ಬೆಂಗಳೂರು : ಮುಂದಿನ 24 ಗಂಟೆಗಳಲ್ಲಿ ಭಾರೀ ಗಾಳಿ ಸಮೇತ ಬೆಂಗಳೂರಿನಲ್ಲಿ ಮಳೆ ಆಗಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಅಲ್ಲದೆ, ಕರಾವಳಿ, ಉತ್ತರ ಒಳನಾಡಿನಲ್ಲಿ ಜೂ. 21 ರವರೆಗೆ ಭಾರೀ ಮಳೆ(Heavy Rainfall)ಯಾಗುವ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.


ಇದನ್ನೂ ಓದಿ : SSLC Exam 2021 : ಜುಲೈ ಕೊನೆಯ ವಾರದಲ್ಲಿ SSLC ಪರೀಕ್ಷೆ ಫಿಕ್ಸ್!


ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಲೂರು ಜಿಲ್ಲೆಗಳಿಗೆ ಆರೇಂಜ್(Orange Alert) ಎಚ್ಚರಿಕೆ ನೀಡಲಾಯಿತು . ನಗರದ ಐಎಮ್‌ಡಿಯ ಪ್ರಾದೇಶಿಕ ಶಾಖೆ ಮೀನುಗಾರರಿಗೆ ಜೂ.18 ಮತ್ತು 19 ರಂದು ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿತು.


ಇದನ್ನೂ ಓದಿ : 2nd PUC Result 2021 : ದ್ವಿತೀಯ PU ಫಲಿತಾಂಶ ಗ್ರೇಡ್ ಬದಲು ಮಾರ್ಕ್ಸ್ ನೀಡಲು ನಿರ್ಧಾರ!


ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 21 ಸೆಂ.ಮೀ ಗರಿಷ್ಠ ಮಳೆ(Heavy Rain)ಯಾಗಿದೆ. ಸಿದ್ದಾಪುರ 12 ಸೆಂ.ಮೀ, ಮಡಿಕೇರಿ 11 ಸೆಂ.ಮೀ, ಕುಂದಾಪುರ 9 ಸೆಂ.ಮೀ, ಸೊರಬ 8 ಸೆಂ.ಮೀ, ಸಾಗರ 7 ಸೆಂ.ಮೀ, ಬೆಳ್ತಂಗಡಿ 6 ಸೆಂ.ಮೀ, ಬೆಳಗಾವಿ, ಸಕಲೇಶಪುರ 5 ಸೆಂ.ಮೀ, ಮೂಡುಬಿದರೆ, ಪುತ್ತೂರು, ಕಾರವಾರ 4 ಸೆಂ.ಮೀ, ಭಟ್ಕಳ, ಹಾವೇರಿ, ಭದ್ರಾವತಿ, ಶಿವಮೊಗ್ಗ 3 ಸೆಂ.ಮೀ, ಮಂಗಳೂರು, ಧಾರವಾಡ, ತರೀಕೆರೆ, ಹಾಸನದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.