Karnataka Hijab row: "ಪ್ರತಿಭಟನೆ ಮುಂದುವರಿದರೆ ಕಠಿಣ ಕ್ರಮ"- ಗೃಹ ಸಚಿವರ ಎಚ್ಚರಿಕೆ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ (Karnataka Hijab row) ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಸುತ್ತಿದೆ.  ಅಲ್ಲದೆ ಈ ಬಗ್ಗೆ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನೂ ನೀಡಿದೆ. 

Written by - Chetana Devarmani | Last Updated : Feb 16, 2022, 07:12 PM IST
  • ರಾಜ್ಯದಲ್ಲಿ ಮುಂದುವರೆದ ಹಿಜಾಬ್ ವಿವಾದ
  • ಹೈಕೋರ್ಟ್‌ನ ಮಧ್ಯಂತರ ಆದೇಶದ ನಡುವೆಯೂ ಪ್ರತಿಭಟನೆ
  • ಹಿಜಾಬ್ ಧರಿಸುವ ಹಕ್ಕನ್ನು ಒತ್ತಾಯಿಸಿ ಪ್ರತಿಭಟನೆ
  • "ಪ್ರತಿಭಟನೆ ಮುಂದುವರಿದರೆ ಕಠಿಣ ಕ್ರಮ"- ಗೃಹ ಸಚಿವರ ಎಚ್ಚರಿಕೆ
Karnataka Hijab row: "ಪ್ರತಿಭಟನೆ ಮುಂದುವರಿದರೆ ಕಠಿಣ ಕ್ರಮ"- ಗೃಹ ಸಚಿವರ ಎಚ್ಚರಿಕೆ  title=
ಹಿಜಾಬ್

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ (Karnataka Hijab row) ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಸುತ್ತಿದೆ.  ಅಲ್ಲದೆ ಈ ಬಗ್ಗೆ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನೂ ನೀಡಿದೆ. 

ಇದನ್ನೂ ಓದಿ: 'ಅರ್ಧ ನರಿ ಅರ್ಧ ಮನುಷ್ಯ'.. ಏನಿದು ವಿಚಿತ್ರ! ಅಸಲಿ ಸತ್ಯ ಏನು ಗೊತ್ತಾ?

ಹೈಕೋರ್ಟ್‌ನ (Bangalore High Court) ಮಧ್ಯಂತರ ಆದೇಶದ ನಡುವೆಯೂ ಹಿಜಾಬ್ ಧರಿಸುವ ಹಕ್ಕನ್ನು ಒತ್ತಾಯಿಸಿ ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳು ಕರ್ನಾಟಕದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), "ನಾವು ಇಷ್ಟು ದಿನ ಮೃದು ಧೋರಣೆ ಅನುಸರಿಸಿದ್ದೇವೆ. ಅದು ಇನ್ನು ಮುಂದೆ ಇರುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ. 

"ವಿದ್ಯಾರ್ಥಿಗಳು ಸಂವೇದನಾಶೀಲರಾಗಿದ್ದು, ಹೊರಗಿನವರ ಪ್ರಚೋದನೆಯಿಂದ ಪ್ರತಿಭಟಿಸುತ್ತಿದ್ದಾರೆ (Protest) ಎಂದು ಭಾವಿಸಲಾಗಿತ್ತು. ಇದುವರೆಗೆ ವಿದ್ಯಾರ್ಥಿಗಳನ್ನು ನೋಯಿಸಬಾರದು ಎಂದು ಕೊಂಡಿದ್ದೆವು. ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಮತ್ತು ಸಂವಿಧಾನವನ್ನು ಗೌರವಿಸುವುದು ಈ ದೇಶದ ನಾಗರಿಕರ ಜವಾಬ್ದಾರಿಯಾಗಿದೆ. ಇದನ್ನು ಉಲ್ಲಂಘಿಸಿದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ವಾರ್ನ್ ಮಾಡಿದ್ದಾರೆ. 

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸುವ ಹಕ್ಕನ್ನು ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ದೊಡ್ಡ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.

ರಾಜ್ಯದ ಎರಡರಿಂದ ಮೂರು ಪ್ರದೇಶಗಳಲ್ಲಿ ಘಟನೆಗಳನ್ನು ಹೊರತುಪಡಿಸಿ, ಜಿಲ್ಲಾಧಿಕಾರಿಗಳು, ಸ್ಥಳೀಯ ಮತ್ತು ಕಾಲೇಜು ಆಡಳಿತಗಳು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ತಮ್ಮ ತರಗತಿಗಳಿಗೆ ಹಾಜರಾಗುವಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಟ್ಟಾರೆ ಶಾಂತಿಯುತ ವಾತಾವರಣವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:DK Shivakumar vs KS Eshwarappa: ಏಕವಚನದಲ್ಲಿ ಬೈದಾಡಿಕೊಂಡ ಡಿಕೆಶಿ ಮತ್ತು ಈಶ್ವರಪ್ಪ

ಎಂಪ್ರೆಸ್ ಕಾಲೇಜಿಗೆ ಸೇರಿದ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದಕ್ಕಾಗಿ ತರಗತಿಗಳಿಗೆ ಪ್ರವೇಶ ನಿರಾಕರಿಸಿದ ನಂತರ ಪ್ರತಿಭಟನಾ ಮೆರವಣಿಗೆ ನಡೆಸಿದರು ಮತ್ತು 'ಅಲ್ಲಾ ಹು ಅಕ್ಬರ್' ಎಂಬ ಘೋಷಣೆಗಳನ್ನು ಸಹ ಕೂಗಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಹಿಜಾಬ್ ಧರಿಸುವ ಹಕ್ಕು ನೀಡುವಂತೆ ಒತ್ತಾಯಿಸಿದರು. ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ವಿದ್ಯಾರ್ಥಿಗಳನ್ನು ಕರೆಸಿ ಮಾತನಾಡಿದರು.

ಚಿಕ್ಕಮಗಳೂರಿನ (Chikkamagaluru) ಮಲ್ನಾಡ್ ಕಾಲೇಜಿನ ಹಲವಾರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಕಾಲೇಜು ಆವರಣ ಪ್ರವೇಶಿಸುತ್ತಿದ್ದಂತೆ ಅದೇ ಸಮುದಾಯದ ಹುಡುಗರು ಬೆಂಬಲ ನೀಡಿದರು.

ಹುಬ್ಬಳ್ಳಿಯಲ್ಲಿ ಸರ್ಕಾರಿ ಬಾಲಕಿಯರ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲರು ಸ್ಥಳೀಯ ಹಾಗೂ ಕಾಲೇಜು ಆಡಳಿತದೊಂದಿಗೆ ಕೈಜೋಡಿಸಿ ಪಾಲಕರು ಹಾಗೂ ವಿದ್ಯಾರ್ಥಿನಿಯರನ್ನು ಸಮಾಧಾನ ಪಡಿಸಿದರು.

ಆದರೆ, ಕಾಲೇಜಿನೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ವಾದಿಸಿದರು. ನಂತರ ಕಾಲೇಜು ಅಧಿಕಾರಿಗಳು ರಜೆ ಘೋಷಿಸಿದರು. "ಮಗೆ ಹಿಜಾಬ್ ಬೇಕು" ಮತ್ತು "ಹಿಜಾಬ್ ನಮ್ಮ ಹಕ್ಕು" ಎಂಬ ಘೋಷಣೆಗಳನ್ನು ಕೂಗುತ್ತಾ ಮುಸ್ಲಿಂ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು.

ಗದಗದ ಅಂಜುಮನ್ ಆಂಗ್ಲೋ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಮನೆಗೆ ಮರಳಲು ನಿರಾಕರಿಸಿದ್ದರಿಂದ ಕಾಲೇಜು ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದರು.

ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು ಹಿಜಾಬ್‌ಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ಕನ್ನಡದ ಹಿರಿಯ ಸಾಹಿತಿ, ಚೆಂಬೆಳಕಿನ‌ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ ಇನ್ನಿಲ್ಲ

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರು ಬುಧವಾರ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆಯಲು ಸ್ಥಳೀಯ ಮತ್ತು ಕಾಲೇಜು ಆಡಳಿತ ಮಂಡಳಿಗಳು ಸಹಕರಿಸಬೇಕೆಂದು ಒತ್ತಾಯಿಸಿದ್ದಾರೆ.

ಕಳಕಳಿಯಿಂದ ಎಲ್ಲರನ್ನೂ ವಿನಂತಿಸುತ್ತೇನೆ, ಸಂಯಮದಿಂದ ಅಂತಿಮ ನ್ಯಾಯಾಲಯದ ಆದೇಶದವರೆಗೆ ಕಾಯಬೇಕು, ಗೊಂದಲ ನಿವಾರಿಸಿ ಶಾಲೆ, ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರೊಂದಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಡು ಸಿಎಂ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News