ಮಂಗಳೂರು: ಹಿಂದೂ ದೇವಾಲಯ(Religious Center)ಗಳ ಜಾತ್ರೋತ್ಸವಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧವನ್ನು ಈಗಾಗಲೇ ಹೇರಲಾಗಿದೆ. ಈ ಬಳಿಕ ಮತ್ತೊಂದು ನಿರ್ಬಂಧವನ್ನು ಹೇರಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ  ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಹಿಂದೂಗಳ ಆಟೋಗಳನ್ನೇ ಬಳಸುವಂತೆ ಅಭಿಯಾನ‌ ಶುರು ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Jammu-Kashmir:ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾದ ಎಲ್‌ಇಟಿ ಕಮಾಂಡರ್‌


ಹಿಂದೂ ಜಾಗರಣ ವೇದಿಕೆ(Hindu Jagaran Vedike) ಈ ಅಭಿಯಾನವನ್ನು ಶುರು ಮಾಡಿದ್ದು, ಭಗವಾಧ್ವಜ ಹಾಕಿರುವ ಆಟೋಗಳನ್ನು ಮಾತ್ರ ಬಳಕೆ ಮಾಡುವಂತೆ ಸೂಚಿಸಲಾಗಿದೆ.  ಏಪ್ರಿಲ್ 10 ರಿಂದ 20 ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಆಟೋಗಳಲ್ಲಿ ಭಗವಾಧ್ವಜ ಅಳವಡಿಸಲಾಗುತ್ತದೆ. 


ಜಾತ್ರೆಯ ನೆಪದಲ್ಲಿ ಅನ್ಯಮತೀಯರಿಂದ ಹಿಂದೂ ಹೆಣ್ಣುಮಕ್ಕಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು  ಹಿಂದೂ ಜಾಗರಣ ವೇದಿಕೆ ತಿಳಿಸಿದೆ. 


ಇದನ್ನು ಓದಿ: Viral Video: ತುಂಗೆ ತಟದಲಿ ಸ್ವರ್ಗಲೋಕ... ಶೃಂಗೇರಿಗೆ ಪ್ರಕೃತಿಯ "ಶೃಂಗಾರ"


ಹಿಂದೂ ಹೆಣ್ಣುಮಕ್ಕಳನ್ನು ಹಿಂದೂಗಳೇ ರಕ್ಷಿಸಬೇಕಾದ ಸಮಯ ಬಂದಿದೆ. ಹಿಂದುತ್ವದ ಹೆಸರಿನಲ್ಲಿ ಬಂದ ಸರಕಾರ ಹಿಂದೂಗಳಿಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸವನ್ನು ಸಂಘಟನೆಗಳು ನಿರಂತರ ಮಾಡಲಿದೆ. ಈ ಅಭಿಯಾನದ ಒಂದು ಭಾಗ ಆಟೋಗಳಿಗೆ ಭಗವಾಧ್ವಜ ಹಾಕಿ ಹಿಂದುತ್ವ ಉಳಿಸುವ ಕಾರ್ಯವಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ‌ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.