ಹಾವೇರಿ : ಯುದ್ಧದ ಸಂದರ್ಭದಲ್ಲಿ ನವೀನ್ ಕಳೆದುಕೊಂಡಿದ್ದು ದುಃಖ ತಂದಿದೆ. ಬೇರೆ ಸಮಾಜ ಒಪ್ಪಿದರೆ ಅವರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಅವರ ತಂದೆ ನೋವನ್ನ ತೋಡಿಕೊಂಡಿದ್ದಾರೆ ಎಂದು ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಉಕ್ರೇನ್ ನಲ್ಲಿ ಮೃತ ನವೀನ್ ಮನೆಗೆ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿಗಳು(Jayamritunjaya Swamiji), ಲಿಂಗಾಯತರು ಅಂದ ತಕ್ಷಣ ಎಲ್ಲರೂ ಶ್ರೀಮಂತರು ಅಂದುಕೊಳ್ಳುತ್ತಾರೆ. ಲಿಂಗಾಯತರಿಗೆ ಒಬಿಸಿ ಸಿಕ್ಕಿದ್ದರೆ ಆತ ವಿದೇಶಕ್ಕೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ರಿಸರ್ವೇಷನ್ ಇಲ್ಲದ ಕಾರಣಕ್ಕೆ ಓರ್ವ ಪ್ರತಿಭಾವಂತನನ್ನ ನಾವು ಕಳೆದುಕೊಂಡಿದ್ದೇವೆ. ಅದಕ್ಕೆ ನಾವು ಲಿಂಗಾಯತರ ಒಳಿತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈಗಲಾದರೂ ಸರ್ಕಾರ ಒಂದು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಮೀಸಲಾತಿ ಕೊಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರೆಯುತ್ತೆ. ಲಿಂಗಾಯತರಲ್ಲಿ ಕೆಲವರು ಮಾತ್ರ ಶ್ರೀಮಂತರಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ: ಒಂಟಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ
ನವೀನ್ ಪಾರ್ಥಿವ ಶರೀರವನ್ನ ಆದಷ್ಟು ಬೇಗ ತರಲಿ. ನವೀನ್(Naveen) ಅಣ್ಣ ಸಹ ಗೋಲ್ಡ್ ಮೇಡಲಿಸ್ಟ್ ಇದ್ದಾರೆ. ಅವರಿಗೆ ಅನುಕಂಪದ ಆಧಾರದ ಮೇಲೆ ಒಂದು ಕೆಲಸ ಕೊಡಬೇಕು. ಅವರ ತಂದೆಯೂ ಸಹ ನಮ್ಮ ಮೀಸಲಾತಿ ಹೋರಾಟಕ್ಕೆ ಸಾಥ್ ಕೊಡೋದಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.