ್ ಹೇಳಿದ್ದಾರೆ.


‘135 ಕೋಟಿ ಜನಸಂಖ್ಯೆ ಇರುವ ಭಾರತದಂತಹ ಬೃಹತ್ ದೇಶವನ್ನು ಸಾಂಕ್ರಾಮಿಕದಿಂದ ರಕ್ಷಿಸಿದ ಪ್ರಧಾನಿ ಮೋದಿ(PM Modi)ರವರ ಕಾರ್ಯವೈಖರಿಯನ್ನು ಇಂದು ಇಡೀ ವಿಶ್ವವೇ ಮೆಚ್ಚಿದೆ. ಭಾರತದ ಈ ಸಾಧನೆಯನ್ನು ಅಭಿನಂದಿಸುವ ಹೃದಯ ವೈಶಾಲ್ಯತೆ ಇಲ್ಲದಿದ್ದರೆ ಕನಿಷ್ಠ ಪಕ್ಷ ಲಸಿಕಾ ಅಭಿಯಾನದ ಬಗ್ಗೆ ಟೀಕೆ, ಅಪಪ್ರಚಾರ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರನ್ನು(Congress Leaders) ಕೋರುವೆ’ ಅಂತಾ ಸಚಿವ ಸುಧಾಕರ್ ಸದನದಲ್ಲಿ ಮನವಿ ಮಾಡಿದರು.


Noise Pollution: ದೊಡ್ಡ ಗಣಪತಿ ದೇವಸ್ಥಾನದ ಗಂಟೆ ಶಬ್ದಕ್ಕೆ ನೋಟಿಸ್ ಜಾರಿ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.