ಹುಬ್ಬಳ್ಳಿ : ನಿನ್ನೆಯಷ್ಟೆ ತಾನೇನು ಮಾಡೇ ಇಲ್ಲ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದ ವಸೀಂ ಪಠಾಣ್ ಇಂದು ಪೊಲೀಸರೆದರು ತಪ್ಪೊಪ್ಪಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಹುಬ್ಬಳ್ಳಿ ನಗರದಲ್ಲಿ ನಡೆದ ಗಲಭೆಗೆ ಸಂಭಂದಿಸಿದಂತೆ ಖಾಕಿ ಡ್ರಿಲ್ ವೇಳೆ ಪಠಾಣ್ ಸ್ಪೋಟಕ ಸತ್ಯ ಕಕ್ಕಿದ್ದಾನೆ. ವಾಟ್ಸ್ ಆಪ್ ಗ್ರೂಫ್ ರಚಿಸಿದ್ದು ನಿಜ. ವಸೀಂ ಭೇಪಾರಿ, ತುಫೆಲ್ ಮಲ್ಲಾ ಜೊತೆ ಸೇರಿ ಮಸಲತ್ತು ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾನೆ. 


ಇದನ್ನೂ ಓದಿ : ಹುಬ್ಬಳ್ಳಿ ಗಲಭೆ: ‘ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ?’


ಅಷ್ಟೊಂದು ದೊಡ್ಡ ಪ್ರಮಾಣ ಕಲ್ಲು ಬಂದಿದ್ದು ಹೇಗೆ ಎಂದು ಪೋಲೀಸರ ಪ್ರಶ್ನೆಗೆ?


ಉತ್ತರಿಸಿದ ವಸೀಂ, ಅದು ನಂಗೆ ಗೊತ್ತಿಲ್ಲ, ಆದ್ರೇ ಪೊಲೀಸರು ಬಗ್ಗದೇ ಹೋದ್ರೆ ಗಲಾಟೆ ಮಾಡೋಣ, ಪ್ರತಿಭಟನೆ ಮಾಡೋಣ ಎಂದು ಎಲ್ಲರಿಗೂ ಹೇಳಿದ್ದು ನಿಜ. ಬರುವಾಗ ಎಲ್ಲರೂ ಕಲ್ಲು ಹಿಡಿದುಕೊಂಡು ಬಂದಿರಬಹುದು ಎಂದು ಹೇಳಿದ್ದಾನೆ. 


ಹೀಗಾಗಿ ಪೊಲೀಸರು ವಸೀಂ ಮೊಬೈಲ್ ಜಪ್ತಿ ಮಾಡಿ ಜೈಲಿಗೆ ಕಳಹುಸಿದ್ದಾರೆ. ಇಂದು ಮತ್ತೆ ಆತನನ್ನ ಪೊಲೀಸ್ ಕಸ್ಟಡಿಗೆ ಕೇಳೋ ಸಾಧ್ಯತೆ ಇದೆ. ಹೆಚ್ಚಿನ ವಿಚಾರ ಅಗತ್ಯವಿರುವ ಹಿನ್ನಲೆ, ಪೊಲೀಸರು ಇಂದೇ ಕಸ್ಟಡಿಗೆ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ : ಹುಬ್ಬಳ್ಳಿ ಗಲಭೆಗೂ ಕೆಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆಗೂ ಸಾಮ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ


ಏಪ್ರಿಲ್ 16 ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಓರ್ವ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ಗುಂಪು ಇದ್ದಕ್ಕಿದ್ದಂತೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ಠಾಣೆ ಮತ್ತು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿತು. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ 12 ಪ್ರಕರಣಗಳು ದಾಖಲಾಗಿದ್ದು, 134 ಮಂದಿಯನ್ನು ಬಂಧಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.