ಹುಬ್ಬಳ್ಳಿ: ವಿಶ್ವದಲ್ಲೇ ಅತೀ ಉದ್ದವಾದ ಪ್ಲಾಟ್ ಫಾರ್ಮ್ ಹೊಂದಿದ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ, ನೈರುತ್ಯ ರೈಲ್ವೆ ನಿಲ್ದಾಣ ಈಗ ಮತ್ತೊಂದು ಅವಾರ್ಡ್ ಪಡೆದಿದ್ದು, ಸ್ವಚ್ಛತಾ ಪಾಡಾ 2023 ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡಿದೆ.


COMMERCIAL BREAK
SCROLL TO CONTINUE READING

ಇಂದು ಏನೆಲ್ಲಾ ಮಾಡಬಹುದು ಆದರೆ ಸ್ಪಷ್ಟತೆ ಕಾಪಾಡಿಕೊಳ್ಳುವುದು ಎಂದರೆ ದೊಡ್ಡ ಸವಾಲೇ ಸರಿ. ಸರ್ಕಾರ ಸಂಘ ಸಂಸ್ಥೆಗಳು ಪರಿಸರ ಕಾಪಾಡಿಕೊಳ್ಳಲು ಜಾಗೃತಿ ಜೊತೆಗೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡಿದರು ಪರಿಣಾಮವಾಗಿ ಜಾರಿಗೆ ಬರಲ್ಲ. ಆದರೆ ಸ್ವಚ್ಚತೆಯನ್ನ ಅಚ್ಚು ಕಟ್ಟಾಗಿ ಕಾಪಾಡಿಕೊಂಡು ಬಂದ ನೈರುತ್ಯ ರೈಲ್ವೆ ಯಶಸ್ವಿಯಾಗಿದೆ. 


ಇದನ್ನೂ ಓದಿ-ಚಿಕ್ಕೋಡಿ ಪಟ್ಟಣದಲ್ಲಿ ನಿನ್ನೆ ಪ್ರಯಾಣಿಕರ ಪರದಾಟ


ಹೌದು,,, ಸ್ವಚ್ಚತಾ ಪಾಡಾ 2023 ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡರೆ,  ಈಶ್ಯಾನ ಹಾಗೂ ದಕ್ಷಿಣ ಸೆಂಟ್ರಲ್ ರೈಲ್ವೆ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ. ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಚ್ಛತಾ ಪಾಡಾ 2023 ಅಭಿಯಾನ ಆರಂಭವಾಗಿತ್ತು. ಈ ಅಭಿಯಾನದಲ್ಲಿ ರೈಲ್ವೆ ಇಲಾಖೆಯ ರೈಲ್ವೆ ನಿಲ್ದಾಣ , ರೈಲ್ವೆ ಹಳಿಗಳು , ಕಚೇರಿಗಳು ಸ್ವಚ್ಛವಾಗಿಡುವುದು, ಪ್ರಯಾಣಿಕರ ಹಾಗೂ  ರೈಲ್ವೆ ಸಿಬ್ಬಂದಿಗಳನ್ನು ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ದಿನನಿತ್ಯದ ವರದಿಗಳ ಮೌಲ್ಯಮಾಪನದ ಆಧಾರದ ಮೇಲೆ ನೈಋತ್ಯ ರೈಲ್ವೆಯು ಎಲ್ಲಾ ವಲಯ ರೈಲ್ವೆ ಗಳಲ್ಲಿ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿದೆ. 
ಇದಕ್ಕೆ ಪ್ರಯಾಣಿಕರು ಫುಲ್ ಫಿದಾ ಆಗಿದ್ದಾರೆ.


ಇದನ್ನೂ ಓದಿ-ದುರ್ಘಟನೆಗೆ ಕಾರಣರಾದ ಅಧಿಕಾರಿಗಳು ಅಮಾನತು


2 ಸೆಪ್ಟೆಂಬರ್ 16 ,2023 ರಂದು ಬೆಂಗಳೂರಿನ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಸ್ವಚ್ಛತಾ ಪಾಡ -2023 ಗೆ ಚಾಲನೆ ನೀಡಿದ್ದರು. ರೈಲ್ವೆ ನಿಲ್ದಾಣಗಳು ಮತ್ತು ಇತರ ಆವರಣಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಹೆಚ್ಚಿಸಲು ಸಕ್ರಿಯವಾಗಿ ಭಾಗವಹಿಸಿದವು. ನೈಋತ್ಯ ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು 915 ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಅಭಿಯಾನದಲ್ಲಿ 23,744 ಜನರು ಭಾಗವಹಿಸಿದ್ದು, ಬರೊಬ್ಬರಿ 5.27 ಕೋಟಿ ಚ.ಕಿ ಪ್ರದೇಶ ಸ್ವಚ್ಛಗೋಳಿಸಿದ್ದಾರೆ. ಈ ಸ್ವಚ್ಚತಾ ಅಭಿಯಾನದಲ್ಲಿ  252 ಮರಗಳ ನೆಟ್ಟು , 17 ಟನ್ ಪ್ಲಾಸ್ಟಿಕ್ ತೆಗೆಯಲಾಗಿದೆ, 22 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಸ್ವಚ್ಛತೆ ಕುರಿತು ರೈಲ್ವೆ ನಿಲ್ದಾಣಗಳಲ್ಲಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಈ ಕುರಿತು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಷ್ ಹೆಗಡೆ ಮಾಹಿತಿ ನೀಡಿದರು.


ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿಪ್ರಯಾಣಿಕರಿಗೆ ಬಿತ್ತಿ ಪತ್ರ ಹಾಗೂ ಕರ ಪತ್ರ ಹಂಚಲಾಗಿದೆ. ನೈಋತ್ಯ ರೈಲ್ವೆ ಈ ಸಾಧನೆಗೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಭಾಗವಹಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದು, ಸ್ವಚ್ಚತಾ ಪಾಡಾ 2023 ಮೊದಲ ಸ್ಥಾನ ಪಡೆದ ನೈಋತ್ಯ ರೈಲ್ವೆ ವಲಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು ನಿಜಕ್ಕೂ ಇದೊಂದು ಮರೆಯಲಾಗದ ಸಾಧನೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.