ಹಾವೇರಿ: ರಷ್ಯಾದ ಶೆಲ್ ದಾಳಿಗೆ ಉಕ್ರೇನ್‌(Russia Ukraine War)ನಲ್ಲಿದ್ದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಸಾವನ್ನಪ್ಪಿರುವುದನ್ನು ನೆನೆದು ಆರೋಗ್ಯಾಧಿಕಾರಿ(Health Officer)ಯೊಬ್ಬರು ಕಣ್ಣೀರಿಟ್ಟಿದ್ದಾರೆ. ಮೃತ ನವೀನ್ ಕುಟುಂಬದವರ ಆರೋಗ್ಯ ತಪಾಸಣೆ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷತಾ ಅಧಿಕಾರಿ ವಿಜಯಲಕ್ಷ್ಮಿ ಮಠದ ಅವರು ಕಣ್ಣೀರಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹಾವೇರಿ ಜಿಲ್ಲೆ(Haveri District)ಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನಿವಾಸದಲ್ಲಿ ನವೀನ್(Naveen Gyanagoudar) ತಂದೆ, ತಾಯಿ ಮತ್ತು ಅಣ್ಣನ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮೂವರನ್ನು ತಪಾಸಣೆ ನಡೆಸಲಾಗಿದ್ದು, ಆರೋಗ್ಯ ನಾರ್ಮಲ್ ಆಗಿದೆ. ಸಾವಿನ ಸುದ್ದಿಯಿಂದ ಯಾರಿಗಾದ್ರೂ ಆಘಾತವಾಗುವುದು ಸಾಮಾನ್ಯ. ನನಗೂ ಸಹ ನವೀನ್ ಸಾವಿನಿಂದ ಆಘಾತವಾಯಿತು ಅಂತಾ ವಿಜಯಲಕ್ಷ್ಮಿ ಹೇಳಿದ್ದಾರೆ.  


ಇದನ್ನೂ ಓದಿRussia Ukraine War: ಉಕ್ರೇನ್‌ನಿಂದ ಐದು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್


ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನವೀನ್(Naveen Gyanagoudar) ನನ್ನು ನಾನು ಎರಡ್ಮೂರು ಬಾರಿ ಭೇಟಿಯಾಗಿದ್ದೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ನವೀನ್ ತನ್ನೂರಿಗೆ ಬಂದಿದ್ದ. ‘ನಾನು ನಿವೃತ್ತಿ ನಂತರ ನಿಮ್ಮಆಸ್ಪತ್ರೆಗೆ ಬಂದು ನರ್ಸ್ ಆಗಿ ಕೆಲಸ ಮಾಡುತ್ತೇನೆ. ನನ್ನನ್ನು ನೇಮಕ ಮಾಡಿಕೊಳ್ತಿಯಾ ಅಂತಾ ನಾನು ನವೀನ್ ಗೆ ಜೋಕ್ ಮಾಡಿದ್ದೆ’ ಅಂತಾ ನೆನಪಿಸಿಕೊಂಡು ದುಃಖ ವ್ಯಕ್ತಪಡಿಸಿದರು.  


ಕಳೆದ ಸೋಮವಾರ ನಾನು ಡ್ಯೂಟಿಯಲ್ಲಿದ್ದಾಗ ನವೀನ್ ಜೊತೆ ಅವರ ತಂದೆ ಮತ್ತು ಅಣ್ಣ ಮಾತಾಡಿದ್ದರು. ನವೀನ್ ನನ್ನು ಏಕೆ ಕರೆಸಿಲ್ಲವೆಂದು ಅವರ ತಂದೆ ಬಳಿ ನಾನು ಕೇಳಿದ್ದೆ. ಯುದ್ಧ(Russia Ukraine Crisis) ನಡೆಯೋ ಸ್ಥಳದಿಂದ ನವೀನ್ ದೂರ ಇದ್ದಾನಮ್ಮ.‌‌.. ಅವನು ಸೇಫ್ ಆಗಿದ್ದಾನೆ ಅಂತಾ ಅವರ ತಂದೆ ಹೇಳಿದ್ದರು.ಆದರೆ ಅದೇ ದಿನ ಮಧ್ಯಾಹ್ನವೇ ನವೀನ್ ಸಾವಿನ ಸುದ್ದಿ ಬಂತು. ಆತನ ಸಾವಿನ ಸುದ್ದಿ ಕೇಳಿ ನನಗೆ ಶಾಕ್ ಆಯಿತು‌. ಬಾಳಿ ಬದುಕಬೇಕಿದ್ದ ಪ್ರತಿಭಾವಂತ ಹುಡುಗ ಸಾವು ನೆನೆಸಿಕೊಂಡು ನನಗೆ ದುಃಖವಾಯಿತು ಅಂತಾ ಹೇಳಿದ್ದಾರೆ.  


ಇದನ್ನೂ ಓದಿ: Russia Ukraine Crisis: ‘ಮಲಿಬು’ ರಕ್ಷಣೆಗೆ ಮುಂದಾದ ಬೆಂಗಳೂರು ಯುವಕರ ತಂಡ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.