ಬೆಂಗಳೂರು: Hijab Controversy - ಕರ್ನಾಟಕ ಹೈಕೋರ್ಟ್‌ನಲ್ಲಿ (Karnataka High Court) ಹಿಜಾಬ್ ವಿವಾದದ ವಿಚಾರಣೆ ಮುಂದುವರೆದಿದೆ. ಶುಕ್ರವಾರದ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ (Advocate General Prabhuling Navadagi) ಅವರು ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೇಳಿದ್ದಾರೆ. ಫೆಬ್ರವರಿ 14 ರಿಂದ ಹೈಕೋರ್ಟ್ ಪೂರ್ಣ ಪೀಠವು ಈ ವಿಷಯವನ್ನು ನಿರಂತರವಾಗಿ ಆಲಿಸುತ್ತಿದೆ ಎಂಬುದು ಇಲ್ಲಿ ಗಮನಾರ್ಹ. ಈ ಹಿಂದೆ, ವಿದ್ಯಾರ್ಥಿನಿಯರ ಪರವಾಗಿ ಹಿಜಾಬ್ ಪರವಾಗಿ ನ್ಯಾಯಾಲಯದಲ್ಲಿ ವಾದಗಳನ್ನು ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಇಸ್ಲಾಮಿನ ಧಾರ್ಮಿಕ ನಂಬಿಕೆಗಳಿಗೆ ಹಿಜಾಬ್ ಧರಿಸುವುದು ಅನಿವಾರ್ಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿದೆ. ಶುಕ್ರವಾರ ರಾಜ್ಯ ಹೈಕೋರ್ಟ್‌ನಲ್ಲಿ ಹಿಜಾಬ್ ವಿವಾದದ ಕುರಿತು ನಡೆಯುತ್ತಿರುವ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ಈ ವಿಷಯ ತಿಳಿಸಿದೆ. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿಜಾಬ್ ಧರಿಸುವ ಹಕ್ಕು ಸಂವಿಧಾನದ 19(1)ರ ಅಡಿಯಲ್ಲಿ ಬರುವುದಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ ಎಂದಿದ್ದಾರೆ. ವಾಸ್ತವವಾಗಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಉಡುಗೆಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ಅನುಮತಿಸಲಾಗುವುದಿಲ್ಲ ಎಂದು ಫೆಬ್ರವರಿ 5 ರ ಆದೇಶವನ್ನು ಯಾವ ಕಾರಣದಿಂದ ಹೊರಡಿಸಿದ್ದೀರಿ ಎಂದು ಮುಖ್ಯ ನ್ಯಾಯಮೂರ್ತಿ ಸರ್ಕಾರವನ್ನು ಪ್ರಶ್ನಿಸಿದ್ದರು.


1985 ರಿಂದ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರುತ್ತಿದ್ದರು, ಇದುವರೆಗೆ ಯಾವುದೇ ವಿವಾದ ಇರಲಿಲ್ಲ
ಈ ಕುರಿತು ನ್ಯಾಯಾಲಯದಲ್ಲಿ ಮಾತನಾಡಿರುವ ಎಜಿ ಅವರು, ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ 2013 ರಿಂದ ಸಮವಸ್ತ್ರ ಜಾರಿಯಲ್ಲಿದೆ, ಆದರೆ ಇದುವರೆಗೆ ಅಲ್ಲಿ ಈ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಇದೇ ಮೊದಲ ಬಾರಿಗೆ, 2021 ರ ಡಿಸೆಂಬರ್‌ನಲ್ಲಿಯೇ ಈ ಬಗ್ಗೆ ವಿವಾದ ಏರ್ಪಟ್ಟಿದೆ. ಈ ಕಾಲೇಜಿನ ಕೆಲ ಬಾಲಕಿಯರು ಪ್ರಾಂಶುಪಾಲರ ಬಳಿ ತೆರಳಿ ಹಿಜಾಬ್ ಧರಿಸಲು ಅನುಮತಿ ಬೇಕು ಎಂದಿದ್ದಾರೆ. ಇದಾದ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು. ಆದರೆ, 1985 ರಿಂದ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುತ್ತಿದ್ದಾರೆ ಎಂದು ಈ ಸಭೆಯಲ್ಲಿ ತಿಳಿಸಲಾಯಿತು. ಅಷ್ಟೆ ಅಲ್ಲ ಹಳೆಯ ನಿಯಮವನ್ನು ಬದಲಾಯಿಸದಿರಲು ಸಮಿತಿ ನಿರ್ಧರಿಸಿರುವುದನ್ನು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


'ನಾವು ಧಾರ್ಮಿಕ ವಿಷಯಗಳಲ್ಲಿ  ಮಧ್ಯಪ್ರವೇಶಿಸಲು ಬಯಸುತ್ತಿಲ್ಲ'
ವಿದ್ಯಾರ್ಥಿನಿಯರ ಕುಟುಂಬದ ಸದಸ್ಯರೊಂದಿಗೂ ಕೂಡ ಕಾಲೇಜು ಸಮಿತಿ ಸಭೆ ನಡೆಸಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಸಭೆಯಲ್ಲಿ 1985 ರಿಂದ ಕಾಲೇಜಿನಲ್ಲಿ ಸಮವಸ್ತ್ರ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ. ಆದರೆ, ಅದರ ಬಳಿಕವೂ ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಇದಾದ ಬಳಿಕ ಸರ್ಕಾರ ಸಮಿತಿ ರಚಿಸಿತ್ತು. ಅಂತಿಮವಾಗಿ ಫೆಬ್ರವರಿ 5 ರಂದು ಈ ಸಂಬಂಧ ಆದೇಶ ಹೊರಡಿಸಲಾಯಿತು. ಧಾರ್ಮಿಕ ವಿಚಾರಗಳಲ್ಲಿ ನಾವು ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ನ್ಯಾಯಾಲಯದಲ್ಲಿ ಹೇಳಿದೆ. ಶಾಲಾ-ಕಾಲೇಜುಗಳು ನಿರ್ಧರಿಸಿರುವ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಎಜಿ ನ್ಯಾಯಾಲಯಕ್ಕೆ ಹೇಳಿದ್ದಾರೆ


ಇದನ್ನೂ ಓದಿ-Karnataka Hijab row: "ಪ್ರತಿಭಟನೆ ಮುಂದುವರಿದರೆ ಕಠಿಣ ಕ್ರಮ"- ಗೃಹ ಸಚಿವರ ಎಚ್ಚರಿಕೆ


'ಹಿಜಾಬ್ ಮೇಲಿನ ನಿಷೇಧ, ಕುರಾನ್ ಮೇಲೆ ನಿಷೇಧಕ್ಕೆ ಸಮಾನ'
ಹಿಜಾಬ್ ವಿವಾದದ ಕುರಿತು ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಹೊಸ ಅರ್ಜಿಯನ್ನು ದಾಖಲಿಸಲಾಗಿದೆ. ಹಿಜಾಬ್ ಅನ್ನು ನಿಷೇಧಿಸುವುದು ಕುರಾನ್ ಅನ್ನು ನಿಷೇಧಿಸಿದಂತೆ ಎಂದು ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರು ವಾದಿಸಿದ್ದಾರೆ. ಡಿಸೆಂಬರ್‌ನಿಂದ ಹಿಜಾಬ್‌ನ ವಿವಾದ ನಡೆಯುತ್ತಿದೆ ಎಂಬುದು ಇಲ್ಲಿ ಗಮನಾರ್ಹ. ಕರ್ನಾಟಕದ ಉಡುಪಿ ಜಿಲ್ಲೆಯ ಆರು ವಿದ್ಯಾರ್ಥಿನಿಯರು ಹಿಜಾಬ್ ಬಗ್ಗೆ ಧ್ವನಿ ಎತ್ತಿದ್ದಾರೆ. ಬಳಿಕ ಬಾಲಕಿಯರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಪ್ರಸ್ತುತ, ಕರ್ನಾಟಕ ಹೈಕೋರ್ಟ್ ಯಾವುದೇ ಧಾರ್ಮಿಕ ಪ್ರತೀಕವನ್ನು ಧರಿಸಿ ಶಾಲೆಗೆ ಹೋಗುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.


ಇದನ್ನೂ ಓದಿ-ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು, ಕಾಲೇಜಿನ ಹೊರಗೆ 'We Want Justice' ಘೋಷಣೆ


ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ಮುಸ್ಲಿಂ ವಿದ್ಯಾರ್ಥಿನಿಯರು ಶುಕ್ರವಾರ ಮತ್ತು ಪವಿತ್ರ ರಂಜಾನ್ ತಿಂಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಕೋರಿದ್ದರು. ಪ್ರಸ್ತುತ ವಾದ-ಪ್ರತಿವಾದ ಆಲಿಸುತ್ತಿರುವ ರಾಜ್ಯ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.


ಇದನ್ನೂ ಓದಿ-Hijab Controversy: ಅಲ್ಪಸಂಖ್ಯಾತ ಸಮುದಾಯದ ಪರ ಕೈ ಬ್ಯಾಟಿಂಗ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.