ಬೆಂಗಳೂರು : ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ (Locdown) ಶುರುವಾಗಿದೆ. ರಾಜಧಾನಿಯಲ್ಲಿ ಕರೋನಾ ರಕ್ಕಸನ ಹಾವಳಿ ನಿಯಂತ್ರಿಸಲು ಈ ಲಾಕ್ ಡೌನ್ ಕಟ್ಟುನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿದೆ. ಹೊರಗಡೆ ವಾಹನ ತರುವಂತಿಲ್ಲ. ಹೊರಗೆ ಅನಾವಶ್ಯಕವಾಗಿ ಓಡಾಡುವಂತಿಲ್ಲ. ಎಮೆರ್ಜೆನ್ಸಿ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಮನೆ ಬೋರಾಗಿದೆ ಎಂದು ಗಾಡಿ ತಗೊಂಡು ಬೆಂಗಳೂರು ಸುತ್ತಲು ಹೊರಟರೆ, ಪೊಲೀಸರ ಲಾಠಿ ರುಚಿ ಫ್ರೀ ಆಗಿ ಸಿಗುತ್ತೆ ಜೊತೆಗೆ ನಿಮ್ಮ ವಾಹನ ಕೂಡಾ ಸೀಜ್ ಆಗುತ್ತೆ ಗೊತ್ತಿರಲಿ.


COMMERCIAL BREAK
SCROLL TO CONTINUE READING

ಹಾಗಾದರೆ ಲಸಿಕೆ ಹಾಕಿಸಿಕೊಳ್ಳುವುದು ಹೇಗೆ..?
ಗೊತ್ತಿರಲಿ. ಕರೋನಾ ಲಸಿಕೆ (Covid Vaccine) ಹಾಕಿಸಿಕೊಳ್ಳುವುದು ಇದೀಗ ಅನಿವಾರ್ಯ. ಯಾವುದೇ ಆಸ್ಪತ್ರೆಗಳು ಲಸಿಕೆಯ ಹೋಂ ಡೆಲಿವೆರಿ ಮಾಡುವುದಿಲ್ಲ. ಲಸಿಕೆ ಕೇಂದ್ರಕ್ಕೆ (Vaccination Centre)ಹೋಗಿ ಲಸಿಕೆ ಹಾಕಿಸಿಕೊಂಡು ಬರಬೇಕು. ಆದರೆ, ಎಲ್ಲಾ ರಸ್ತೆಗಳಲ್ಲಿ, ಸರ್ಕಲ್ ಗಳಲ್ಲಿ, ಆಯಕಟ್ಟಿನ ಜಾಗದಲ್ಲಿ ನಿಂತು ಪೊಲೀಸರು (police)ಕಾವಲು ಕಾಯುತ್ತಿರುವಾಗ ರಸ್ತೆಗಿಳಿದರೆ ಸಮಸ್ಯೆ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವವಾಗಬಹುದು. ಅದಕ್ಕೆ ಉತ್ತರ ಇಲ್ಲಿದೆ.


ಇದನ್ನೂ ಓದಿ : Umesh Katti : 'ನೀವು ಉಳಿಯುತ್ತಿರೋ ಇಲ್ಲವೋ ನಾನಂತೂ ಉಳಿಯಬೇಕು'


ನಿರಾತಂಕವಾಗಿ ಲಸಿಕೆ ಹಾಕಿಸಿಕೊಳ್ಳಿ..!
 ಲಸಿಕೆ ಅಭಿಯಾನಕ್ಕೆ ಲಾಕ್ ಡೌನ್ (Lockdown) ಯಾವುದೇ ಸಮಸ್ಯೆ ಆಗಬಾರದು ಎಂಬುದನ್ನು ಸರ್ಕಾರ ಮೊದಲೇ ನಿರ್ಧರಿಸಿದೆ. ಹಾಗಾಗಿ ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಯಾಕೆಂದರೆ ಎಲ್ಲಾ ಲಸಿಕೆ ಕೇಂದ್ರಗಳು ತೆರೆದಿರುತ್ತವೆ. ಆದರೆ ಲಸಿಕೆ ಹಾಕಿಸಿಕೊಳ್ಳಲು ಹೋಗುವ ಮುನ್ನ ಈ ಅಂಶಗಳನ್ನು ಚೆಕ್ ಮಾಡಿಕೊಳ್ಳಿ.
1. ಲಸಿಕೆಗಾಗಿ ನಿಮ್ಮ ರೆಜಿಸ್ಟ್ರೇಶನ್ ಮಾಡಿಸಿಕೊಳ್ಳಿ.
2. ರಿಜಿಸ್ಟ್ರೇಶನ್ ಆದ ಬಳಿಕ ಲಸಿಕೆ (Vaccine) ಹಾಕಿಸಿಕೊಳ್ಳುವ ಸ್ಥಳ, ದಿನಾಂಕ ಇರುವ ಒಂದು ಪತ್ರ ಅಥವಾ ಎಸ್ ಎಂಎಸ್ (SMS) ನಿಮ್ಮ ಮೊಬೈಲಿಗೆ ಬಂದಿರುತ್ತದೆ. ಅದನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
3. ಲಸಿಕಾ ಕೇಂದ್ರಕ್ಕೊಂದು ಫೋನ್ ಮಾಡಿ. ನಿಮ್ಮ ದಿನಾಂಕದಂದು ಲಸಿಕೆ ಲಭ್ಯವಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದೇನು ಅನಿವಾರ್ಯ  ಹೆಜ್ಜೆ ಅಲ್ಲ. ಲಸಿಕೆ ಸಾಮಾನ್ಯವಾಗಿ ಲಭ್ಯ ಇರುತ್ತದೆ. 
4. ಲಸಿಕೆ ಹಾಕಿಸಿಕೊಳ್ಳಲು ಹೋಗುವಾಗ ನಿಮ್ಮ ಐಡಿ ಪ್ರೂಫ್ ಕೈಯಲ್ಲಿರಲಿ
5. ಮೊಬೈಲಿನಲ್ಲಿ (Mobile)ನಿಮಗೆ ಬಂದಿರುವ ಮೆಸೆಜ್ ರೆಡಿ ಇಟ್ಟು ಕೊಳ್ಳಿ.


ಇದನ್ನೂ ಓದಿ : "ಉದ್ಯೋಗ ಕಳೆದುಕೊಂಡ ದುಡಿಯುವ ವರ್ಗಕ್ಕೆ ನೆರವಾಗಿ"-ಸಿಎಂಗೆ ಸಿದ್ಧರಾಮಯ್ಯ ಮನವಿ


6. ಲಸಿಕೆ ಹಾಕಿಸಿಕೊಳ್ಳಲು ದ್ವಿಚಕ್ರ ವಾಹನ, ಕಾರ್ ಯಾವುದನ್ನು ಬೇಕಾದರೂ ಬಳಸಬಹುದು
7. ಮಧ್ಯ ರಸ್ತೆಯಲ್ಲಿ ಪೊಲೀಸರು ಖಂಡಿತಾ ನಿಮ್ಮನ್ನು ತಡೆಯುತ್ತಾರೆ. ಗಾಬರಿಯಾಗಿ ಓಡಬೇಡಿ.
8. ಯಾವ ಉದ್ದೇಶಕ್ಕೆ ಮನೆಯಿಂದ ಹೊರಬಂದಿದ್ದೀರಿ ಎಂಬುದನ್ನು ಪೊಲೀಸರಿಗೆ ವಿವರಿಸಿ.
9. ಪೊಲೀಸರು ಲಸಿಕೆಯ ಮೆಸೆಜ್ ತೋರಿಸಲು ಹೇಳಿದರೆ ಅದನ್ನು ಮೊಬೈಲಿನಿಂದ ತೋರಿಸಿ.
9. ನಿಮ್ಮ ಐಡಿ ಪ್ರೂಫ್ ಕೈಯಲ್ಲಿಟ್ಟುಕೊಳ್ಳಿ. ವೆರಿಫೈ ಮಾಡಬೇಕೆಂದು ಪೊಲೀಸರು ತಿಳಿಸಿದರೆ ಐಡಿ ಪ್ರೂಪ್ ತೋರಿಸಿ.
10. ಲಸಿಕೆ ಹಾಕುವಾಗ ಜೊತೆಗೊಬ್ಬರು ಇದ್ದರೂ ಪೊಲೀಸರು ಅಡಚಣೆ ಉಂಟು ಮಾಡುವುದಿಲ್ಲ.
11. ನೆನಪಿರಲಿ. ಮಾಸ್ಕ್ (Mask) , ಸಾನಿಟೈಸರ್ ಜೊತೆಗಿರಲಿ. ಕರೋನಾ ಮಾರ್ಗದರ್ಶಿ (Corona guidelines) ಸೂತ್ರಗಳನ್ನು ಎಲ್ಲಾ ಕಡೆ ಪಾಲನೆ ಮಾಡಿ.
12. ಪೊಲೀಸರ ಜೊತೆ ವ್ಯವಹರಿಸುವಾಗ ಸಾಮಾಜಿಕ ದೂರ ಕಾಯ್ದುಕೊಳ್ಳಿ. ಅನಾವಶ್ಯಕ ವಾಗ್ವಾದಕ್ಕೆ ಇಳಿಯಬೇಡಿ.


ಇದನ್ನೂ ಓದಿ : Lockdown New Guidelines : 14 ದಿನಗಳ 'ಸಂಪೂರ್ಣ ಲಾಕ್ ಡೌನ್' ಮಾರ್ಗಸೂಚಿಯಲ್ಲಿ ಬದಲಾವಣೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.