Mekedatu Project: ಸಿದ್ದರಾಮಯ್ಯ & ಡಿಕೆಶಿ ಸುಳ್ಳಿನ ಜಾತ್ರೆ ಆರಂಭಿಸಿದ್ದಾರೆಂದು ಬಿಜೆಪಿ ವ್ಯಂಗ್ಯ

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜನವರಿ 9 ರಿಂದ 19ರವರೆಗೆ ಕಾಂಗ್ರೆಸ್ ಪಾದಯಾತ್ರೆ ಆಯೋಜಿಸಿದೆ.

Written by - Zee Kannada News Desk | Last Updated : Dec 29, 2021, 01:37 PM IST
  • ಮೇಕೆದಾಟು ಪಾದಯಾತ್ರೆಗೆ ಹೊರಟಿರುವ ಕಾಂಗ್ರೆಸ್ ನೀರಿನ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ
  • ಮೇಕೆದಾಟು ಪಾದಯಾತ್ರೆ ನೆಪದಲ್ಲಿ ಡಿಕೆಶಿ ಹಳೆ ಮೈಸೂರು ಭಾಗದ ಜನರ ಕಣ್ಣಿಗೆ ಹರಳೆಣ್ಣೆ ಹಾಕಲು ಹೊರಟಿದ್ದಾರೆ
  • ಸುಳ್ಳಿನಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ತಿವಿದ ಬಿಜೆಪಿ
Mekedatu Project: ಸಿದ್ದರಾಮಯ್ಯ & ಡಿಕೆಶಿ ಸುಳ್ಳಿನ ಜಾತ್ರೆ ಆರಂಭಿಸಿದ್ದಾರೆಂದು ಬಿಜೆಪಿ ವ್ಯಂಗ್ಯ  title=
ಕಾಂಗ್ರೆಸ್ ನೀರಿನ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ

ಬೆಂಗಳೂರು: ಮೇಕೆದಾಟು ಯೋಜನೆ(Mekedatu Project) ಜಾರಿ ವಿಚಾರದಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಿರುದ್ಧ ಬಿಜೆಪಿ ಕಿಡಿಕಾರಿದೆ. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜನವರಿ 9 ರಿಂದ 19ರವರೆಗೆ ಕಾಂಗ್ರೆಸ್ ಪಾದಯಾತ್ರೆ ಆಯೋಜಿಸಿದೆ. #ಸುಳ್ಳಿನಜಾತ್ರೆ ಹ್ಯಾಶ್ ಟ್ಯಾಗ್ ಬಳಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

‘ಸುಳ್ಳು ಕಾಂಗ್ರೆಸ್(Congress) ಮನೆ ದೇವರು ಎಂಬುದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಮೇಕೆದಾಟು ಪಾದಯಾತ್ರೆ(Mekedatu Yatra)ಗೆ ಹೊರಟಿರುವ ಕಾಂಗ್ರೆಸ್ ನೀರಿನ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಬೆಂಗಳೂರು ನಗರದ ಶೇ.60ರಷ್ಟು ನೀರಿನ ಪೂರೈಕೆ ಈಗಲೂ ಅಂತರ್ಜಲವನ್ನು ಆಧರಿಸಿದೆಯಂತೆ. ಈಗ ಕಾವೇರಿಯನ್ನು ಹರಿಸುವುದಕ್ಕೆ ಹೊರಟಿದ್ದಾರೆ. ಎಂಥಹ ಸುಳ್ಳು!’ ಅಂತಾ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಅಧಿಕಾರಕ್ಕೆ ಬರುವ ಭ್ರಮೆಯಲ್ಲಿರುವ ಸಿದ್ದರಾಮಯ್ಯ: ಸಚಿವ ವಿ.ಸುನೀಲ್ ಕುಮಾರ್

‘ರಾಜ್ಯದಲ್ಲಿ 5 ವರ್ಷಗಳ‌ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇದಾದ ಬಳಿಕ ಜೆಡಿಎಸ್(JDS) ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದರು. ಆಗ ಇದೇ ಭ್ರಷ್ಟಾಧ್ಯಕ್ಷ‌ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದರು. ಆಗೇಕೆ ಕಾಂಗ್ರೆಸ್ ನಾಯಕರಿಗೆ ಮೇಕೆದಾಟು ಬಗ್ಗೆ ಕಾಳಜಿ ಇರಲಿಲ್ಲ? ಈಗ #ಸುಳ್ಳಿನಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಿ’ ಅಂತಾ ಬಿಜೆಪಿ ತಿವಿದಿದೆ.

‘ಮೇಕೆದಾಟು ಯೋಜನೆ(Mekedatu Project) ವಿಳಂಬಕ್ಕೆ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ನೇರ ಕಾರಣ. ನೀರಾವರಿ ಮಂತ್ರಿಯಾಗಿದ್ದ ಎಂ.ಬಿ.ಪಾಟೀಲ್(MB Patil) ಅವರಿಗೆ ಯೋಜನೆಯ ಶ್ರೇಯಸ್ಸು ಸಿಗಬಹುದೆಂಬ ಕಾರಣಕ್ಕೆ ಡಿಪಿಆರ್ ಸಕಾಲದಲ್ಲಿ ಒಪ್ಪಿಗೆಯಾಗದಂತೆ ಡಿಕೆಶಿ ನೋಡಿಕೊಂಡರು. ಈಗ ಕಾವೇರಿ ನಮ್ಮ ಹಕ್ಕು ಎಂಬ #ಸುಳ್ಳಿನಜಾತ್ರೆ ಆರಂಭಿಸಿದ್ದಾರೆ’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಭಾರತ ವಿಶ್ವಗುರು ಆಗಬೇಕೆನ್ನುವವರಿಂದ ಉನ್ನತ ಶಿಕ್ಷಣ ಉಳ್ಳವರ ಪಾಲಾಗುತ್ತಿದೆ: ಎಚ್​ಡಿಕೆ

‘ಕಾಂಗ್ರೆಸ್(Congress) ನಡಿಗೆ ಕೃಷ್ಣೆಯ ಕಡೆಗೆ ಎಂದು ಸಿದ್ದರಾಮಯ್ಯ ಉತ್ತರ ಕರ್ನಾಟಕದ ಜನತೆಗೆ ಮಂಕುಬೂದಿ ಎರಚಿದರು. ಈಗ ಮೇಕೆದಾಟು ಪಾದಯಾತ್ರೆ ನೆಪದಲ್ಲಿ ಡಿಕೆಶಿ ಹಳೆ ಮೈಸೂರು ಭಾಗದ ಜನರ ಕಣ್ಣಿಗೆ ಹರಳೆಣ್ಣೆ ಹಾಕಲು ಹೊರಟಿದ್ದಾರೆ. ಜೋಡಿ ಅಂದರೆ ಹೀಗಿರಬೇಕು! #ಸುಳ್ಳಿನಜಾತ್ರೆ ಯನ್ನೇ ಆರಂಭಿಸಿದ್ದಾರೆ’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News