ಯಾದಗಿರಿ : ಹಿಜಾಬ್ ಗಾಗಿ (Hijab) ಪರೀಕ್ಷೆಯನ್ನೇ ಬಿಟ್ಟು ವಿದ್ಯಾರ್ಥಿಗಳು ಕಾಲೇಜಿನಿಂದ ವಾಪಾಸಾದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಹಿಜಾಬ್ ಧರಿಸದೆ ತರಗತಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿ, ೩೫ ಮಂದಿ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ (Yadagiri Students).
ಯಾದಗಿರಿಯ ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ಪೂರಕ (second PU exam) ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಆಗಮಿಸಿದ್ದರು. ಹಿಜಾಬ್ (Hijab) ತೆಗೆದು ಪರೀಕ್ಷೆ ಬರೆಯುವಂತೆ ಸೂಚಿಸಿದಾಗ ಅದಕ್ಕೆ ಒಪ್ಪದ ವಿದ್ಯಾರ್ಥಿಗಳು ಕೋರ್ಟ್ ಆದೇಶ ಬರುವವರೆಗೂ ಕಾಯುವುದಾಗಿ ಹೇಳಿದ್ದರು.
ಇದನ್ನೂ ಓದಿ : Hijab verdict: ‘ಹಿಜಾಬ್ ಒಳಗಿರುವ ಮತ ಗಟ್ಟಿಗೊಳಿಸಲು ಯತ್ನಿಸಿದ ಸಿದ್ದರಾಮಯ್ಯಗೆ ಹಿನ್ನಡೆ’
ಆದರೆ ಕೋರ್ಟ್ (Karnataka High Court) ಆದೇಶ ಬಂದ ನಂತರ ಕ್ಲಾಸ್ ಬಿಟ್ಟು ಹೋಗುವುದಾಗಿ ಹೇಳಿ ಪರೀಕ್ಷೆ ಬಿಟ್ಟು ಹೊರ ನಡೆದಿದ್ದಾರೆ (Hijab Verdict). ನಾವು ಬುರ್ಖಾ, ಹಿಜಾಬ್ ಬಿಟ್ಟು ತರಗತಿಗೆ ಬರುವುದಿಲ್ಲ ಎನ್ನುವುದು ಆ ವಿದ್ಯಾರ್ಥಿಗಳ ವಾದ. ಬುರ್ಖಾ, ಹಿಜಾಬ್ ಬಿಟ್ಟು ತರಗತಿಗೆ ಹಾಜರಾಗುವುದಿಲ್ಲ ಎಂದು ಹೇಳಿ, 35 ಜನ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ.
ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಹಿಜಾಬ್ ಹಾಕಿಕೊಂಡೇ ತರಗತಿಗೆ ಬರುವುದಾಗಿ ಹೇಳಿ ಪರೀಕ್ಷೆ ಬರೆಯದೆ ಹೊರ ನಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ಶಕುಂತಲಾ ಹೇಳಿದ್ದಾರೆ.
ಇದನ್ನೂ ಓದಿ : Hijab verdict:"ಹಿಜಾಬ್ ತೆಗೆದು ಎಕ್ಸಾಂ ಬರೆಯಬೇಕೆಂದರೆ ನಾವು ಪರೀಕ್ಷೆಯನ್ನೇ ಬರೆಯಲ್ಲ"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.