ಬೆಂಗಳೂರು: ಇತ್ತೀಚೆಗೆ ಲಾಕ್‍ಡೌನ್ (Lockdown) ನಿಂದ ದ್ರಾಕ್ಷಿ ಬೆಳೆಗಾರರು ತಾವು ಬೆಳೆದ ದ್ರಾಕ್ಷಿಯನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ, ಮಾರಲಾಗದೆ, ಸೂಕ್ತ ಬೆಳೆ ಸಿಗದೆ ಪರಿತಪಿಸಿ ದ್ರಾಕ್ಷಿಯನ್ನು ರಸ್ತೆಗೆ ಚೆಲ್ಲಿದ್ದರು. ಈಗ ಬ್ಲೂ ದ್ರಾಕ್ಷಿ ಬೆಳೆಗಾರರಿಗೆ ಖುಷಿಯಾಗುವಂತ ಸುದ್ದಿ ನೀಡಲು ತೋಟಗಾರಿಕೆ ಸಚಿವ ನಾರಾಯಣಗೌಡ (Narayangowda) ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. 


COMMERCIAL BREAK
SCROLL TO CONTINUE READING

ಸುಮಾರು 662 ಹೆಕ್ಟೇರ್ ಪ್ರದೇಶದಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಯಲಾಗುತ್ತೆ. ಕೊರೊನಾವೈರಸ್  (Coronavirus) ಕೊವಿಡ್ 19 ಹಿನ್ನೆಲೆಯಲ್ಲಿ ಈ ದ್ರಾಕ್ಷಿ ಮಾರಾಟವಾಗದೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು, ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. 


ರೈತರಿಗೆ ಸಹಾಯ ಕೋರಿ ಮುಖ್ಯಮಂತ್ರಿ ಭೇಟಿಯಾದ ಹೆಚ್.ಡಿ. ರೇವಣ್ಣ


ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಬೆಂಗಳೂರು ಗ್ರಾಮಾಂತರದಲ್ಲಿ 400 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 10 ಸಾವಿರ ಟನ್ ಹಾಗೂ ಚಿಕ್ಕಬಳ್ಳಾಪುರದಲ್ಲಿ 262 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 5420 ಟನ್‍ನಷ್ಟು ದ್ರಾಕ್ಷಿ ಬೆಳೆಯಲಾಗುತ್ತೆ. ರೈತರ (Farmers)  ಹಿತದೃಷ್ಟಿಯಿಂದ ಈ ದ್ರಾಕ್ಷಿಯನ್ನು ಡಿಸ್ಟಿಲರಿಸ್ ಗೆ ಬಳಸುವ ಬಗ್ಗೆ ಚಿಂತಿಸಿದ್ದಾರೆ.


ಸದ್ಯ ಡಿಸ್ಟಿಲರಿಸ್ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ತಕ್ಷಣವೇ ಕಂಪೆನಿಗಳನ್ನ ಆರಂಭಿಸಬೇಕು. ಜೊತೆಗೆ ಬೆಂಗಳೂರು ಬ್ಲೂ ದ್ರಾಕ್ಷಿಯನ್ನ ಡಿಸ್ಟಿಲರಿಸ್‍ಗೆ ಬಳಸಿಕೊಳ್ಳಬೇಕು ಎಂದು ಅಬಕಾರಿ ಸಚಿವ ಡಾ. ಹೆಚ್ ನಾಗೇಶ್ ಅವರಲ್ಲಿ ಸಚಿವ ಡಾ. ನಾರಾಯಣಗೌಡ ಅವರು ಮನವಿ ಮಾಡಿದ್ದಾರೆ. 


ಸಂಸದ ಡಿ.ಕೆ. ಸುರೇಶ್ ಮನವಿಗೆ ಬಮೂಲ್ ಸ್ಪಂದನೆ: ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ನೆರವು


ವಿಕಾಸ ಸೌಧದಲ್ಲಿ ಈ ಕುರಿತು ಸಭೆ ನಡೆಸಿದ್ದು, ರೈತರಿಗೆ ಅನುಕೂಲವಾಗುವ ಕಾರಣ ಈ ಕೆಲಸವನ್ನ ತತ್‍ಕ್ಷಣವೇ ಮಾಡುವಂತೆಯೂ ಮನವಿ ಮಾಡಿದ್ದಾರೆ. ಸಚಿವ ನಾರಾಯಣ ಗೌಡ ಅವರ ಮನವಿಗೆ ಸ್ಪಂಧಿಸಿರುವ ಅಬಕಾರಿ ಸಚಿವರು ನಾಳೆಯೇ ಅಧಿಕಾರಿಗಳ ಜೊತೆ ಹಾಗೂ ಡಿಸ್ಟಿಲರಿಸ್ ಘಟಕಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಅತಿಶೀಘ್ರದಲ್ಲಿ ರೈತರಿಗೆ ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳುವುದಾಗಿಯೂ ತಿಳಿಸಿದ್ದಾರೆ.