ಬೆಂಗಳೂರು: ನಾನು ಹುಟ್ಟಿರುವುದೇ ರೈತರಿಗಾಗಿ, ಹಾಗಾಗಿ ರೈತರಿಗಾಗಿಯೇ ಸಾಯುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. 


COMMERCIAL BREAK
SCROLL TO CONTINUE READING

ಇಲ್ಲಿನ ಯಶವಂತಪುರದ ಎಪಿಎಂಸಿ ಯಾರ್ಡ್​ನಲ್ಲಿ ಸಮ್ಮಿಶ್ರ ಸರ್ಕಾರದ ಮಹತ್ವದ ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, 38 ಸೀಟ್ ಹಿಡ್ಕೊಂಡು ಏನು ಮಾಡ್ತಿದೀರಾ? ಎಂದು ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದರು. 


ನಮ್ಮ ಬಗ್ಗೆ ಯಡಿಯೂರಪ್ಪನವರು ಮಾತನಾಡುತ್ತಾರೆ. ನಮ್ಮ ಬಳಿ 38 ಸ್ಥಾನಗಳೇ ಇರೋದು. ಒಪ್ಪ್ಕೊಳ್ತೀನಿ. ಆದ್ರೆ ಈ ಹಿಂದೆ ನೀವು ಮಾಡಿದ್ದಾದರೂ ಏನು? ನನ್ನ ಬಗ್ಗಿ ನೀವು ಟೀಕೆ ಮಾಡಿದಾಕ್ಷಣ ನಾನು ಎಲ್ಲಿಯೂ ಹೆದರಿ ಓಡಿಹೋಗಲ್ಲ. ನಮ್ಮ ಸಂಖ್ಯೆ 38 ಇರಬಹುದು. ಆದರೆ 80 ಜನರ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದೇವೆ. ಯಡಿಯೂರಪ್ಪ ಅವರು ವೀರಾವೇಶದಲ್ಲಿ ಬೇಕೆಂದ ಹಾಗೆ ಮಾತಾಡಿದ್ದಾರೆ. ಆದರೆ ಯಾವುದೇ ವಿಚಾರ ಮಾತನಾಡುವಾಗ ಸ್ವಲ್ಪ ಯೋಚನೆ ಮಾಡಿ‌ ಮಾತಾಡಿ. ನೀವು ಏನೇನು ಮಾಡಿದ್ದೀರಾ ಎಲ್ಲಾ ಗೊತ್ತಿದೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.


ಮುಂದುವರೆದು ಮಾತನಾಡಿದ ಅವರು, ಬಿಜೆಪಿ ಅವರಿಗೆ ರೈತರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಅಧಿಕಾರ ಇಲ್ಲ ಎಂದು ಹೇಳಿದರು.