ಬೆಂಗಳೂರು: ನಾನು ರಾಜೀನಾಮೆ ಕೊಡಲು ಸಿದ್ಧ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಗರದಲ್ಲಿ ಇಂದು 6 ಭೋಗಿಯ ಮೆಟ್ರೋ ರೈಲಿಗೆ ಚಾಲನೆ ನೀಡಿ ಬಳಿಕ, ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರೇ ತಮ್ಮ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ತಾವು ರಾಜಿನಾಮೆ ಸಿದ್ಧ ಎಂದಿದ್ದಾರೆ.


"ಕಾಂಗ್ರೆಸ್​ ಶಾಸಕರು ನಮ್ಮ ನಾಯಕ ಸಿದ್ಧರಾಮಯ್ಯ ಎನ್ನುತ್ತಾರೆ. ಈ ವಿಚಾರಗಳನ್ನೆಲ್ಲಾ ಕಾಂಗ್ರೆಸ್​ ನಾಯಕರೇ ನೋಡಿಕೊಳ್ಳಬೇಕು. ಇದಕ್ಕೂ ನನಗೂ ಸಂಬಂಧವಿಲ್ಲ. ಕಾಂಗ್ರೆಸ್ ಶಾಸಕರು ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಇವರನ್ನು ಕಾಂಗ್ರೆಸ್ ನಾಯಕರೇ ನಿಯಂತ್ರಿಸಬೇಕು" ಎಂದಿದ್ದಾರೆ.



ಮುಂದುವರೆದು ಮಾತನಾಡಿದ ಅವರು, "ನಾನು ನನ್ನ ಧಾಟಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಕಾಮಗಾರಿಗೆ ಮೀಸಲಿಡಲಾಗಿದೆ. ಈ ಬಗ್ಗೆ ಪಾರ್ಟಿ ಮೀಟಿಂಗ್ ನಲ್ಲಿ ಮಾತನಾಡಲಿದ್ದೇನೆ. ಡಿಸಿಎಂ ನಾನು ಒಟ್ಟಿಗೆ ಕೆಲಸ ಮಾಡ್ತಿದ್ದೇವೆ. ನಮ್ಮ ನಡುವೆ ಯಾವುದೇ ತೊಂದರೆ ಇಲ್ಲ. ಆದರೆ ಶಾಸಕರ ಸಹಕಾರವೂ ಅಗತ್ಯ. ಒಂದು ವೇಳೆ ನನ್ನ ಯೋಜನೆಗಳು ಯಶಸ್ವಿ ಆಗದಿದ್ದರೆ ಕ್ವಿಟ್ ಮಾಡೋಕೆ ಸಿದ್ಧ" ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.