ಮನೆಯ ಮುಂದೆ ಬಂದು ಬಾಳೆ ಗಿಡ ತಿಂದು ಮುಗಿಸಿದ ಒಂಟಿಸಲಗ : Viral video

ಕಾಡಾನೆಯೊಂದು ಆಹಾರ ಅರಸಿ ನಾಡಿಗೆ ಬಂದಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದಲ್ಲಿ ಆಹಾರ ಅರಸಿಕೊಂಡು ಬಂದಿರುವ ಕಾಡಾನೆ ಮನೆಯೊಂದರ ಮುಂದೆಯೇ ಕಾಣಿಸಿಕೊಂಡಿದೆ.

Written by - Zee Kannada News Desk | Last Updated : Mar 21, 2022, 11:13 AM IST
  • ಆಹಾರಕ್ಕಾಗಿ ನಾಡಿಗೆ ಬಂದಿರುವ ಆನೆ
  • ಬಾಳೆ ಗಿಡ ತಿಂದು ಮುಗಿಸಿದ ಒಂಟಿ ಸಲಗ
  • ಕಾಡಾನೆ ವಿಡಿಯೋ ವೈರಲ್
ಮನೆಯ ಮುಂದೆ ಬಂದು ಬಾಳೆ ಗಿಡ ತಿಂದು ಮುಗಿಸಿದ ಒಂಟಿಸಲಗ : Viral video title=
ಕಾಡಾನೆ ವಿಡಿಯೋ ವೈರಲ್

ಹಾಸನ : ಕಾಡಾನೆಯೊಂದು ಮನೆ ಬಾಗಿಲಿಗೆ ಬಂದು ನಿಂತ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದಲ್ಲಿ ನಡೆದಿದೆ (Wild elephant). ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ  ಕಾಡಾನೆ ಮನೆಯೊಂದರ ಮುಂದೆಯೇ ನಿಂತಿದೆ (Elephant Viral video). 

ಕಾಡಾನೆಯೊಂದು ಆಹಾರ ಅರಸಿ ನಾಡಿಗೆ ಬಂದಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದಲ್ಲಿ ಆಹಾರ ಅರಸಿಕೊಂಡು ಬಂದಿರುವ ಕಾಡಾನೆ ಮನೆಯೊಂದರ ಮುಂದೆಯೇ ಕಾಣಿಸಿಕೊಂಡಿದೆ (Wild elephant video). ಎಸ್ಟೇಟ್‌ನಲ್ಲಿದ್ದ ಮನೆಯ ಮುಂದೆ ಬಂದಿರುವ ಆನೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ನಿಂತಿತ್ತು. 

ಇದನ್ನೂ ಓದಿ : Raghavapura Jatre: ರಾಘವಪುರ ಜಾತ್ರೆಯಲ್ಲಿ ರಥ ಎಳೆದ ಮಹಿಳೆಯರು!!

ಎಸ್ಟೇಟ್‌ನಲ್ಲಿದ್ದ ಮನೆಯೊಂದರ ಮುಂದೆ ಕಾಣಿಸಿಕೊಂಡ ಒಂಟಿ ಸಲಗ, ಅಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ತಿಂದಿದೆ. ಕಾಡಾನೆ  ಬಾಳೆ ಗಿಡ ತಿನ್ನುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ (Elephant Viral video).  ಕಾಡಾನೆಯನ್ನು ಕಂಡು ಮನೆಯವರು ಮನೆಯೊಳಗೆ ಓಡಿ ಹೋಗಿದ್ದಾರೆ. 

 

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಕಾಟದಿಂದ ಈ ಭಾಗದ  ಕಾಫಿ ಬೆಳೆಗಾರರು, ರೈತರು ರೋಸಿ ಹೋಗಿದ್ದಾರೆ. ಗ್ರಾಮದೊಳಗೆ, ಮನೆಯ ಸಮೀಪವೇ  ಕಾಡಾನೆಗಳು ಬರುತ್ತಿದ್ದು, ಜೀವ ಭಯದಿಂದ ಓಡಾಡಬೇಕಾಗಿದೆ ಎನ್ನುವುದು ಈ ಭಾಗದ ಜನರ ಅಳಲು (Animal video). ಇನ್ನು ಜೀವ ಭಯದಿಂದ ಕೆಲವೆಡೆ ಕಾಫಿ ತೋಟದ ಕೆಲಸಕ್ಕೂ ಕಾರ್ಮಿಕರು ಬಾರದ ಸ್ಥಿತಿ ನಿರ್ಮಾಣವಾಗಿದೆ. 

ಇದನ್ನೂ ಓದಿ : Naveen Gyangoudar: ಯುದ್ಧಭೂಮಿ ಉಕ್ರೇನ್​ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News