ಬೆಂಗಳೂರು: ಮೀಸಲಾತಿ, ವಾರ್ಡ್ ಮರು ವಿಂಗಡಣೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠವು ಮೈಸೂರು, ಶಿವಮೊಗ್ಗ, ತುಮಕೂರು ಪಾಲಿಕೆ ಚುನಾವಣೆ ನಡೆಸಲು ಒಪ್ಪಿಗೆ ನೀಡಿದೆ. 


COMMERCIAL BREAK
SCROLL TO CONTINUE READING

ವಾರ್ಡ್‌ ವಿಂಗಡನೆ ಮತ್ತು ಮೀಸಲಾತಿ ನಿಗದಿ ಪ್ರಶ್ನಿಸಿ ತುಮಕೂರಿನ ಕೆ.ಸಂದೀಪ್, ಮೈಸೂರಿನ ಎಂ.ಅನ್ವರ್ ಮುಂತಾದವರು ಪ್ರತ್ಯೇಕವಾಗಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾ ಗೊಳಿಸಿದ ಹೈಕೋರ್ಟ್ ಮೈಸೂರು, ಶಿವಮೊಗ್ಗ, ತುಮಕೂರು ಪಾಲಿಕೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲು ಚುನಾವಣೆ ಆಯೋಗಕ್ಕೆ ಅವಕಾಶ ನೀಡಿದೆ.


ಮೊದಲ ಹಂತದಲ್ಲಿ 29 ನಗರಸಭೆಯ 927 ವಾರ್ಡ್​ಗಳು, 53 ಪುರಸಭೆಯ 1,247 ವಾರ್ಡ್​ಗಳು ಹಾಗೂ 23 ಪಟ್ಟಣ ಪಂಚಾಯಿತಿಗಳ 400 ವಾರ್ಡ್​ಗಳು ಸೇರಿ ಒಟ್ಟು 2,574 ವಾರ್ಡ್​ಗಳಿಗೆ ಇದೇ ತಿಂಗಳ 29ರಂದು ಮೊದಲ ಹಂತದ ಮತದಾನ ನಡೆಯಲಿದೆ. 


ಶಿವಮೊಗ್ಗ, ಮೈಸೂರು, ತುಮಕೂರು ಜಿಲ್ಲೆಗಳ ಚುನಾವಣೆ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಈ ಭಾಗದ ವಾರ್ಡ್​ಗಳಿಗೆ ಚುನಾವಣಾ ದಿನಾಂಕ ಘೋಷಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದ್ದರು.