ಬೆಂಗಳೂರು: Hijab Controversy - ಕರ್ನಾಟಕದಲ್ಲಿ ಹಿಜಾಬ್ ನಿಷೇಧದ ವಿರುದ್ಧದ ಪ್ರತಿಭಟನೆಯಿಂದಾಗಿ ಪಿಯು ಪರೀಕ್ಷೆಯನ್ನು (PU Exam) ತೊರೆದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪರೀಕ್ಷೆಗೆ ಮತ್ತೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ. ಭಾನುವಾರ ಸರ್ಕಾರ (Karnataka Government) ಈ ಆದೇಶ ಹೊರಡಿಸಿದೆ.

COMMERCIAL BREAK
SCROLL TO CONTINUE READING

ವಾಸ್ತವದಲ್ಲಿ, ಹಿಜಾಬ್ ವಿವಾದದ (Hijab Row) ಹಿನ್ನೆಲೆಯಲ್ಲಿ, ಅನೇಕ ವಿದ್ಯಾರ್ಥಿನಿಯರು ಪ್ರಾಯೋಗಿಕ ಪರೀಕ್ಷೆಯನ್ನು ಬಹಿಷ್ಕರಿಸಿದ್ದರು, ನಂತರ ಅವರಿಗೆ ಮರು ಪರೀಕ್ಷೆಗೆ ಅವಕಾಶ ಸಿಗುವ ಸೂಚನೆಗಳಿದ್ದವು, ಆದರೆ ಭಾನುವಾರ, ಸರ್ಕಾರವು ಈ ಆಯ್ಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.

ಮರು ಪರೀಕ್ಷೆಗೆ ಸಂಬಂಧಿಸಿದಂತೆ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh), 'ಈ ಸಾಧ್ಯತೆಯನ್ನು ನಾವು ಹೇಗೆ ಪರಿಗಣಿಸಬಹುದು? ಹೈಕೋರ್ಟಿನ ಮಧ್ಯಂತರ ಆದೇಶದ ನಂತರವೂ ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದಿರುವುದಕ್ಕೆ ಪ್ರಾಯೋಗಿಕ ಪರೀಕ್ಷೆ (Practical Exam) ಬಹಿಷ್ಕರಿಸಿರುವ ವಿದ್ಯಾರ್ಥಿಗಳಿಗೆ ನಾವು ಅವಕಾಶ ನೀಡಿದರೆ, ಮತ್ತೊಬ್ಬ ವಿದ್ಯಾರ್ಥಿ ಬೇರೆ ಯಾವುದೋ ಕಾರಣವನ್ನು ಹೇಳಿಕೊಂಡು ಬಂದು ಮತ್ತೊಂದು ಅವಕಾಶ ಕೇಳುತ್ತಾನೆ. ಇದು ಅಸಾಧ್ಯ' ಎಂದಿದ್ದಾರೆ.


ಇದನ್ನೂ ಓದಿ-ದುಬಾರಿ ವೈದ್ಯಕೀಯ ಶಿಕ್ಷಣ.. ಪರ್ಯಾಯ ಕ್ರಮಗಳ ಬಗ್ಗೆ ಕೇಂದ್ರ ಗಂಭೀರ ಚಿಂತನೆ: ಸಿಎಂ ಬಸವರಾಜ ಬೊಮ್ಮಾಯಿ

ಇದರ ಹೊರತಾಗಿ ಪ್ರತಿಯೊಬ್ಬರ ಇಚ್ಛೆ ಮತ್ತು ಆಸೆಯಿಂದ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಅದಕ್ಕೊಂದು ಮಾದರಿಯಿದೆ. ಪ್ರಶ್ನೆ ಪತ್ರಿಕೆಯ ತಯಾರಿಕೆ ಮತ್ತು ನಂತರ ಮೌಲ್ಯಮಾಪನ ಸಾಕಷ್ಟು ಸಮಯ ಮತ್ತು ಶ್ರಮ ತೆಗೆದುಕೊಳ್ಳುತ್ತದೆ, ಅದನ್ನು ಇದ್ದಕ್ಕಿದ್ದಂತೆ ಮತ್ತು ಬೇಕಾದ ಸಮಯದಲ್ಲಿ ಮಾಡಲು ಬರುವುದಿಲ್ಲ ಎಂದು ಸರ್ಕಾರ ಹೇಳಿದೆ.


ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ?: ಬಿಜೆಪಿ

ಈ ಪ್ರಾಯೋಗಿಕ ಪರೀಕ್ಷೆಗಳು ಬೋರ್ಡ್ ಪರೀಕ್ಷೆಯ ಭಾಗವಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಹೀಗಾಗಿ ಪರೀಕ್ಷೆಯನ್ನು ಬಹಿಷ್ಕರಿಸಿರುವ ವಿದ್ಯಾರ್ಥಿನಿಯರ ಭವಿಷ್ಯ ಈಗ ಅಪಾಯದಲ್ಲಿ ಸಿಲುಕಿದೆ. ಹಿಜಾಬ್ ವಿವಾದದಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ತೊರೆದ ವಿದ್ಯಾರ್ಥಿಗಳು ಈಗ ತಮ್ಮ ಪೂರ್ಣ 30 ಅಂಕಗಳನ್ನು ಕಳೆದುಕೊಳ್ಳಲಿದ್ದಾರೆ. ಆದಾಗ್ಯೂ, ತಮ್ಮ ಶೈಕ್ಷಣಿಕ ಅವಧಿಯನ್ನು ಉಳಿಸಲು ಬಯಸುವ ವಿದ್ಯಾರ್ಥಿನಿಯರಿಗೆ ಲಿಖಿತ ಪರೀಕ್ಷೆಯ 70 ಅಂಕಗಳನ್ನು ಪಡೆದುಕೊಂಡು ಪಾಸಾಗುವ ಅವಕಾಶ ಇದೆ.


ಇದನ್ನೂ ಓದಿ-ಮನೆಯ ಮುಂದೆ ಬಂದು ಬಾಳೆ ಗಿಡ ತಿಂದು ಮುಗಿಸಿದ ಒಂಟಿಸಲಗ : Viral video


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.