Noise Pollution: ದೊಡ್ಡ ಗಣಪತಿ ದೇವಸ್ಥಾನದ ಗಂಟೆ ಶಬ್ದಕ್ಕೆ ನೋಟಿಸ್ ಜಾರಿ...!

ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ, ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾ, ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳು ಇದರಡಿ ಬರಲಿದೆ.

Written by - Puttaraj K Alur | Last Updated : Feb 15, 2022, 07:16 PM IST
  • ದೇವಸ್ಥಾನದಲ್ಲಿ ಜೋರಾಗಿ ಗಂಟೆ ಹೊಡೆದರೇ ಪ್ರಕರಣ ದಾಖಲು
  • ಬೆಂಗಳೂರಿನ ದೇವಸ್ಥಾನಗಳಿಗೆ ದೊಡ್ಡ ಗಣಪತಿ ದೇವಸ್ಥಾನ ಸಮೂಹದಿಂದ ನೋಟಿಸ್
  • ನಿಯಮಿತ ಶಬ್ದ ಮಿತಿಗಿಂತ ಜೋರಾಗಿ ಗಂಟೆ ಬಾರಿಸಿದರೆ Noise Pollutionನಡಿ ಕೇಸ್ ದಾಖಲು
Noise Pollution: ದೊಡ್ಡ ಗಣಪತಿ ದೇವಸ್ಥಾನದ ಗಂಟೆ ಶಬ್ದಕ್ಕೆ ನೋಟಿಸ್ ಜಾರಿ...! title=
ದೇವಸ್ಥಾನಗಳಲ್ಲಿ ಜೋರಾಗಿ ಗಂಟೆ ಹೊಡೆಯಂಗಿಲ್ಲ!

ಬೆಂಗಳೂರು: ದೇವಸ್ಥಾನದಲ್ಲಿ ಜೋರಾಗಿ ಗಂಟೆ ಹೊಡೆದರೇ ಪ್ರಕರಣ ದಾಖಲಾಗಲಿದೆ ಎಂದು ದೊಡ್ಡ ಗಣಪತಿ ದೇವಸ್ಥಾನ(Donna Ganapathi Temple) ಸಮೂಹ ದೇವಸ್ಥಾನಗಳಿಗೆ ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡಿದೆ.

ಧಾರ್ಮಿಕ ದತ್ತಿ ಇಲಾಖೆ ನೀಡಿದ ಈ ನೋಟಿಸ್ ಬೆಂಗಳೂರು ಪೊಲೀಸರಿಗೂ ನೀಡಲಾಗಿದ್ದು, ನಿಯಮಿತ ಶಬ್ದ ಮಿತಿಗಿಂತ ಜೋರಾಗಿ ಗಂಟೆ ಬಾರಿಸಿದರೆ Noise Pollution (regulation and control rules amended 2000 farmed under the Environment Pollution act 1986) ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಹಿಜಾಬ್ ವಿವಾದ: ಕೋರ್ಟ್ ಆದೇಶ ಮಕ್ಕಳಿಗೆ ಮಾತ್ರ ಹೇಳಿರೋದು, ಶಿಕ್ಷಣ ಸಿಬ್ಬಂದಿಗೆ ಅಲ್ಲ: ಯು ಟಿ ಖಾದರ್

ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ(Hindu Temples)ದಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಬಳಸುತ್ತಿರುವುದಕ್ಕೆ ಬಸವನಗುಡಿ ಪೊಲೀಸ್ ಠಾಣೆಯಿಂದ ದೊಡ್ಡ ಗಣಪತಿ ದೇವಸ್ಥಾನ ಸಮೂಹಕ್ಕೆ ನೋಟೀಸ್ ನೀಡಿದ್ದಾರೆ. ಪೊಲೀಸ್ ನೋಟಿಸ್ ಹಿನ್ನೆಲೆಯಲ್ಲಿ ಹೆಚ್ಚಿನ ಶಬ್ದದ ಗಂಟೆ(Environment Pollution)ಹೊಡೆಯದಂತೆ ಬಸವನಗುಡಿಯ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿದ್ದಾರೆ.

ದೊಡ್ಡ ಗಣೇಶ ದೇವಸ್ಥಾನ ಸಮೂಹ ದೇವಸ್ಥಾನಗಳೆಂದರೆ ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ, ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾ, ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳು ಇದರಡಿ ಬರಲಿದೆ. ಗಂಟೆ ಶಬ್ದಕ್ಕೆ ರಾಜ್ಯ ಸರ್ಕಾರದ ಪೊಲ್ಯೂಷನ್ ಬೋರ್ಡ್ ಮತ್ತು ಮುಜರಾಯಿ ಇಲಾಖೆ ಮಿತಿ ನಿಗದಿಪಡಿಸಿದೆ.

ಇದನ್ನೂ ಓದಿ: Online Gambling Ban : ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಸರ್ಕಾರ ಚಿಂತನೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News