ಹಾವೇರಿ : 2023ರ ವಿಧಾನಸಭಾ ಚುನಾವಣೆ(Karnataka Assembly Elections 2023)ಯಲ್ಲಿ ಮುಖ್ಯಮಂತ್ರಿಯವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೂರು ಬಾರಿ ಶಿಗ್ಗಾಂವಿ ಕ್ಷೇತ್ರದ ಜನ ಗೆಲುವು ನೀಡಿದ್ದಾರೆ. ಈ ಬಾರಿಯೂ ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಉಚ್ಛನ್ಯಾಯಾಲಯದ ತೀರ್ಪಿನ ಪಾಲನೆ ಆಗಬೇಕು :


ಹಿಜಾಬ್ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ(Basavaraj Bommai), ಬಹಳ ವರ್ಷಗಳಿಂದ ಶಾಲೆಗಳಲ್ಲಿ ಶಾಲಾ ಸಮವಸ್ತ್ರ ನಿಯಮವನ್ನು ಪಾಲಿಸಲಾಗುತ್ತಿದೆ. ಕೆಲವು ಶಕ್ತಿಗಳ ಪ್ರಚೋದನೆಯಿಂದ ಉಚ್ಛ ನ್ಯಾಯಾಲಯದ ತೀರ್ಪಿನ ನಂತರವೂ ಗೊಂದಲವೆದ್ದಿದೆ. ಆದಾಗ್ಯೂ ರಾಜ್ಯದಲ್ಲಿ ಶಾಂತಿ,ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ. ಉಚ್ಛ ನ್ಯಾಯಾಲಯದ ತೀರ್ಪಿನ ಪಾಲನೆ ಆಗಬೇಕು, ಪ್ರಚೋದನೆ ಮಾಡಬಾರದು ಎಂಬುದು ಜನಾಭಿಪ್ರಾಯವಾಗಿದೆ.  ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದರು.


ಇದನ್ನೂ ಓದಿ : Basavaraj Bommai : '2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಗಲಿದೆ ಬಹುಮತ'


ಶಾಂತಿ ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ :


ದೇವಸ್ಥಾನ(Temple)ದ ಬಳಿ ಅನ್ಯಧರ್ಮದವರ ವ್ಯಾಪಾರ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು,  ಈ ಬಗ್ಗೆ 2002ರಲ್ಲಿ  ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸ್ಪಷ್ಟ ಆದೇಶವಿದೆ. ಈ ಕಾನೂನು ಹೊಸದಾಗಿ ಆಗಿರುವುದಲ್ಲ. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಪ್ರದೇಶದಲ್ಲಿ ಕಾಂಟ್ರಾಕ್ಟ್ ಸಬ್ ಲೀಸ್ ಆಗಿರುತ್ತದೆ.  ಎಲ್ಲ ಜನರೂ ಶಾಂತಿ ಸೌಹಾರ್ದತೆಯಿಂದ ಕುಳಿತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.


ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ(Siddaramaiah) ಅವರು  ಹೆಣ್ಣುಮಕ್ಕಳ ಶಿರವಸ್ತ್ರದ ಬಗ್ಗೆ ಮಾಡಿದ ವಿವಾದಿತ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಆದರೆ ಶಾಲಾ ಸಮವಸ್ತ್ರದ ನೀತಿಯ ಬಗ್ಗೆ ಉಚ್ಛನ್ಯಾಯಾಲಯದ ಸ್ಪಷ್ಟ ಆದೇಶವಿದೆ. ಈ ನಿಟ್ಟಿನಲ್ಲಿ ಪುನ: ಪ್ರಚೋದನೆ ಕೊಡುವಂತಹ ಕೆಲಸ ಆಗಬಾರದು ಎಂದು ತಿಳಿಸಿದರು.


ಇದನ್ನೂ ಓದಿ : ಕೇಸರಿ ವಸ್ತ್ರ, ಕುಂಕುಮ, ಪೇಟ ಎಲ್ಲದರ ಮೇಲೂ ಸಿದ್ದರಾಮಯ್ಯಗೆ ದ್ವೇಷ: ಬಿಜೆಪಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.