ಸ್ಕ್ರೂಡೈವರ್ ನಿಂದ ಚುಚ್ಚಿ ಕೊಲೆ.. ಬಾತ್ ರೂಂ ಪಿಟ್ ನಲ್ಲಿತ್ತು ಪತ್ನಿಯ ಶವ
ಜಯಮ್ಮ (52) ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ. ತುಮಕೂರು ಜಿಲ್ಲೆ ಕುದೂರು ಸಮೀಪದ ಕೆಂಬಳಲು ಕಾಲೋನಿಯಲ್ಲಿ ಈ ದುರ್ಘಟನೆ ಜರುಗಿದೆ.
ತುಮಕೂರು: ಕುಡಿದ ಮತ್ತಿನಲ್ಲಿ ಪತ್ನಿಗೆ (Wife Murder) ಸ್ಕ್ರೂಡೈವರ್ ನಿಂದ ಚುಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ತುಮಕೂರಿನಲ್ಲಿ ನಡೆದಿದೆ. ಪತ್ನಿಯನ್ನ ಕೊಲೆಗೈದು ಬಾತ್ ರೂಂ ಪಿಟ್ ನಲ್ಲಿ (Bathroom Pit) ಬಿಸಾಡಿದ ಪತಿರಾಯ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಒಂಟಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ
ಜಯಮ್ಮ (52) ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ. ತುಮಕೂರು ಜಿಲ್ಲೆ ಕುದೂರು ಸಮೀಪದ ಕೆಂಬಳಲು ಕಾಲೋನಿಯಲ್ಲಿ ಈ ದುರ್ಘಟನೆ ಜರುಗಿದೆ.
ಜಯಮ್ಮ ಪತಿ ನಾಗರಾಜ್ (58) ತನ್ನ ಹೆಂಡತಿಗೆ ಸ್ಕ್ರೂಡೈವರ್ ನಿಂದ (Tumkuru murder) ಚುಚ್ಚಿ ಕೊಲೆ ಮಾಡಿದ್ದಾನೆ. ಜಯಮ್ಮಳನ್ನ ಎರಡನೇ ಮದುವೆಯಾಗಿದ್ದ ನಾಗರಾಜ್, ಕಳೆದ ಮೂರು ದಿನಗಳ ಹಿಂದೆ ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಗಲಾಟೆ ಮಾಡಿಕೊಂಡಿದ್ದ.
ಗಲಾಟೆ ವೇಳೆ ಸ್ಕ್ರೂಡೈವರ್ ನಿಂದ ಪತ್ನಿಗೆ ಮನಬಂದಂತೆ ಚುಚ್ಚಿ ಕೊಲೆಗೈದಿದ್ದಾನೆ. ಬಳಿಕ ಮನೆ ಹಿಂಬದಿಯಿದ್ದ ಬಾತ್ ರೂಂ ಪಿಟ್ ಗೆ ಮೃತದೇಹ (Dead body) ಎಸೆದಿದ್ದನು.
ಇದನ್ನೂ ಓದಿ: Jayamritunjaya Swamiji : 'ನವೀನ್ ಅಣ್ಣನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಕೊಡಬೇಕು'
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.