ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ವಿಧಾನಸಭೆ ಚುನಾವಣೆಯ ಅಬ್ಬರ ಜೋರಾಗಿದ್ದರೆ, ಇನ್ನೊಂದೆಡೆ ವರುಣನ ಅಬ್ಬರ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುರುವಾರ ವರುಣ ಅಬ್ಬರಿಸಿದ್ದಾನೆ. ಗುಡುಗು, ಮಿಂಚಿನೊಂದಿಗೆ ಸುರಿದ ವರ್ಷಧಾರೆಗೆ ಇಬ್ಬರು ಬಲಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ವಿದ್ಯುತ್ ಕಂಬದ ಮೇಲೆ ಬಿದ್ದ ಮರ ಸ್ಪರ್ಶಿಸಿದ ಕಾರಣ ಮೂಡಿಗೆರೆಯ ದಾರದ ಹಳ್ಳಿಯಲ್ಲಿ ಯುವತಿಯೋರ್ವಳು ಮೃತಪಟ್ಟಿದ್ದರೆ, ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಸಿಡಿಲು ಬಡಿದು ಓರ್ವ ಯುವಕ ಸಾವನ್ನಪ್ಪಿದ್ದಾನೆ. ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.


ಇನ್ನು ರಾಜಧಾನಿ ಬೆಂಗಳೂರಿನಲಿ ಮಳೆಗಿಂತ ಹೆಚ್ಚಾಗಿ ಆರ್ಭಟಿಸಿದ ಗುಡುಗು-ಮಿಂಚು  ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತು. ಕೆಲವೆಡೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಯಿತು.