ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಸೇರಿದಂತೆ ಧಾರ್ಮಿಕ ವಸ್ತ್ರಗಳನ್ನು ಧರಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿಗೆ ಬೇಸರ ವ್ಯಕ್ತಪಡಿಸಿರುವ ಮುಸ್ಲಿಂ ಸಮುದಾಯದ ಮುಖಂಡರು ಇಂದು (ಮಾರ್ಚ್ 17 ರಂದು)  ಕರ್ನಾಟಕದಲ್ಲಿ ಒಂದು ದಿನದ ಬಂದ್​ಗೆ  ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕ ಉಚ್ಛ ನ್ಯಾಯಾಲಯ (Karntaka Highcourt) ಹಿಜಾಬ್‌ ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮುಸ್ಲಿಂ ಮುಖಂಡರು ಸ್ವಯಂಪ್ರೇರಿತ ಬಂದ್​ಗೆ ಘೋಷಣೆ ಮಾಡಿದ್ದಾರೆ. ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್ ಮಾಡಲು ಸೂಚನೆ ನೀಡಿದ್ದಾರೆ.


ಇದನ್ನೂ ಓದಿ- ಹಿಜಾಬ್ ಗಾಗಿ ಪರೀಕ್ಷೆ ಬಿಟ್ಟ ಯಾದಗಿರಿಯ ವಿದ್ಯಾರ್ಥಿನಿಯರು


ಮುಸ್ಲಿಂ ಸಮುದಾಯದವರು (Muslim community) ನಡೆಸುತ್ತಿರುವ ವ್ಯಾಪಾರ ವಹಿವಾಟು ನಡೆಸದೆ ಹಾಗೂ ಯಾರ ಮೇಲೂ ಯಾವ ರೀತಿಯ ಒತ್ತಾಯವನ್ನೂ ಹೇರದೆ ಈ ಬಂದ್​ಗೆ ಬೆಂಬಲ ಸೂಚಿಸುವಂತೆ ಧರ್ಮಗುರುಗಳ ಸಭೆಯಲ್ಲಿ ಮುಖಂಡ ಸಗೀರ್ ಅಹ್ಮದ್ ಘೋಷಣೆ ಮಾಡಿದ್ದಾರೆ. 


ಆಂದೋಲನದ ಸಮಯದಲ್ಲಿ ಶಾಂತಿಯುತವಾಗಿರಲು ಹಿರಿಯ ಧರ್ಮಗುರುಗಳು ಯುವಕರನ್ನು ಒತ್ತಾಯಿಸಿದರು. ಬಲವಂತವಾಗಿ ಅಂಗಡಿಗಳನ್ನು ಮುಚ್ಚಿ ಬಂದ್ ಹೇರಬಾರದು. ಯಾವುದೇ ಘೋಷಣೆ ಅಥವಾ ಮೆರವಣಿಗೆ ಮಾಡಬಾರದು. ಈ ಪ್ರತಿಭಟನೆಯು ಸಂಪೂರ್ಣವಾಗಿ ಮೌನ, ​​ಶಾಂತಿಯುತವಾಗಿರುತ್ತದೆ ಎಂದವರು ಭರವಸೆಯನ್ನೂ ನೀಡಿದ್ದಾರೆ.


ಇದನ್ನೂ ಓದಿ- "ಇದು ಹಿಜಾಬ್ ಗೆ ನೀಡಿದ ತಡೆಯಲ್ಲ, ನಮ್ಮ ಶಿಕ್ಷಣದ ತಡೆ" ಹೈ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಅಳಲು


ಇದೇ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ವಿದ್ಯಾರ್ಥಿನಿಯರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಧರ್ಮಗುರುಗಳು, ಅವರ ವರ್ತನೆ ಸರಿಯಲ್ಲ, ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.