ಡಿಸೆಂಬರ್ ನಲ್ಲಿ ಅರಣ್ಯೀಕರಣದೊಂದಿಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಹೆರಿಟೇಜ್ ರನ್
ನಗರದಲ್ಲಿ ಅರಣ್ಯೀಕರಣದ ಜೊತೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಯಶಸ್ಸಿನ ಅಂಗವಾಗಿ ‘ವೃಕ್ಷೋಥಾನ್ – ಹೆರಿಟೇಜ್ ರನ್-2023’ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗವುದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಜಯಪುರ: ನಗರದಲ್ಲಿ ಅರಣ್ಯೀಕರಣದ ಜೊತೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಯಶಸ್ಸಿನ ಅಂಗವಾಗಿ ‘ವೃಕ್ಷೋಥಾನ್ – ಹೆರಿಟೇಜ್ ರನ್-2023’ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗವುದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: "ತಪ್ಪು ಮಾಹಿತಿಯ ಹರಡುವಿಕೆಯು ಯಾವುದೇ ದೇಶಕ್ಕೆ ದೊಡ್ಡ ಅಪಾಯ"
ಈ ಕುರಿತಂತೆ ನಿನ್ನೆದಿನ ಜಿಲ್ಲಾಧಿಕಾರಿಗಳವರ ಸಭಾಂಗಣದಲ್ಲಿ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿದ್ದೆ.ಈ ಹಿಂದೆ ಕೋಟಿ ವೃಕ್ಷ ಅಭಿಯಾನ ಕೈಗೊಂಡು 1.50 ಕೋಟಿ ವೃಕ್ಷಗಳನ್ನು ಬೆಳೆಸಲಾಗಿದೆ. ಜನರಲ್ಲಿ ಸಸಿ ಬೆಳೆಸುವ ಅರಿವು ಮೂಡಿಸಬೇಕು.ವಿಜಯಪುರವು ಐತಿಹಾಸಿಕ ಸ್ಮಾರಕಗಳ ನಗರವಾಗಿದ್ದು, ಆ ಕುರಿತಂತೆ ಜಾಗೃತಿ ಮೂಡಿಸಿ, ಪ್ರವಾಸಿಗರನ್ನು ಸೆಳೆಯಲು ನಗರದಲ್ಲಿ ಸ್ವಚ್ಚತೆ, ಸ್ಮಾರಕಗಳ ನಿರ್ಹಣೆ, ಶೌಚಾಲಯಗಳ ನಿರ್ಮಾಣ, ಒತ್ತುವರಿ ತೆರವು ಸೇರಿದಂತೆ ಅಗತ್ಯದ ಎಲ್ಲ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಹೇಳಿದ್ದಾರೆ.
ಇದನ್ನೂ ಓದಿ: 'ಬಾಹ್ಯಾಕಾಶಕ್ಕೆ ಹೋಗಲಿದೆ ಭಾರತದ ಮಹಿಳಾ ರೋಬೋಟ್ ವ್ಯೋಮಿತ್ರ'
‘ವೃಕ್ಷೋಥಾನ್–ಹೆರಿಟೇಜ್ ರನ್ 2023’ ಯಶಸ್ವಿಗೊಳಿಸಿ, ಪರಿಸರದೊಂದಿಗೆ ಐತಿಹಾಸಿಕ ಸ್ಮಾರಕಗಳ ಉಳಿವಿಗೆ ಎಲ್ಲರೂ ಕೈ ಜೋಡಿಸಿ ಎಂದು ಸಚಿವ ಎಂ.ಬಿ.ಪಾಟೀಲ್ ಮನವಿ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.