ಬೆಂಗಳೂರು: ಸಂಪುಟದಿಂದ ನನ್ನನ್ನು ತೆಗೆಯುವುದಾದರೆ ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಹೇಳಿದ್ದಾರೆ. ಬುಧವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಂಪುಟದಲ್ಲಿ ಹಿರಿಯರನ್ನು ಕೈಬಿಡಬೇಕೆಂಬ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.


COMMERCIAL BREAK
SCROLL TO CONTINUE READING

'ನಾನು ಧಾರಾಳವಾಗಿ ಸಚಿವ ಸ್ಥಾನ(Resignation) ಬಿಟ್ಟುಕೊಟ್ಟು ಪಕ್ಷದ ಸಂಘಟನೆಗಾಗಿ ದುಡಿಯಲು ಸಿದ್ಧನಿದ್ದೇನೆ. ಸಂಪುಟದಿಂದ ನನ್ನನ್ನು ಕೈಬಿಡುವುದಿದ್ದರೆ ನಾನು ಕೂಡ ಇದಕ್ಕೆ ಸಿದ್ಧನಾಗಿದ್ದೇನೆ. ಅಧಿಕಾರವನ್ನು ತ್ಯಾಗ ಮಾಡಿ ಪಕ್ಷದ ಸಂಘಟನೆಗೆ ನಾನು ಶ್ರಮಿಸುತ್ತೇನೆ. ಈ ಅಧಿಕಾರ ಎಷ್ಟರ ಮಟ್ಟಿಗೆ ಒಳ್ಳೆಯದು ಮತ್ತು ಕೆಟ್ಟದು ಎನ್ನುವುದು ನನಗೆ ಗೊತ್ತಿದೆ' ಅಂತಾ ಹೇಳಿದ್ದಾರೆ.


ಇದನ್ನೂ ಓದಿ: 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿʼ: ಕಾಂಗ್ರೆಸ್ ನಾಯಕರಿಗೆ ತಿವಿದ ಎಚ್​ಡಿಕೆ


'ಪಕ್ಷವು ಹಿರಿಯ ಸಚಿವರನ್ನು ಕೈಬಿಡುವುದಾದರೆ ಮೊದಲಿಗೆ ನಾನೇ ತಯಾರಿದ್ದೇನೆ. ಹಿರಿಯರನ್ನು ಕೈಬಿಟ್ಟರೆ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡುತ್ತೇವೆ. ಪಕ್ಷದಲ್ಲಿ ಹಿಂದುಳಿದ ವರ್ಗಗಳ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಜನವರಿ 5 ರಂದು ರಾಜ್ಯಮಟ್ಟದ ಹಿಂದುಳಿದ ವರ್ಗದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ. ಸಮಾವೇಶ ನಡೆಸುವ ಸ್ಥಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel), ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಸೂಚಿಸಲಿದ್ದಾರೆ. ಹಿಂದುಳಿದ ವರ್ಗದವರ ಬಗೆಗಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಲಿದೆ' ಅಂತಾ ಇದೇ ವೇಳೆ ಈಶ್ವರಪ್ಪ ತಿಳಿಸಿದರು.


ವಿಧಾನ ಪರಿಷತ್ ಚುನಾವಣೆ(Karnataka MLC Election)ಯಲ್ಲಿ ನಮಗೆ ಬಹಳ ದೊಡ್ಡ ಗೆಲುವು ಸಿಕ್ಕಿದೆ. ಇದಕ್ಕಾಗಿ ನಾವು ರಾಜ್ಯದ ಜನರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ. ಸಿಂಧಗಿ ಉಪಚುನಾವಣೆಯಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟಿದ್ದಕ್ಕೆ ಜನರಿಗೆ ನಾವು ಧನ್ಯವಾದ ಹೇಳುತ್ತೇವೆ. ಶಿವಮೊಗ್ಗದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಾವು ಮುಂದಿನ ಚುನಾವಣೆ ಮತ್ತು ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.


ಇದನ್ನೂ ಓದಿ: Mekedatu Project: ಸಿದ್ದರಾಮಯ್ಯ & ಡಿಕೆಶಿ ಸುಳ್ಳಿನ ಜಾತ್ರೆ ಆರಂಭಿಸಿದ್ದಾರೆಂದು ಬಿಜೆಪಿ ವ್ಯಂಗ್ಯ


ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ


ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya), ‘ಎರಡ್ಮೂರು ಬಾರಿ ಸಚಿವರಾಗಿದ್ದವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಲಿ. ಆ ಮೂಲಕ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಿ’ ಅಂತಾ ಹೇಳಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.