ಬೆಂಗಳೂರು : ಈದ್ಗಾ ಮೈದಾನದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ.  ಇದೀಗ ಹೊಸ ವಿಚಾರವಾಗಿ ಹಿಂದೂಪರ ಸಂಘಟನೆಗಳು  ಧ್ವನಿ ಎತ್ತಿವೆ.  ಚಾಮರಾಜಪೇಟೆಯ ಮೈದಾನಲ್ಲಿರುವ ಈದ್ಗಾ ಗೋಡೆಯ ವಿರುದ್ಧವೂ ಸಂಘಟನೆಗಳು ಸಮರ ಸಾರಿವೆ. 


COMMERCIAL BREAK
SCROLL TO CONTINUE READING

ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದ ವಿವಾದ ಯಾಕೋ ಮುಕ್ತಾಯವಾಗುವ ಲಕ್ಷಣ ಕಾಣುತ್ತಿಲ್ಲ. ಮತ್ತೆ ಮತ್ತೆ ಹೊಸ ಹೊಸ ವಿವಾದಗಳು ಕೇಳಿ ಬರುತ್ತಲೇ ಇವೆ. ಹೌದು,  ಈಗ ಮತ್ತೊಂದು ವಿಚಾರವಾಗಿ ಹಿಂದೂಪರ ಸಂಘಟನೆಗಳು  ಧ್ವನಿ ಎತ್ತಿವೆ. ಈದ್ಗಾ ಮೈದಾನದ ಗೋಡೆಯನ್ನು ನೆಲಸಮ ಮಾಡುವಂತೆ ಸಂಘಟನೆಗಳು ಆಗ್ರಹಿಸಿವೆ. 


ಇದನ್ನೂ ಓದಿ : Vegetable Price: ಮತ್ತೆ ಹೆಚ್ಚಳವಾಯ್ತು ಟೊಮ್ಯಾಟೋ ಬೆಲೆ: ಹೀಗಿದೆ ನೋಡಿ ತರಕಾರಿಗಳ ದರ


ಮೈದಾನ ಕಂದಾಯ ಇಲಾಖೆಯ ಸ್ವತ್ತು ಎನ್ನುವುದಾದರೆ ಈ ಗೋಡೆ ಯಾಕೆ ಎನ್ನುವುದು  ಹಿಂದೂ ಸಂಘಟನೆಗಳ ಪ್ರಶ್ನೆ. ಈದ್ಗಾ ಗೋಡೆಯಿಂದ ಹಿಂದೂ ಧಾರ್ಮಿಕ ಆಚರಣೆಗೆ  ಅಡ್ಡಿಯಾಗುತ್ತದೆ ಎನ್ನುವುದು ಈ ಸಂಘಟನೆಗಳ ಆರೋಪ. ಹಾಗಾಗಿ ಬೇರೆಡೆಗೆ ಸ್ಥಳಾಂತರಕ್ಕೆ ಜಾಗ ಇರುವಾಗ ಈ ಗೋಡೆ ಏಕೆ ಬೇಕು ? ಬದಲಿ ಈದ್ಗಾ ಕೊಟ್ಟಿರುವುದರಿಂದ ಸರ್ಕಾರ ಪರಿಶೀಲನೆ ಮಾಡಲಿ  ಎಂದು ಸಂಘಟನೆಗಳು ಒತ್ತಾಯಿಸಿವೆ. 


ಅಲ್ಲದೆ, ಸ್ಥಳಾಂತರ ಮಾಡದೇ ಹೋದರೆ ಸಂಪೂರ್ಣ ನೆಲಸಮ ಮಾಡಿ ಬಿಡಿ ಎಂದು ಒತ್ತಾಯಿಸಿದ್ದಾರೆ. ಇನ್ನು ಸರ್ಕಾರಕ್ಕೆ ಕೆಲವು ದಿನಗಳ ಕಾಲವಕಾಶ ಕೊಡುತ್ತೇವೆ. ನಂತರ ಕಾನೂನು ಸಮರ ಮಾಡಿ ನಾವೇ ಗೋಡೆಯನ್ನ ಉರುಳಿಸುತ್ತೇವೆ ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ. ಈ ವಿವಾದ ನಮ್ಮ ಕಾಲಕ್ಕೆ ಮುಗಿಸಿ ಎನ್ನುವುದು ಹಿಂದೂ ಜನಜಾಗೃತಿ ಸಮಿತಿಯ ವಿಶ್ವ ಸನಾತನ ಪರಿಷತ್ ನ ಆಗ್ರಹವಾಗಿದೆ. 


ಇದನ್ನೂ ಓದಿ : Basavaraj Horatti car accident : ಬಸವರಾಜ​ ಹೊರಟ್ಟಿ ಕಾರು ಅಪಘಾತ : ಗಾಯಗೊಂಡ ಬೈಕ್ ಸವಾರ


ಇನ್ನು ಈ ವಿವಾದದ ಕುರಿತಂತೆ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಚಾಮರಾಜಪೇಟೆ ನಾಗರೀಕರ ಒಕ್ಕೂಟ , ಹಿಂದೂಪರ ಸಂಘಟನೆಗಳು ಈ ವಿಚಾರವಾಗಿ ಹೋರಾಟ ಮಾಡುವುದಾಗಿ , ವಿಶ್ವ ಸನಾತನ ಪರಿಷತ್ ನ ಅಧ್ಯಕ್ಷ ಭಾಸ್ಕರನ್ ಹೇಳಿದ್ದಾರೆ. 
 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.