ರಾಜ್ಯದ ವಿವಿದೆಡೆ ಸುರಿಯುತ್ತಿರುವ ವರ್ಷಧಾರೆಗೆ ಜನ ಜೀವನ ಅಸ್ತವ್ಯಸ್ತ
ರಾತ್ರಿ ಇಡೀ ಸುರಿದ ಬಾರಿ ಮಳೆಗೆ ಕೆರೆಯಂತಾದ ನೆಲಮಂಗಲ ಮುಖ್ಯರಸ್ತೆ.
ಬೆಂಗಳೂರು: ರಾಜ್ಯದ ವಿವಿದೆಡೆ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲವು ಪ್ರದೇಶಗಳಲ್ಲಿ ಮನೆಗಳು ಕೆರೆಗಳಾಗಿ ಮಾರ್ಪಟ್ಟಿವೆ. ರಾತ್ರಿ ಇಡೀ ಸುರಿದ ಮಳೆಯ ಪ್ರಭಾವದಿಂದಾಗಿ ನೆಲಮಂಗಲ ಮುಖ್ಯರಸ್ತೆ ಕೆರೆಯಂತಾಗಿದೆ. ನೀರಿನಲ್ಲಿ ಪ್ರಯಾನಿಸಲಾಗದೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತುಮಕೂರು, ಬೆಂಗಳೂರು, ವಿಜಯಪುರ, ರಾಮನಗರ, ಕೋಲಾರ ಸೇರಿದಂತೆ ವಿವಿದೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ಬಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ನೆಲಮಂಗಲದ ಮಲ್ಲಪುರದಲ್ಲಿ ಎರಡು ಮನೆ ಕುಸಿದಿದೆ. ರಾಮನಗರ ಜಿಲ್ಲೆಯಲ್ಲಿ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಕನಕಪುರ-ಬೆಂಗಳೂರು ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ವಿಜಯಪುರ ಜಿಲ್ಲೆಯಲ್ಲಿ ಬಸವನಬಾಗೆವಾಡಿ ತಾಲೂಕಿನಲ್ಲಿ ಮನೆ ಗೋಡೆ ಕುಸಿದು 60 ವರ್ಷದ ತಾಯಿ, 31 ವರ್ಷದ ಮಗಳ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಅಲ್ಲದೆ ಕೋಲಾರ ಜಿಲ್ಲೆಯಾದ್ಯಂತ ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, 2 ಬೃಹತ್ ಮರಗಳು ಮತ್ತು 2 ವಿದ್ಯುತ್ ಕಂಬಗಳು ಧರೆಗುರುಳಿವೆ, ಇದರಿಂದಾಗಿ ಎರಡು ಮನೆಗಳಿಗೆ ಹಾನಿಯುಂಟಾಗಿದೆ.