Russia Ukraine War: ಉಕ್ರೇನ್‌ನಿಂದ ಐದು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್

ಯುದ್ಧಾತಂಕದ ಉಕ್ರೇನ್‌ನಿಂದ (Russia-Ukraine War) ವಿದ್ಯಾಭ್ಯಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ನೆನ್ನೆ ದೆಹಲಿಗೆ ಬಂದಿದ್ದ 6ಜನರಲ್ಲಿ ಐದು ಜನ ಬೆಂಗಳೂರಿಗೆ ಬಂದಿದ್ದಾರೆ.

Written by - Zee Kannada News Desk | Last Updated : Mar 2, 2022, 02:08 PM IST
  • ಯುದ್ಧಾತಂಕದ ಉಕ್ರೇನ್‌ನಿಂದ ವಿದ್ಯಾಭ್ಯಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ.
  • ನೆನ್ನೆ ದೆಹಲಿಗೆ ಬಂದಿದ್ದ 6ಜನರಲ್ಲಿ ಐದು ಜನ ಬೆಂಗಳೂರಿಗೆ ಬಂದಿದ್ದಾರೆ.
  • ಐದು ಜನ‌ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
Russia Ukraine War: ಉಕ್ರೇನ್‌ನಿಂದ ಐದು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್ title=
Students rescue from ukraine

Russia Ukraine War: ಕಳೆದ ಒಂದು ವಾರದಿಂದ ಉಕ್ರೇನ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ (Russia Ukraine War) ನಡೆಯುತ್ತಿದೆ. ಈ ಮಧ್ಯೆ ವಿದ್ಯಾಭ್ಯಾಸಕ್ಕೆಂದು ಉಕ್ರೇನ್‌ಗೆ ತೆರಳಿದ್ದ ಸಾವಿರಾರು ವಿದ್ಯಾರ್ಥಿಗಳು ಅಲ್ಲಿ ಭಯದ ವಾತಾರಣದಲ್ಲಿ ರಕ್ಷಣೆಗಾಗಿ ಹಪಹಪಿಸುತ್ತಿದ್ದಾರೆ. ಭಾರತ ಸರ್ಕಾರ ಆ ಪ್ರದೇಶಗಳಲ್ಲಿ ಸಿಲುಕಿರುವ ದೇಶದ ವಿದ್ಯಾರ್ಥಿಗಳನ್ನು ಕರೆತರಲು ಸೂಕ್ತ ವ್ಯವಸ್ಥೆಯನ್ನೂ ಕೈಗೊಳ್ಳುತ್ತಿದ್ದು, ಹಲವು ವಿದ್ಯಾರ್ಥಿಗಳು  ತಾಯ್ನಾಡಿಗೆ ಮರಳಿದ್ದಾರೆ. 

ಯುದ್ಧಾತಂಕದ ಉಕ್ರೇನ್‌ನಿಂದ (Russia-Ukraine War) ವಿದ್ಯಾಭ್ಯಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ನೆನ್ನೆ ದೆಹಲಿಗೆ ಬಂದಿದ್ದ 6ಜನರಲ್ಲಿ ಐದು ಜನ ಬೆಂಗಳೂರಿಗೆ ಬಂದಿದ್ದಾರೆ. ಒಬ್ಬ ಹೈದರಾಬಾದ್ ನಲ್ಲಿ ಇಳಿದುಕೊಂಡರೆ ಉಳಿದ ಐದು ಜನ‌ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಇದನ್ನೂ ಓದಿ- ಉಕ್ರೇನ್‌ನ ಯುದ್ಧದಲ್ಲಿ ಕನ್ನಡಿಗ ನವೀನ್ ಶೇಖರಪ್ಪ ಮರಣ, ಮೃತನ ತಂದೆಗೆ ಪ್ರಧಾನಿ ಕರೆ

ಇಂದು ಬೆಂಗಳೂರಿಗೆ ಬಂದಿಳಿದ ರಾಜ್ಯದ ವಿದ್ಯಾರ್ಥಿಗಳ ವಿವರ:
ಬೆಂಗಳೂರು (Bengaluru) ಗ್ರಾಮಾಂತರ ನೆಲಮಂಗಲದ ಭಾವನಾ ರಾಜಣ್ಣ, ಬೆಂಗಳೂರಿನ ಆಫ್ನಾ ಸಬೀನಾ, ಆರ್ಯನ್ ರಾವತ್, ಬೆಂಗಳೂರಿನ ಕುರುಬರಹಳ್ಳಿಯ
ಧನಂಜಯ್.ಎ ಮತ್ತುಮಹ್ಮದ್ ಫೈಸಲ್ ಹುಸೇನ್  ನಗರಕ್ಕೆ ಆಗಮಿಸಿದರು. ಅವರ ಪೋಷಕರು ಮಕ್ಕಳನ್ನು ಬರಮಾಡಿಕೊಂಡು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ- Russia Ukraine war : ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವು

ಇದೇ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಮತ್ತು ಪೋಷಕರು ತಾಯ್ನಾಡಿಗೆ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಇನ್ನು ಉಕ್ರೇನ್ ನಲ್ಲಿ ಇರುವ ಎಲ್ಲಾ ಕನ್ನಡಿಗರು ಹಾಗೂ ಭಾರತೀಯ ವಿದ್ಯಾರ್ಥಿಗಳು ತವರಿಗೆ ಸುರಕ್ಷಿತವಾಗಿ ವಾಪಸ್ಸಾಗಬೇಕು ಎಂದು ಪ್ರಾರ್ಥಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News