ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರಿ ದಟ್ಟಣೆ ಸಮಸ್ಯೆ ತಪ್ಪಿಸಲು ಹಾಗೂ ಪ್ರಯಾಣ ಸಮಯವನ್ನು ಕಡಿಮೆ ಮಾಡಲು ಅನುಕೂಲವಾಗುವಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹೆಲಿ ಟ್ಯಾಕ್ಸಿ ಸೇವೆ ಆರಂಭವಾಗಿದೆ.


COMMERCIAL BREAK
SCROLL TO CONTINUE READING

ಬಿಐಎಎಲ್(Bangalore International Airport Limited) ಕೊಚ್ಚಿ ಮೂಲದ ತುಂಬಿ ಏವಿಯೇಷನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನಗರದಿಂದ 40 ಕಿ.ಮೀ. ದೂರದಲ್ಲಿರುವ ದೇವನಹಳ್ಳಿಯ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಾರ್ವಜನಿಕೈಗೆ ಹೆಲಿಕಾಪ್ಟರ್(ಹೆಲಿಟ್ಯಾಕ್ಸಿ) ಸೇವೆ ಒದಗಿಸಲಿದೆ. 


ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ಸೋಮವಾರದಿಂದ ಹೆಲಿಟ್ಯಾಕ್ಸಿ ಸೇವೆ ಆರಂಭಿಸಲಾಗಿದೆ. ಬೆಳಿಗ್ಗೆ 6.30ಕ್ಕೆ, ಮಧ್ಯಾಹ್ನ 3.15ಕ್ಕೆ ಮತ್ತು ಸಂಜೆ 6 ಗಂಟೆಗೆ ಹೀಗೆ ದಿನಕ್ಕೆ ಮೂರು ಟ್ರಿಪ್‌ನಂತೆ ಈ ಸೇವೆ ಇರಲಿದ್ದು, ಏಕಕಾಲಕ್ಕೆ ಪೈಲೆಟ್ ಸೇರಿ 7 ಮಂದಿ ಪ್ರಯಾಣಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೂ ಸೇವೆಯನ್ನು ವಿಸ್ತರಿಸುವ ಯೋಜನೆಯಿದೆ ಎಂದು ತುಂಬಿ ಏವಿಯೇಷನ್ ಸಂಸ್ಥೆ ತಿಳಿಸಿದೆ. 


ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ರಸ್ತೆ ಮಾರ್ಗವಾಗಿ ಪ್ರಯಾಣ ಮಾಡಲು ಕನಿಷ್ಟವೆಂದರೂ 2 ರಿಂದ 3 ಗಂಟೆ ಸಮಯ ಬೇಕು. ಆದರೆ ಹೆಲಿಕಾಪ್ಟರ್ ಸೇವೆಯಿಂದ ಆ ಪ್ರಯಾಣ ಸಮಯ 15 ನಿಮಿಷಗಳಿಗೆ ಇಳಿಯಲಿದೆ. ಈ ಹೆಲಿಟ್ಯಾಕ್ಸಿ ಟಿಕೆಟ್ ದರ ಒಬ್ಬರಿಗೆ 3,500ರೂ. (ತೆರಿಗೆ ರಹಿತ) ನಿಗದಿಪಡಿಸಲಾಗಿದೆ. 


ಗ್ರಾಹಕರು ಹೆಲಿಕಾಪ್ಟರ್ ನಲ್ಲಿ ೧೫ ಕೆಜಿ ತೂಕದಷ್ಟು ಲಗೇಜ್ ಹೊತ್ತೊಯ್ಯಬಹುದಾಗಿದ್ದು, ಅದಕ್ಕಿಂತ ಹೆಚ್ಚಿನ ತೂಕದ ಲಗೇಜ್‌ಗೆ ಹೆಚ್ಚಿನ ಶುಲ್ಕ ನೀಡಬೇಕಾಗುತ್ತದೆ.