ಬೆಂಗಳೂರು: ಹಿಜಾಬ್ ನಿಷೇಧದ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) ಶನಿವಾರ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಿಜಾಬ್ (Hijab Row) ನಿಷೇಧ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದರೆ ಬಿಜೆಪಿ ತನ್ನ ಮತ ಬ್ಯಾಂಕ್ ಗಳಿಸಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಿಜಾಬ್ ವಿವಾದ: ಶಾಲಾ-ಕಾಲೇಜುಗಳಲ್ಲಿ ಸಾಮರಸ್ಯ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಬಟ್ಟೆಗಳನ್ನು ನಿಷೇಧಿಸಿದ ಕರ್ನಾಟಕ ಸರ್ಕಾರ


ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳಿಂದ ರಾಜಕೀಯದಲ್ಲಿ ತೊಡಗಿರುವ ಸಣ್ಣಪುಟ್ಟ ಸಂಘಟನೆಗಳು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಹೆಚ್ಚಿನ ತೊಂದರೆ ಕೊಡಲು ಯತ್ನಿಸುತ್ತಿವೆ. ಒಂದೆಡೆ ಬಿಜೆಪಿಯವರು 'ಬೇಟಿ ಪಡಾವೋ, ಬೇಟಿ ಬಚಾವೋ' ಎಂಬ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ನೀತಿ ಬಗ್ಗೆ ಮಾತನಾಡುತ್ತಾರೆ. ಆದರೆ ಈಗ ಬಿಜೆಪಿಯ (BJP) ಪರಿಕಲ್ಪನೆಯು 'ಬೇಟಿ ಪಡಾವೋ' ಬದಲಿಗೆ 'ಬೇಟಿ ಹಟಾವೋ' ಎಂದು ಬದಲಾಗಿದೆ ಎಂದು ಹೇಳಿದ್ದಾರೆ.


ಹೆಣ್ಣುಮಕ್ಕಳು ಹಿಜಾಬ್ ಧರಿಸುವುದನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಹೆಚ್ ಡಿಕೆ (HDK) ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕರಾವಳಿಯ ಕೆಲವು ಶಾಲೆಗಳಿಗೆ ಹೊಸ ಟ್ರೆಂಡ್ ಆರಂಭಿಸಲು ಅನುಮತಿ ನೀಡುವ ಅಗತ್ಯವಿಲ್ಲ. ಕೆಲವು ಕಾಲೇಜುಗಳಲ್ಲಿ ಕೆಲವು ದಿನಗಳಿಂದ ಕೆಲವು ಹುಡುಗಿಯರು ಸ್ಕಾರ್ಫ್ (ಹಿಜಾಬ್) ಧರಿಸಲು ಪ್ರಾರಂಭಿಸಿದರು. ಆಗ ಸಮಸ್ಯೆ ಪ್ರಾರಂಭವಾಯಿತು. ಅವರು ಹಿಂದಿನ ಸಂಪ್ರದಾಯವನ್ನೇ ಅನುಸರಿಸಲಿ. ಹೊಸ ನಿಯಮವನ್ನು ತರುವ ಅಗತ್ಯವಿಲ್ಲ ಎಂದಿದ್ದಾರೆ.


ಇದನ್ನೂ ಓದಿ: 12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ: ಸಿಎಂ ಬೊಮ್ಮಾಯಿ


ಎಲ್ಲಾ ಸರ್ಕಾರಿ ಶಾಲೆಗಳು ರಾಜ್ಯ ಸರ್ಕಾರ ಘೋಷಿಸಿದ ಏಕರೂಪದ ಡ್ರೆಸ್ ಕೋಡ್ (Dress Code) ಅನ್ನು ಅನುಸರಿಸಬೇಕು ಎಂದು ಕರ್ನಾಟಕ ಶಿಕ್ಷಣ ಇಲಾಖೆ ಶನಿವಾರ ನಿರ್ದೇಶನ ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.