ಇನ್ನು ಮೂರು ದಿನ ಕುಂಭ ದ್ರೋಣ ಮಳೆ ! ಬೀಸಲಿದೆ ಭಾರೀ ಬಿರುಗಾಳಿ !ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ
Karnataka Rain update Today : ಕಳೆದ ಎರಡು ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನು ಮೂರು ದಿನಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
Karnataka Rain update : ರಾಜ್ಯದಲ್ಲಿ ಇನ್ನು ಮೂರು ದಿನಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು,ಬಿರುಗಾಳಿ ಸಹಿತ ಮಳೆಯ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಂದು ಕೂಡಾ ಅದೇ ರೀತಿ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಕೂಡಾ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ.ಇನ್ನು ಮೂರೂ ದಿನಗಳವರೆಗೆ ಈ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ : ಹೇಳಿಕೊಟ್ಟಂತೆ ಹೇಳದಿದ್ದರೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ಲಾಕ್, ಮಹಿಳೆಯರಿಗೆ SIT ಬೆದರಿಕೆ : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
ಮೊದಲೇ ಹೇಳಿದಂತೆ ಇನ್ನು ಮೂರು ದಿನಗಳವರೆಗೆ ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಇಂದು ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಕೆಲ ಕಡೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ.
ಇನ್ನು ತುಮಕೂರು, ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀಟರ್ ವೇಗದಲ್ಲಿ ಬಿರುಗಾಳಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ದಕ್ಷಿಣ ಒಳನಾಡು ಜಿಲ್ಲೆಗಳು ಸೇರಿ 18-20 ಜಿಲ್ಲೆಗಳಿಗೆ ಭಾರೀ ಬಿರುಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ಯಲ್ಲೋ ಅಲರ್ಟ್ ನೀಡಲಾಗಿದೆ.
ಇದನ್ನೂ ಓದಿ : ರಿತನ್ಯಾಗೆ ಒಲಿದ ʼಕರ್ನಾಟಕ ಟಾಪ್ ಮಾಡೆಲ್ʼ ಪ್ರಶಸ್ತಿ ಗರಿ..!
ನಿನ್ನೆ ಬೆಂಗಳುರಿನಲ್ಲಿಸುರಿದ ಮಳೆಗೆ ನಗರದ ಹಲವೆಡೆ 179 ಮರಗಳು ಧರೆಗುರುಳಿವೆ. ಆರ್.ಆರ್ ನಗರದಲ್ಲಿ ಹೆಚ್ಚು ಮರಗಳು ಧರೆಗಿರುಳಿವೆ ಎಂದು ಪಾಲಿಕೆ ಮಾಹಿತಿ ನೀಡಿದೆ.
ಆರ್.ಆರ್ ನಗರದಲ್ಲಿ 35
ಪಶ್ಚಿಮ ವಲಯ 27
ಮಹದೇವಪುರ 2
ಪೂರ್ವ ವಲಯ 20
ದಕ್ಷಿಣ ವಲಯ 18
ಯಲಹಂಕ 5
ದಾಸರಹಳ್ಳಿ 2
ಬೊಮ್ಮನಹಳ್ಳಿ 20 ಮರಗಳು ಧರಾಶಾಹಿಯಾಗಿವೆ.
ಮಳೆಯ ಆರ್ಭಟಕ್ಕೆ ಜಲಾವೃತ ಪ್ರದೇಶಗಳು
-ಹೆಬ್ಬಾಳ ವೃತ್ತ
-CQAL ಜಯಮಹಲ್ ರಸ್ತೆ
-ಉದಯ ಟಿವಿ ಜಂಕ್ಷನ್
-ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ (ಯಲಹಂಕ)
-ಕೆಆರ್ ಮಾರುಕಟ್ಟೆ
-ಟಿನ್ ಫ್ಯಾಕ್ಟರಿ
-ನಾಯಂಡಹಳ್ಳಿ
-ಬೆನ್ನಿಗಾನಹಳ್ಳಿ ರೈಲ್ವೆ ಕೆಳಸೇತುವೆ
-SJP ರಸ್ತೆ (ಟೌನ್ ಹಾಲ್ ಹತ್ತಿರ)
-ಗಾಲಿ ಆಂಜನೇಯ ಸ್ವಾಮಿ ದೇವಸ್ಥಾನ
-ಮೈಸೂರು ರಸ್ತೆ
-ರಾಮಮೂರ್ತಿ ನಗರ
-ಹೊರಮಾವು ಕೆಳಸೇತುವೆ
-ಹೊರ ವರ್ತುಲ ರಸ್ತೆ
-ಕಂಟೋನ್ಮೆಂಟ್ ರೈಲ್ವೆ ಕೆಳಸೇತುವೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.